ಬೆಂಗಳೂರು : ರಾಜ್ಯ ಸರ್ಕಾರ ಐದು ಸೈನಿಕರಿಗೆ ಒಟ್ಟು ತೊಂಬತ್ತು ಲಕ್ಷ ರೂಪಾಯಿ ಬಾಕಿ ಇಟ್ಟಿದ್ದು, ಕಳೆದ ವರ್ಷದ ಡಿಸೆಂಬರ್ ನಲ್ಲಿ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಆದೇಶವಾದರೂ ಈವರೆಗೆ ಒಂದು ರೂಪಾಯಿ ಕೂಡ ಸೈನಿಕರಿಗೆ ಬರಲಿಲ್ಲ. ಈ ಪೈಕಿ ಒಬ್ಬ ಸೈನಿಕರಿಗೆ ಶೌರ್ಯ ಚಕ್ರ ಹಾಗೂ  ಮತ್ತೊಬ್ಬರಿಗೆ ಶೌರ್ಯ ಪ್ರಶಸ್ತಿ ದೊರಕಿದೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 2023ರಲ್ಲಿ ಐದು ಸೈನಿಕರಿಗೆ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಒಟ್ಟು ₹95 ಲಕ್ಷ ಘೋಷಣೆ ಮಾಡಲಾಗಿತ್ತು. ಆದರೆ ಸರ್ಕಾರದ ಆರ್ಥಿಕ ಇಲಾಖೆಗೆ ಕಡತಗಳು ಹೋಗಿ ಒಂದೊಂದು ಸಬೂಬು ಹೇಳಿ ಈವರೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ: ಡಿಸಿಎಂ ಡಿ.ಕೆ ಶಿವಕುಮಾರ್


ಶೌರ್ಯ ಚಕ್ರ ಪ್ರಶಸ್ತಿ ಪಡೆದ ಬೆಂಗಳೂರು ಗ್ರಾಮಾಂತರ ಮೂಲದ ಕ್ಯಾಪ್ಟನ್ ರಾಕೇಶ್ ಟಿ ಅವರಿಗೆ ₹50 ಲಕ್ಷ, ಬೆಳಗಾವಿಯ ಮಾಜಿ ಸಾಪರ್ ಯಮನಪ್ಪ ಹೊಸಟ್ಟಿ ಅವರಿಗೆ ನಿವೇಶನ ಬದಲಿಗೆ ₹15 ಲಕ್ಷ, ವಿಜಯಪುರದ ಶಾರದಾ ಲಿಂಗ ಹಳ್ಳಿ ಅವರಿಗೆ ನಿವೇಶನ ಬದಲಿಗೆ ₹15 ಲಕ್ಷ,ಮಡಿಕೇರಿಯ ಕ್ಯಾಪ್ಟನ್ ಭೀಮಯ್ಯ ಅವರಿಗೆ ಶೌರ್ಯ ಪ್ರಶಸ್ತಿ ಗೆ ₹13 ಲಕ್ಷ, ಗ್ರೂಪ್ ಕ್ಯಾಪ್ಟನ್ ಅಭಿಮಾನ್ ಗೆ ₹20 ಲಕ್ಷ ಸೇರಿದಂತೆ ಒಟ್ಟು ₹95 ಲಕ್ಷ ನೀಡಬೇಕು, ₹95 ಲಕ್ಷ ಪೈಕಿ ಡಿಸೆಂಬರ್ ನಿಂದ ₹492300 ನೀಡಲಾಗಿದ್ದು, ಇನ್ನು ₹90,07,700 ಬಾಕಿ ಇದೆ.


ವಿಳಂಬ ನೀತಿ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿ : ಇತ್ತೀಚಿಗೆ ಜಮ್ಮು ನಲ್ಲಿ ಕರುನಾಡಿನ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ ಸಂದರ್ಭದಲ್ಲಿ ಕೂಡ ಸರ್ಕಾರ ಇದೇ ರೀತಿ ವಿಳಂಬ ನೀತಿ ತೋರಿಸಿತ್ತು, ಈಗಲೂ ಈ ರೀತಿ ಮಾಡುತ್ತಿರುವುದು ಬಹಳ ದುಃಖ ಸಂಗತಿ. ಕೂಡಲೇ ಸರ್ಕಾರ 20 ವೀರನಾರಿಯರಿಗೆ ಸೇರಿದಂತೆ ಉಳಿದ ಬಾಕಿ ಹಣ ಕೂಡಲೇ ನೀಡಲು ಆಗ್ರಹ ಮಾಡುತ್ತೇನೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.