ರಾಯಚೂರು : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ ʼಭಾರತ್‌ ಜೋಡೋ ಯಾತ್ರೆʼ ರಾಯಚೂರು ನಗರವನ್ನು ಪ್ರವೇಶ ಮಾಡಿದ್ದು, ರಾಹುಲ್‌ ಗಾಂಧಿಯವರಿಗೆ ಜೊತೆಯಾಗಿ ಮಾಜಿ ಸಂಸದೆ, ನಟಿ ರಮ್ಯಾ ಹೆಜ್ಜೆ ಹಾಕಿದರು.


COMMERCIAL BREAK
SCROLL TO CONTINUE READING

ಕರ್ನಾಟಕದ ಕೊನೇಯ ಹಂತದ ಪಾದಯಾತ್ರೆ ನಡೆಯುತ್ತಿದೆ. ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸೇರಿದ್ದಾರೆ. ಮಂತ್ರಾಲಯದಿಂದ ಮರಳಿದ್ದ ಯಾತ್ರೆ ರಾಯಚೂರು ನಗರ ಪ್ರವೇಶ ಮಾಡಿದೆ. ಊಟದ ನಂತರ ಯಾತ್ರೆ ಪ್ರಾರಂಭಿಸಿದ ರಾಹುಲ್‌ ಗಾಂಧಿಯವರಿಗೆ ಮಾಜಿ ಸಂಸದೆ, ನಟಿ ರಮ್ಯಾ ಸಾಥ್‌ ನೀಡಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಉಪಸ್ಥಿತರಿದ್ದರು.


ಇದನ್ನೂ ಓದಿ: ಅಪ್ಪಿತಪ್ಪಿಯೂ ಇಂದು ಈ ವಸ್ತುಗಳನ್ನು ಖರೀದಿಸಿದ್ರೆ ಬಡತನ ಕಟ್ಟಿಟ್ಟ ಬುತ್ತಿ..!


ಇಂದು ನಗರದಲ್ಲಿ ರಾಹುಲ್‌ ಗಾಂಧಿಯವರು ನಾಲ್ಕುವರೆ ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆ. ನಂತರ ವಾಲ್ಕಾಟ್ ಮೈದಾನದಲ್ಲಿ ಸೆಮಿ ಪಬ್ಲಿಕ್ ಮೀಟಿಂಗ್ ನಡೆಸಲಿದ್ದಾರೆ. ಈ ವೇಳೆ ಸಾರ್ವಜನಿಕರನ್ನ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ