ಕಲಬುರ್ಗಿ:  ಬಿಜೆಪಿ ನಾಯಕರೆಲ್ಲ ಒಟ್ಟಾಗಿ ಬಂದರೂ ಚಿತ್ತಾಪುರ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಅವರು ಚಿತ್ತಾಪುರಕ್ಕೆ ಬಂದು ನನ್ನ ಬಳಿ ಕ್ಷಮೆ ಕೇಳಿಸಬೇಕು ಎಂದು ಮೆರವಣಿಗೆ ಮಾಡಿದರು.
ಆದರೆ ಅವರು ವಿಧಾನಸೌಧದಲ್ಲಿ ಏನು ಮಾಡಿದ್ದರು ಎಂಬುವುದನ್ನು ಒಮ್ಮೆ ಮನವರಿಕೆ ಮಾಡಿಕೊಳ್ಳಲಿ.ಅವರೇ ಚುನಾವಣೆ ಸೋತು ಇಂದು ಚುನಾವಣೆ ಹೇಗೆ ಗೆಲ್ಲಬೇಕು ಎಂದು ಪಾಠ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
➤ಬಾಬುರಾವ್ ಚಿಂಚನಸೂರು ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಉಳಿದ 1.5 ವರ್ಷಕ್ಕೆ ಎಲ್ಲಾ ಬಿಜೆಪಿ ನಾಯಕರನ್ನು ಕರೆಸಿಕೊಂಡು ಮೆರವಣಿಗೆ ಮಾಡಿಸಿಕೊಂಡಿರುವ ಏಕೈಕ ವ್ಯಕ್ತಿ !
➤ಬಿಜೆಪಿಗರಿಗೆ ಕೋಲಿ ಸಮಾಜದ ಮೇಲೆ ಗೌರವ ಇದ್ದಿದ್ದರೆ ಚಿಂಚನಸೂರು ಅವರನ್ನು ಮೊದಲೇ MLC ಮಾಡಬೇಕಿತ್ತು ಏಕೆ ಮಾಡಲಿಲ್ಲ?
➤ಬಾಬು ರಾವ್ ಚಿಂಚನಸೂರ್ ಅವರು ಮೊದಲು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಬೇಕು ಮತ್ತು ನನಗೆ ಧನ್ಯವಾದ ಹೇಳಬೇಕು 
ನಾನು ಕ್ಷೇತ್ರದಲ್ಲಿ ಸಕ್ರಿಯವಾಗಿರಲಿಲ್ಲ ಎಂದರೆ ಇವರಿಗೆ ಯಾವ MLC ಹುದ್ದೆಯು ಸಿಗುತ್ತಿರಲಿಲ್ಲ. 
➤ನಾನು ಸರ್ಕಾರದ ಭ್ರಷ್ಟಾಚಾರ, PSI ಹಗರಣ, KPTCL  ನೇಮಕಾತಿ‌ ಹಗರಣ ಬಗ್ಗೆ ಮಾತನಾಡಿದ್ದಕ್ಕೆ ಇಂದು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ, IAS, IPS, KPTCL ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ನಮ್ಮ ಹೋರಾಟದಿಂದಾಗಿ. 
ಹಾಗಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಬೇಕು ಎಂದು ಈ ಬಿಜೆಪಿಗರು ಟಾರ್ಗೆಟ್ ಮಾಡುತ್ತಿದ್ದಾರೆ. 
ನಾನು ಏನು ಎನ್ನುವುದು ಚಿತ್ತಾಪುರ ಜನತೆಗೆ ಗೊತ್ತಿದೆ ಚಿತ್ತಾಪುರದ ಜನರ ಆಶೀರ್ವಾದ ಇರುವರೆಗು ಏನು ಮಾಡಲು ಸಾಧ್ಯವಿಲ್ಲ !


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ