ಬೆಂಗಳೂರು: ಬಾದಾಮಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ದೂರದ ಊರಿನವರಾದರೂ ಸಹಿತ ಇನ್ನು ಮುಂದೆ ಬಾದಾಮಿ ಕ್ಷೇತ್ರಕ್ಕೆ ಸೇರಿದವನು ಎಂದು ತಿಳಿಸಿದರು.



COMMERCIAL BREAK
SCROLL TO CONTINUE READING

ಈ ಬಾರಿಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು ಚಾಮುಂಡೆಶ್ವರಿಯಲ್ಲಿ ಸೋಲನ್ನು ಅನುಭವಿಸಿದ್ದರು.ಆದರೆ ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗ ಗೆಲವು ಸಾಧಿಸಿಯ ನಂತರ ಇದೇ ಮೊದಲ ಬಾರಿಗೆ ಬಾದಾಮಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ರಾಜಪ್ಪ ಜಲಗೇರಿ ಅವರ ನಿವಾಸಕ್ಕೆ ಭೇಟಿ ನೀಡಿ ಸರ್ಕಾರದ ವತಿಯಿಂದ ರೂ.5 ಲಕ್ಷ ಹಾಗೂ ವೈಯುಕ್ತಿಕವಾಗಿ ರೂ.1 ಲಕ್ಷದ ಚೆಕ್ ಅನ್ನು ಮೃತ ರೈತನ ಕುಟುಂಬದವರಿಗೆ ನೀಡಿ ಸಾಂತ್ವನ ಹೇಳಿದರು.



ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ"ಚಾಮುಂಡೇಶ್ವರಿ ಕ್ಷೇತ್ರದಂತೆ ಇಲ್ಲಿಯೂ ನನ್ನನ್ನು ಸೋಲಿಸಲು ಭಾರಿ ಷಡ್ಯಂತ್ರವೇ ನಡೆಯಿತು. ಆದರೆ ಬಾದಾಮಿ ಕ್ಷೇತ್ರದ ಜನ ಅದನ್ನು ಧಿಕ್ಕರಿಸಿ ನನ್ನ ಕೈ ಹಿಡಿದಿದ್ದಾರೆ. ಇದಕ್ಕೆ ನಾನು ಜೀವನಪರ್ಯಂತ ಋಣಿಯಾಗಿರುತ್ತೇನೆ.ನಾನು ದೂರದ ಊರಿನವನಾದರೂ ಇನ್ನು‌ ಮುಂದೆ ಬಾದಾಮಿ‌ ಕ್ಷೇತ್ರ‌ಕ್ಕೆ ಸೇರಿದವನು. ಚುನಾವಣೆಯಲ್ಲಿ ‌ಬಾದಾಮಿಯ ಜನತೆ ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು" ಎಂದು ತಿಳಿಸಿದರು.