ಬೆಂಗಳೂರು: ನಗರದಲ್ಲಿ ವೀಕ್ ಎಂಡ್ ಕಿಕ್ ಏರಿಸಬೇಕಿದ್ದ ಕೆಜಿಗಟ್ಟಲೇ ಗಾಂಜಾವನ್ನ ಮಹದೇವಪುರ ವಲಯದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ನೆರೆಯ ಆಂಧ್ರಪ್ರದೇಶದಿಂದ ಬಲ್ಕ್ ನಲ್ಲಿ ಗಾಂಜಾ ತಂದು  ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಅಬಕಾರಿ ಅಧಿಕಾರಿಗಳ ಕೈಗೆ ಪೆಡ್ಲರ್ ದಿನೇಶ್ ಚಾಟ್ಲಾ 33 ಕೆಜಿ ಗಾಂಜಾ ಲಾಕ್ ಆಗಿದ್ದಾನೆ.


ಅಬಕಾರಿ ಎಸ್ಪಿ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಎಎ ಮುಜಾವರ್ ಅಂಡ್ ಟೀಂ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು ನಡೆಸಿ 24 ಲಕ್ಷ ಮೌಲ್ಯದ ಗಾಂಜಾ ಇದಾಗಿದ್ದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.


ಇನ್ನೂ ಆರೋಪಿ ದಿನೇಶ್ ಆಂಧ್ರದ ವೈಜಾಗ್ ನಿಂದ ಕಾರಿನಲ್ಲೇ ಗಾಂಜಾ ತಂದು ಮಹದೇಪುರ ,ವೈಟ್ ಫೀಲ್ಡ್ ಭಾಗದಲ್ಲಿ ನಡೆಯುವ ವೀಕ್ಎಂಡ್ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ. ಈ ಜಾಲದ ಹಿಂದೆ ‌ಯಾರೆಲ್ಲ ಇದ್ದಾರೆ ಹಾಗೂ ಆರೋಪಿ ದಿನೇಶ್ ಯಾರಿಗೆಲ್ಲ ಗಾಂಜಾ ಸಪ್ಲೈ ಮಾಡುತ್ತಿದ್ದ ಎಂಬ ಕುರಿತು ಅಬಕಾರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ‌.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.