ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಬಂಧನವಾಗಬೇಕೆಂದು ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸಿದೆ. ಈಶ್ವರಪ್ಪ ರಾಜೀನಾಮೆ ಅಲ್ಲ, ಬಂಧನ ಆಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅಹೋರಾತ್ರಿ ಧರಣಿ ನಂತರ ಬೆಳಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಎಫ್‍ಐಆರ್ ನಲ್ಲೇ ಈಶ್ವರಪ್ಪ ಅವರನ್ನು ರಕ್ಷಿಸುವ ಕೆಲಸ ಆಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಬೇಕು. ಸಿಎಂ ಬಸವರಾಜ್ ಬೊಮ್ಮಾಯಿಯವರೇ ಸ್ವತಃ ನ್ಯಾಯಾಧೀಶರ ರೀತಿ ಹೇಳಿಕೆ ಕೊಡ್ತಿದಾರೆ. ಸಿಎಂ ಅವರೇ ಈಶ್ವರಪ್ಪ ಏನೂ ತಪ್ಪು ಮಾಡಿಲ್ಲ ಅಂದ್ರೆ, ಪೊಲೀಸರು ಹೇಗೆ ತನಿಖೆ ಮಾಡಲು ಸಾಧ್ಯ? ಮುಖ್ಯಮಂತ್ರಿಗಳೇ ಪೊಲೀಸ್ ಆಡಳಿತಕ್ಕೆ ಕಪ್ಪು ಚುಕ್ಕಿ ಇಡುತ್ತಿದ್ದೀರಿ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: ಡಿಕೆಶಿ ಇಂಧನ ಸಚಿವರಾಗಿದ್ದಾಗ ಭ್ರಷ್ಟಾಚಾರದ #ಲಕ್ಷ್ಮಿಕಟಾಕ್ಷ ಎಷ್ಟಿತ್ತು?’


ಸಂತೋಷ ಪಾಟೀಲ್ ಸಹೋದರ ಏನು ಬೇಡಿಕೆ ಇಟ್ಟಿದ್ದಾರೋ ಆ ಕೆಲಸ ಮೊದಲು ಆಗಬೇಕು. ರಾಜೀನಾಮೆ ಅದೆಲ್ಲ ಗೊತ್ತಿಲ್ಲ, ಈಶ್ವರಪ್ಪ ಬಂಧನವಾಗಬೇಕು. ಸಂತೋಷ್ ಪತ್ನಿಗೆ ಸರ್ಕಾರಿ ಕೆಲಸ ಕೊಡಬೇಕು. ಇನ್ನು  24 ಗಂಟೆ ಪ್ರತಿಭಟನೆ ಮಾಡ್ತೀವಿ ಅಂತಾ ಹೇಳಿದ್ವಿ ಮಾಡುತ್ತಿದ್ದೇವೆ. ಹೈಕೋರ್ಟ್ ಗೇಟ್ ಮುಂಭಾಗದಲ್ಲಿ ಕುಳಿತು ನ್ಯಾಯ ಸಿಗಬೇಕೆಂದು ಪ್ರತಿಭಟನೆ ನಡೆಸುತ್ತಿದ್ದೇವೆ‌. ಈಶ್ವರಪ್ಪ ರಾಜೀನಾಮೆಗೆ ನಮ್ಮ ಪ್ರಿಯಾರಿಟಿ ಇರಲಿಲ್ಲ. ಈಗಲೂ ರಾಜೀನಾಮೆ ಕೊಡ್ತಾರಾ ಅನ್ನೋದು ನನಗೆ ಡೌಟ್ ಇದೆ. ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ದೂರು ದಾಖಲಾಗಬೇಕು. ಬಿಜೆಪಿ ಕಾರ್ಯಕಾರಣಿಯಲ್ಲೂ ಪ್ರತಿಭಟನೆ ಮಾಡ್ತೀವಿ.‌ ಭ್ರಷ್ಟಾಚಾರದ ಹೆಸರು FIR ಹಾಕಿ ಈಶ್ವರಪ್ಪನವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.


ವಿಧಾನಸೌಧದ ಗೋಡೆ ಹೊಡೆದರೆ ಕಾಸು ಕಾಸು ಅನ್ನುತ್ತೆ!


ಬಿಜೆಪಿ ಆಡಳಿತದಲ್ಲಿ ಇಡೀ ವಿಧಾನಸೌಧದ ಗೋಡೆ, ಮೆಟ್ಟಿಲುಗಳು ಕಾಸು ಕಾಸು ಅನ್ನುತ್ತಿವೆ ಎದು ಗೋಡೆಗೆ ಹೊಡೆದು ತೊರಿಸಿದರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬರೀ ಕಾಸು ಕಾಸು ಅನ್ನೋ ಮಾತುಗಳೇ ಕೇಳಿಬರುತ್ತಿವೆ. ಕೆಂಪಣ್ಣ ಯಾರು ಅಂತ ನನಗೆ ಗೊತ್ತಿಲ್ಲ. ಈ ಸಿಸ್ಟಮ್ ಕ್ಲೀನ್ ಮಾಡೋಕೆ ಹೋರಾಟ ಮಾಡ್ತಿದ್ದಾರೆ. ಬಿಬಿಎಂಪಿ ಕಸ ತಗೆಯೋ ಕಂಟ್ರಾಕ್ಟರ್ ಒಬ್ಬರು ಹೇಳಿದ್ದಾರೆ 40% ಅಲ್ಲ 50% ಕಮಿಷನ್ ಎಂದು. ಎಲ್ಲಾ ಪಂಚಾಯತ್ತಿ ಅಫೀಸ್ ನಲ್ಲೂ ಲಂಚ ಲಂಚ ಎಂಬ ಮಾತುಗಳೇ ಕೇಳಿ ಬರ್ತಿವೆ ಎಂದರು‌.


ಇದನ್ನೂ ಓದಿ: 'ತನಿಖೆಗೆ ಮೊದಲೇ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿರುವ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ'


ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್


ಕೆ.ಎಸ್.ಈಶ್ವರಪ್ಪ ಇಂದು ಸಂಜೆ ರಾಜೀನಾಮೆ ನೀಡುತ್ತೇನೆ ಎಂದು ನಿನ್ನೆ ಹೇಳಿದ್ದಾರೆ. ಅವರು ಈಗಲೂ ರಾಜಿನಾಮೆ ಕೊಡುವ ಬಗ್ಗೆ ನಮಗೆ ಅನುಮಾನ ಇದೆ. ಅವರು ಒಬ್ಬ ಸುಳ್ಳಿನ ಫ್ಯಾಕ್ಟರಿಯ ಚೇರ್ಮೆನ್ ಎಂದು ಡಿಕೆಶಿ ಕಿಡಿಕಾರಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.