ಲವ್ ದೋಖಾ.. ಕೈಕೊಟ್ಟ ಪ್ರಿಯಕರನ ಮೇಲೆ ಮಾಜಿ ಪ್ರೇಯಸಿ ಗುಂಡಿನದಾಳಿ..! ರಾತ್ರೋ ರಾತ್ರಿ ಬೆಚ್ಚಿದ ಬೆಳಗಾವಿ
Belagavi: ಬೆಳಗಾವಿಯ ಮಹಾಂತೇಶ ನಗರದ ಬೆಮುಲ್ ಬಳಿಯ ಮನೆಯೊಂದರಲ್ಲಿ ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಬೇಸತ್ತು ಮಾಜಿ ಪ್ರೇಯಸಿ ಗುಂಡಿನ ಮಳೆಗೈದ ಘಟನೆ ನಡೆದಿದೆ.
Belagavi: ಬೆಳಗಾವಿಯ ಮಹಾಂತೇಶ ನಗರದ ಬೆಮುಲ್ ಬಳಿಯ ಮನೆಯೊಂದರಲ್ಲಿ ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಬೇಸತ್ತು ಮಾಜಿ ಪ್ರೇಯಸಿ ಗುಂಡಿನ ಮಳೆಗೈದ ಘಟನೆ ನಡೆದಿದೆ.
ರಾತ್ರೋರಾತ್ರಿ ಬೆಳಗಾವಿಯನ್ನೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಬೇಸತ್ತು ಆತನ ಮೇಲೆ ಮಾಜಿ ಪ್ರೇಯಸಿ ಒಬ್ಬಳು ಗುಂಡಿನ ಮಳೆಗೈದ ಘಟನೆಯೊಂದು ನಡೆದಿದೆ. ಸಹಚರರ ಜೊತೆಗೂಡಿ ಶೂಟೌಟ್ ಮಾಡಿ ಮಾಜಿ ಪ್ರಿಯತಮನ ಹತ್ಯೆಗೆ ಯತ್ನ ಮಾಡಲಾಗಿದೆ.
ಸಹಚರರ ಜೊತೆಗೂಡಿ ಶೂಟೌಟ್ ಮಾಡಿ ಮಾಜಿ ಪ್ರಿಯತಮೆ ಹತ್ಯೆಗೆ ಯತ್ನಿಸಿದ್ದಾಳೆ. ಸ್ನೇಹಿತರ ಜೊತೆಗೂಡಿ ಶೂಟೌಟ್ ಮಾಡಿ ಮಾಜಿ ಪ್ರಿಯಕರನ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಈ ಘಟನೆಯಿಂದ ರಾತ್ರೋ ರಾತ್ರಿ ಬೆಳಗಾವಿ ಬೆಚ್ಚಿಬಿದ್ದಿದೆ.
ಘಟನೆಯಲ್ಲಿ ಟಿಳಕವಾಡಿಯ ಧ್ವಾರಕಾನಗರದ ಪ್ರಣೀತಕುಮಾರ್‌ಗೆ (31) ಎಂಬುವವರಿಗೆ ತೊಡೆ, ಮುಖದ ಭಾಗಕ್ಕೆ ಗಾಯವಾಗಿದ್ದು, ಬೀಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀಮ್ಸ್ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಮೊದಲು ಮಹಾಂತೇಶ ನಗರದ ವೇದಾ ಎಂಬುವವಳನ್ನು ಪ್ರೀತಿಸುತ್ತಿದ್ದ ಪ್ರಣೀತಕುಮಾರ್ ನಾಲ್ಕು ವರ್ಷಗಳ ಹಿಂದೆಯೇ ಪ್ರಿಯತಮಯ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ನಂತರ ಪ್ರಣೀತಕುಮಾರ್ ಸ್ಮೀತಾ ಎಂಬುವವಳ ಜೊತೆಗೆ ಸಲುಗೆ ಹೊಂದಿದ್ದ, ಈ ವಿಷಯ ಗೊತ್ತಾಗ್ತಿದ್ದಂತೆ ಇಬ್ಬರು ಪರಿಚಿತರ ಜೊತೆಗೆ ಏಕಾಏಕಿ ಸ್ಮೀತಾ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ.
ಮಹಾಂತೇಶ ನಗರದ ಸ್ಮೀತಾ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಪ್ರಣೀತಕುಮಾರ್ ಗುರುವಾರ ರಾತ್ರಿಯೂ ಊಟಕ್ಕೆಂದು ಸ್ಮೀತಾ ಮನೆಗೆ ಹೋಗಿದ್ದ, ಇದನ್ನು ನೋಡಿದ್ದ ವೇದಾ ಇಬ್ಬರು ಪರಿಚಿತರ ಜೊತೆಗೆ ಏಕಾಏಕಿ ಸ್ಮೀತಾ ಮನೆಗೆ ನುಗ್ಗಿ ಮಾಜಿ ಪ್ರಿಯಕರನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಸದ್ಯ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಮಹಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.