ಬೆಳಗಾವಿ: ಸಚಿವ ಸ್ಥಾನ ನೀಡುವವರೆಗೆ ಸದನಕ್ಕೆ ಬರಲ್ಲ ಎಂದು ಬಿಜೆಪಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಮಾಜಿ ಸಚಿವರಾದ ಕೆ. ಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಭರವಸೆ ನಂತರ ಹಾಜರ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾನಾಡಿದ ಮಾಜಿ ಸಚಿವ ಈಶ್ವರಪ್ಪ, ಈಗ ಮೂರು ನಾಲ್ಕು ತಿಂಗಳು ಇದೆ ಅಷ್ಟೆ ಇದರಲ್ಲಿ ಏನು ಕಡಿದು ಗುಡ್ಡೆ ಹಾಕೋದು ಏನು ಇಲ್ಲ. ನಾನು, ರಮೇಶ್ ಜಾರಕಿಹೊಳಿ ಈಗಿಂದ ಈ ಡಿಪಾರ್ಟ್ಮೆಂಟ್ ನೋಡ್ತಾಯಿಲ್ಲ. ಈ ಮಂತ್ರಿ ಸ್ಥಾನ ಇದು ನಮಗೆ ಒಂದು ಪ್ರೆಸ್ಟೀಜ್” ಎಂದರು.


ಇದನ್ನೂ ಓದಿ: "ತಾಕತ್ತಿದ್ದರೆ ಭೂತಾನ್‌ ಅಡಿಕೆ ಆಮದನ್ನು ವಿರೋಧಿಸುವ ಧೈರ್ಯ ತೋರಲಿ": ಬ್ರಿಜೇಶ್‌ ಕಾಳಪ್ಪ 


ಸುವರ್ಣಸೌಧಕ್ಕೆ ಆಗಮಿಸಿದ ಉಭಯ ನಾಯಕರು ಮೊದಲಿಗೆ ಜಂಟಿಯಾಗಿ ಮಾಧ್ಯಮಗಳ ಮುಂದೆ ನಿಂತರು. ಪ್ರಶ್ನೆಗಳು ಪ್ರಾರಂಭ ಆಗುತ್ತಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿರ್ಗಮಿಸಿದರು.


ಮಾಜಿ ಸಚಿವ ಈಶ್ವರಪ್ಪ ಮಾತಾನಾಡಿ, ಪಕ್ಷದ ಮೇಲೆ ಸಿಎಂ ಬೊಮ್ಮಾಯಿ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಿನ್ನೆ ರಾತ್ರಿ ನಾನು ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿ ಮಾತಾಡಿದ್ದೇವೆ. ಅವರು ಹೇಳಿದ್ದಾರೆ ಈ ವಿಚಾರವನ್ನ ವರಿಷ್ಠರಿಗೆ ತಿಳಿಸಿದ್ದೇನೆ ಎಂದು. ಇನ್ನೊಂದು ಬಾರಿ ದೆಹಲಿ ಹೋಗಿ ನಿಮಗೆ ತಿಳಿಸ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಂತಾ ಸಿಎಂ ಭೇಟಿ ಬಗ್ಗೆ ವಿವರಿಸಿದರು.


ಸಚಿವ ಸ್ಥಾನಕ್ಕಾಗಿ ಸದನಕ್ಕೆ ಗೈರಾದರೆ ಜನಸಾಮಾನ್ಯರಿಗೆ ಮೇಸೆಜ್ ಏನ್ ಹೋಗುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಎರಡು ದಿನ ಯಾಕೆ ಬಾಯ್ ಕಟ್ ಮಾಡಿದ್ದು ಅಂದ್ರೆ ನಮಗೆ ಕ್ಲೀನ್ ಚಿಟ್ ಸಿಕ್ಕ ಮೇಲೂ ನಮ್ಮಬ್ಬಿರನ್ನು  ಯಾಕೆ ಕ್ಯಾಬಿನೆಟ್ ಗೆ ತಗೊಳಿಲ್ಲ. ಈ ಪ್ರಶ್ನೆ ನನ್ನದಲ್ಲ. ಹೀಗೆ ನಮ್ಮನ್ನ ರಾಜ್ಯಾದ್ಯಂತ ಹಿರಿಯರು, ಕಾರ್ಯಕರ್ತರು, ಎಮ್ಎಲ್ಎ, ಎಮ್ ಎಲ್ ಸಿ, ಮಂತ್ರಿಗಳುಗಳು ಕೇಳ್ತಾಯಿದ್ದಾರೆ. ಎಲ್ಲಾ ಕ್ಲೀನ್ ಚಿಟ್ ಸಿಕ್ರು ಯಾಕೆ ಈ ರೀತಿ ಅನ್ಯಾಯ ಮಾಡ್ತಾಯಿದಾರೆ ಅಂತಾ ಅವರ ಪ್ರಶ್ನೆಗೆ ಉತ್ತರ ಏನ್ ಹೇಳೋದು? ಎಂದರು.


ಇದನ್ನೂ ಓದಿ:  Congress MLAs: ನಾಯಕರ ವಿರುದ್ಧವೇ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು: ಭಿನ್ನಮತ ಶಮನವೇ ದೊಡ್ಡ ಸವಾಲು


ಸುವರ್ಣಸೌಧಕ್ಕೆ ಒಟ್ಟಿಗೆ ಆಗಮಿಸಿದ ಉಭಯ ನಾಯಕರು, ಮೊದಲು ರಮೇಶ್ ಜಾರಕಿಹೊಳಿ ಸದನದ ಒಳಗೆ ಬಂದು ನೇರವಾಗಿ ನಾಲ್ಕನೇ ಸಾಲಿನ ಆಸನದಲ್ಲಿ ಶಾಸಕ ಸಿ.ಟಿ. ರವಿಗೆ ಹಸ್ತಲಾಘವ ಮಾಡಿ ಪಕ್ಕದಲ್ಲಿ ಆಸೀನರಾದರು. ನಂತರ ಈಶ್ವರಪ್ಪ ಸದನದೊಳಕ್ಕೆ ಬಂದ ಕೂಡಲೇ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮಾತಾನ್ನಾಡಿಸಿ, ಹಸ್ತಲಾಘವ ಮಾಡಿ ಕೆಲವು ಕ್ಷಣ ನಗುತ್ತಾ ಮಾತನಾಡಿ ಈಶ್ವರಪ್ಪ ಕೈ ತಟ್ಟಿ ಹೋಗಿ ಮುಂದೆ ಕುಳಿತುಕೊಳ್ಳಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ನಂತರ ನಾಲ್ಕನೇ ಸಾಲಿನಲ್ಲಿನ ಆಸನದಲ್ಲಿ ಕುಳಿತರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.