ಮೇಕೆದಾಟು ಯೋಜನೆ: ‘ಮಿ.ಸುಳ್ಳಯ್ಯʼ ಹೊಸ ಕಥೆ, ಚಿತ್ರಕಥೆ ಬರೆದಿದ್ದಾರೆ ಎಂದ ಎಚ್ಡಿಕೆ
‘ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕರ ನಾಲಿಗೆ ಮೇಲೆ ರಾಜ್ಯ ನೀರಾವರಿ ಬಗ್ಗೆ ಸೃಷ್ಟಿ ಆಗುತ್ತಿರುವ ‘ಸುಳ್ಳಿನ ಸರಮಾಲೆʼಯು ಜನತೆಗೆ ಯಾಮಾರಿಸಿ ಬೇಳೆ ಬೇಯಿಸಿಕೊಳ್ಳುವ ‘ರಾಜಕೀಯ ಹುಂಬತನʼವಲ್ಲದೆ ಮತ್ತೇನೂ ಅಲ್ಲ`
ಬೆಂಗಳೂರು: ಸತ್ಯಕ್ಕೆ ಸಮಾಧಿ ಕಟ್ಟಿ ‘ಸುಳ್ಳಿನಯಾತ್ರೆʼಗೆ ಹೊರಟವರ ಜಾತಕವನ್ನು ದಾಖಲೆಗಳೇ ಬೆತ್ತಲು ಮಾಡುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಟೀಕಿಸಿದ್ದಾರೆ. ಮೇಕೆದಾಟು ಯೋಜನೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸೋಮವಾರ ಸರಣಿ ಟ್ವೀಟ್ ಮೂಲಕ ಎಚ್ಡಿಕೆ ಕಿಡಿಕಾರಿದ್ದಾರೆ.
‘ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕರ ನಾಲಿಗೆ ಮೇಲೆ ರಾಜ್ಯ ನೀರಾವರಿ ಬಗ್ಗೆ ಸೃಷ್ಟಿ ಆಗುತ್ತಿರುವ ‘ಸುಳ್ಳಿನ ಸರಮಾಲೆʼಯು ಜನತೆಗೆ ಯಾಮಾರಿಸಿ ಬೇಳೆ ಬೇಯಿಸಿಕೊಳ್ಳುವ ‘ರಾಜಕೀಯ ಹುಂಬತನʼವಲ್ಲದೆ ಮತ್ತೇನೂ ಅಲ್ಲ. ಸತ್ಯಕ್ಕೆ ಸಮಾಧಿ ಕಟ್ಟಿ ‘ಸುಳ್ಳಿನಯಾತ್ರೆʼಗೆ ಹೊರಟವರ ಜಾತಕವನ್ನು ದಾಖಲೆಗಳೇ ಬೆತ್ತಲು ಮಾಡುತ್ತಿವೆ’ ಅಂತಾ ಕುಟುಕಿದ್ದಾರೆ.
'ಧಾರವಾಡದ ಮನೆ ಮಗನಾದ ನಾನು ತವರಿಗೆ ಹೂವು ತರುತ್ತೇನೆ ಹೊರತು ಹುಲ್ಲನ್ನಲ್ಲ'
DK Shivakumar) ಮತ್ತೆ 9,000 ಕೋಟಿ ರೂ. ಮೊತ್ತದ ವಿಸ್ತೃತ DPR ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿದ್ದರಂತೆ. ಅಬ್ಬಾ..! ‘ಸಿದ್ದಸುಳ್ಳುಶೂರ!!ʼ. ಸುಳ್ಳು ಸೃಷ್ಟಿಗೊಂದು ಆಸ್ಕರ್ ಇರಬೇಕಿತ್ತು. ಮೇಕೆದಾಟು ಸಮಗ್ರ ಯೋಜನಾ ವರದಿ-DPR ಸಿದ್ಧವಾಗಿ ಕೇಂದ್ರಕ್ಕೆ ಸಲ್ಲಿಕೆ ಆಗಿದ್ದು 2018ರಲ್ಲಿ ನಾನು ಸಿಎಂ ಆಗಿದ್ದಾಗಲೇ. ಇದರಲ್ಲಿ ಡಿಕೆಶಿ ಪಾತ್ರವೇನೂ ಇರಲಿಲ್ಲ. ಈ ಸತ್ಯವನ್ನು ‘ಸಿದ್ದಹಸ್ತರುʼ ಮುಚ್ಚಿಟ್ಟ ಪರಮಾರ್ಥವೇನು?’ ಅಂತಾ ಪ್ರಶ್ನಿಸಿದ್ದಾರೆ.
‘ನನ್ನ ಸಂಪುಟದಲ್ಲಿ ಜಲಸಂಪನ್ಮೂಲ ಮಂತ್ರಿಯಾಗಿದ್ದವರು ಮೇಕೆದಾಟು ವಿಚಾರದಲ್ಲಿ ನಾನು ಮತ್ತು ನನ್ನ ಸಂಪುಟ ಸಹೋದ್ಯೋಗಿ ಹೆಚ್.ಡಿ.ರೇವಣ್ಣ ಅವರು ಆಗಿನ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ಎಲ್ಲಿದ್ದರು? ಜನರಿಗೆ ತಿಳಿಯಬೇಕಲ್ಲವೆ? ನನ್ನ ಮನವಿ ಮೇರೆಗೆ ಅಂದು ಗಡ್ಕರಿ ಅವರು ತಕ್ಷಣವೇ DPR ಸಿದ್ಧಪಡಿಸಿ ಕಳಿಸಿ ಎಂದು ಹೇಳಿದ್ದರು. ಆ ಸಭೆಗೆ ಡಿ.ಕೆ.ಶಿವಕುಮಾರ್ ಬರಲೇ ಇಲ್ಲ. ಅಂದು ನಾನು ದೆಹಲಿಯಲ್ಲಿ ಮಾಧ್ಯಮಗಳ ಜತೆ ಮೇಕೆದಾಟು ಯೋಜನೆ(Mekedatu Project) ಬಗ್ಗೆ ಹಾಗೂ ಗಡ್ಕರಿ ಅವರ ಜೊತೆಗಿನ ಚರ್ಚೆಯ ವಿವರಗಳ ಕುರಿತು ಮಾತನಾಡಿದ್ದೆ’ ಅಂತಾ ಎಚ್ಡಿಕೆ ಟ್ವೀಟ್ ಮಾಡಿದ್ದಾರೆ.
ವರ್ಷದ ಮೊದಲ ಅಮವಾಸ್ಯೆ ದಿನವೇ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂವರ ದುರ್ಮರಣ
‘2013ರಲ್ಲಿ ಇದೇ ‘ಸಿದ್ದಹಸ್ತರು’(Siddaramaiah) ಸಿಎಂ ಆದ ಮೇಲೆ ನಡೆದ ವಿಧಾನಮಂಡಲ ಜಂಟಿ ಕಲಾಪದಲ್ಲಿ ರಾಜ್ಯಪಾಲರ ಭಾಷಣದಲ್ಲಿ; ‘ಕಾವೇರಿ ಐ ತೀರ್ಪಿನ ಭಾಗವಾಗಿ ಕಾವೇರಿ ವಿಸ್ತರಣಾ, ಮುಂದುವರಿದ ಹಾಗೂ ನವೀಕರಣ ಯೋಜನೆಗಳ ಜಾರಿಗೆ ಕೇಂದ್ರದ ಅನುಮೋದನೆ ಕೋರಲಾಗುವುದು’ ಎಂದು ಹೇಳಿಸಿದ್ದರು. ಕೇಂದ್ರದ ಅನುಮೋದನೆ ಎಂದರೆ ಮತ್ತೆ ಮತ್ತೆ ಅರ್ಜಿ ಹಿಡಿದು ಕೇಂದ್ರದ ಮರ್ಜಿ ಕಾಯುವುದು. ಅದಕ್ಕೆ ಅಂದೇ ಸದನದಲ್ಲಿ ಜೆಡಿಎಸ್ ಆ ಭಾಷಣವನ್ನು ವಿರೋಧಿಸಿತ್ತು. ಕಾವೇರಿ ಐ ತೀರ್ಪಿನ ಭಾಗವಾಗಿ ನಮ್ಮ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳುವುದು ನಮ್ಮ ಹಕ್ಕು. ಈ ಸರಳ ವಿಷಯವೂ ಆವತ್ತಿನ ಸಿಎಂಗೆ ಅರ್ಥವಾಗಲಿಲ್ಲ’ ಅಂತಾ ಕಿಡಿಕಾರಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.