ಶ್ರಿಲಂಕಾಗೆ ಬಂದಿರುವ ಪರಿಸ್ಥಿತಿ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ: ಎಚ್ಡಿಕೆ ಭವಿಷ್ಯ
`ಬಿಜೆಪಿ ಸರ್ಕಾರದಲ್ಲಿ ಕೆಲವು ವ್ಯಕ್ತಿಗಳು ಗಂಟೆಗೆ ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಭ್ರಷ್ಟಾಚಾರ ಹೀಗೆಯೇ ಮುಂದುವರೆದರೆ ಶೀಘ್ರವೇ ಭಾರತಕ್ಕೆ ಶ್ರೀಲಂಕಾಗೆ ಬಂದಿರುವ ಪರಿಸ್ಥಿತಿ ಬರಲಿದೆ`
ಬೀದರ್: ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದಿದ್ದರೆ ಶ್ರೀಲಂಕಾಗೆ ಬಂದಿರುವ ಪರಿಸ್ಥಿತಿ ಭಾರತಕ್ಕೂ ಶೀಘ್ರವೇ ಬರಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ಮಾತನಾಡಿರುವ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಕೆಲವು ವ್ಯಕ್ತಿಗಳು ಗಂಟೆಗೆ ಕೋಟ್ಯಾಂತರ ರೂ. ಹಣ ಗಳಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಶ್ರಿಲಂಕಾಗೆ ಬಂದಿರುವ ಪರಿಸ್ಥಿತಿ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ. ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುತ್ತಿರುವುದು ಕೇವಲ ನಾಟಕವಷ್ಟೇ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಸರ್ಕಾರಿ ಭೂಮಿಯನ್ನು ನುಂಗಿಹಾಕುತ್ತಿರುವ ವ್ಯಕ್ತಿಯ ಮನೆ ಮೇಲೆ ಬುಲ್ಡೋಜರ್ ಹತ್ತಿಸಬೇಕಿತ್ತೇ ವಿನಃ, ಬಡವರ ಮನೆಗಳ ಮೇಲೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: PSI Scam: ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿಯ ಸ್ಫೋಟಕ ಆಡಿಯೋ ಪತ್ತೆ!
ಹಾಲು ಒಕ್ಕೂಟ ನೇಮಕಾತಿಗೆ 25 ಲಕ್ಷ , ಕೆಪಿಎಸ್‍ಸಿ ನೇಮಕಾತಿಗೆ 1 ಕೋಟಿ
ಪಿಎಸ್‍ಐ ಅಷ್ಟೇ ಅಲ್ಲ ಹಾಲು ಒಕ್ಕೂಟದ ನೇಮಕಾತಿಯಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತದೆ. ಹಾಲು ಒಕ್ಕೂಟದ ನೇಮಕಾತಿಗೆ 25 ಲಕ್ಷ ರೂ. ಹಣ ಕೊಡುವ ಪರಿಸ್ಥಿತಿ ಇದೆ. ಅದೇ ರೀತಿ ಕೆಪಿಎಸ್‍ಸಿಯಲ್ಲಿ ಒಂದು ಸೀಟು ಪಡೆಯಬೇಕಾದರೆ 1 ಕೋಟಿ ರೂ. ಕೊಡಬೇಕಾಗಿದೆ ಎಂದು ಕುಮಾಸ್ವಾಮಿ ಗಂಭೀರ ಆರೋಪ ಮಾಡಿದರು.
ನನ್ನ ಬಳಿಯು ಕೂಡ ಸಾವಿರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಂದಿದ್ದರು. ನನ್ನ ಬಳಿ ಇದೆಲ್ಲ ನಡೆಯಲ್ಲವೆಂದು ಹೇಳಿ ಕಳುಹಿಸಿದ್ದೇನೆ. ಬರೀ ಪಿಎಸ್‍ಐ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಮಾತ್ರ ಬಯಲಿಗೆ ಬಂದಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು. ಇಲ್ಲದೆ ಹೋದರೆ ಇದು ಹೀಗೆಯೇ ಮುಂದುವರೆದುಕೊಂಡು ಹೋಗುತ್ತದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PSI Recruitment Scam: ಇನ್ನೂ ಪತ್ತೆಯಾಗದೆ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.