Extension of Super fast train timing : ಹುಬ್ಬಳ್ಳಿ ಮತ್ತು ಬೆಂಗಳೂರು ಹಾಗೂ ಬೆಂಗಳೂರು-ಹುಬ್ಬಳ್ಳಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಳ ಅವಧಿ ವಿಸ್ತರಣೆಯ ಕುರಿತು ನೈರುತ್ಯ ರೈಲ್ವೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. 


COMMERCIAL BREAK
SCROLL TO CONTINUE READING

ನಿಲ್ದಾಣಗಳ ನಡುವೆ ಪ್ರತಿ ದಿನ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಓಡಾಟ ಅವಧಿ ವಿಸ್ತರಣೆಯಿಂದ ಹಾವೇರಿಯ ಮಹಾದೇವಪ್ಪ ಮೈಲಾರ ಮತ್ತು ರಾಣಿಬೆನ್ನೂರು ನಿಲ್ದಾಣಗಳಲ್ಲಿ ರೈಲು ಹೆಚ್ಚುವರಿಯಾಗಿ ನಿಲುಗಡೆಯಾಗಲಿದ್ದು, ಎರಡು ಹೆಚ್ಚುವರಿ ನಿಲ್ದಾಣಗಳನ್ನು ಹೊಂದಲಿದೆ 


ಇದನ್ನು ಓದಿ : IND vs ENG : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 434 ರನ್ ಗಳ ಅಂತರದಿಂದ ದಾಖಲೆಯ ಜಯ


ಅಲ್ಲದೆ  ಹಾವೇರಿಯ ಮಹಾದೇವಪ್ಪ ಮೈಲಾರ ಮತ್ತು ರಾಣಿಬೆನ್ನೂರು ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆಯಾಗುವುದರಿಂದ ಇಲ್ಲಿನ ಪ್ರಯಾಣಿಕರು ಈ ಮೂಲಕ ಪ್ರಯೋಜನ ಪಡೆಯಲಿದ್ದಾರೆ.  ಮಾರ್ಚ್‌ 1ರಿಂದ ಜೂನ್ 30ರ ವರೆಗೆ ಹುಬ್ಬಳ್ಳಿ-ಬೆಂಗಳೂರು ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (07339)  ಸೇವೆಯನ್ನು ವಿಸ್ತರಿಸಲಾಗಿದೆ.


ಇದನ್ನು ಓದಿ : ಲವರ್ಸ್‌ ಡೇ ಮುಂದಿನ ದಿನ ʼಕಾಂಡೋಮ್ಸ್ ಡೇʼ ಏಕೆ ಆಚರಣೆ ಮಾಡ್ತಾರೆ ಗೊತ್ತೆ..?


ಮಾರ್ಚ್‌ 2ರಿಂದ ಜುಲೈ 1ರವರೆಗೆ ಬೆಂಗಳೂರು ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (07340) ಸೇವೆಯನ್ನು ವಿಸ್ತರಿಸಲಾಗಿದೆ.  ಬೆಂಗಳೂರು-ಹುಬ್ಬಳ್ಳಿ ರೈಲು ರಾತ್ರಿ 11.55ಕ್ಕೆ ಹೊರಟು ಮರುದಿನ ಬೆಳಗ್ಗೆ 07.30ಕ್ಕೆ ಹುಬ್ಬಳ್ಳಿ ಜಂಕ್ಷನ್‌ ತಲುಪುತ್ತದೆ ಮತ್ತು ಹುಬ್ಬಳ್ಳಿ-ಬೆಂಗಳೂರು ಸೂಪರ್‌ ಫಾಸ್ಟ್‌ ರೈಲು ರಾತ್ರಿ 11.15ಕ್ಕೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಬೆಂಗಳೂರು ತಲುಪುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.