ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವ ಗಟ್ಟಿಯಾಗಿದೆ. ಮಂಡ್ಯ ನೆಲದ ಜನರು ನಮಗೆ ಎಂದಿಗೂ ದ್ರೋಹ ಮಾಡಿಲ್ಲ. ನಾವು ಬದುಕಿರುವವರೆಗೂ ಇಲ್ಲಿನ ಜನರ ಸೇವೆ ಮಾಡುವುದಕ್ಕೆ ಸಿದ್ಧರಿದ್ದೇವೆ. ಈ ನೆಲದಿಂದ ನನ್ನ ಮಗ ನಿಖಿಲ್‌ ಲೋಕಸಭೆಗೆ ಸ್ಪರ್ಧಿಸಿ ಸೋತಿರಬಹುದು. ಇದೇ ಮಣ್ಣಿನ ಜನರ ಬೆಂಬಲದೊಂದಿಗೆ ಮುಂದೆ ಲೋಕಸಭೆಯನ್ನೂ ಪ್ರವೇಶಿಸಬಹುದು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ಘೋಷಿಸಿದ 9 ಸಾವಿರ ಕೋಟಿ ರು. ಹಣ ಸಂತೆಯಲ್ಲಿ ನಿಂತು ಭಾಷಣ ಮಾಡಿದ್ದಲ್ಲ. ಬಜೆಟ್‌ನಲ್ಲಿ ಘೋಷಿಸಿದ್ದು. ಬೇಕಿದ್ದರೆ ಸರ್ಕಾರದ ದಾಖಲೆಗಳನ್ನು ಪರಿಶೀಲಿಸಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ(H.D.Kumaraswamy) ಅವರು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.


H D Kumaraswamy: ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕೆಟ್ಟೆ: 'ಬಿಗ್ ಬಾಂಬ್ ಸ್ಫೋಟಿಸಿದ' ಹೆಚ್ ಡಿಕೆ!


ರೈತರ ಸಾಲ ಮನ್ನಾಗೆ 25 ಸಾವಿರ ಕೋಟಿ ರು. ಘೋಷಿಸಿದ್ದು ಸುಳ್ಳೇ. ಸರ್ಕಾರದ ಅಂಕಿ-ಅಂಶಗಳನ್ನು ನೋಡಿ ಮಾತನಾಡಬೇಕು. ಎಲ್ಲೋ ಇದ್ದವನನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಬೆಳೆಸಿದೆವು. ಒಮ್ಮೆ ನಮ್ಮ ಕುಟುಂಬದವರು ಟಿಕೆಟ್‌ ಕೊಟ್ಟು ತಪ್ಪು ಮಾಡಿದರು. ಮತ್ತೊಮ್ಮೆ ಪುಟ್ಟರಾಜು ಒತ್ತಡಕ್ಕೆ ಕಟ್ಟುಬಿದ್ದು ನಾನು ಟಿಕೆಟ್‌ ಕೊಟ್ಟೆ. ಈಗ ಅವರು ನನ್ನನ್ನೇ ಪ್ರಶ್ನೆ ಮಾಡ್ತಾರೆ. ಅವರಿಗೆ ನಾನು ಉತ್ತರ ಕೊಡಬೇಕು. ಇದೆಂಥಾ ವಿಪರ್ಯಾಸ ಎಂದು ಬೇಸರದಿಂದ ನುಡಿದರು.


ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ: ಐವರಿಗೆ ಮಾತ್ರ ಸಚಿವಸ್ಥಾನ!


ಸಂತೆಬಾಚಹಳ್ಳಿ ಕೆರೆಗೆ ದುಡ್ಡುಕೊಟ್ಟಿದ್ದು ಯಡಿಯೂರಪ್ಪನವರಾ. ನಾನೇನೂ ಹಣ ಕೊಟ್ಟಿರಲಿಲ್ಲವಾ. ಉಪ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಕ್ಷೇತ್ರವೇ ನನ್ನದು ಎನ್ನುತ್ತಿದ್ದಾನೆ. ಚುನಾವಣೆ ಬರಲಿ. ನಾವೇನೂಂತ ತೋರಿಸುತ್ತೇವೆ ಎಂದು ಸಚಿವ ಕೆ.ಸಿ.ನಾರಾಯಣಗೌಡರ ಹೆಸರೇಳದೆ ಕುಟುಕಿದರು.


ರಾಜ್ಯದ ಜನತೆಗೆ ಮತ್ತೊಂದು 'ಭರ್ಜರಿ ಗುಡ್ ನ್ಯೂಸ್'..!