ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ : ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರು ಅಮಾನತು
ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ಮಾಡಿದಂತೆ ನಟಿಸಿ ಹಣ ಪೀಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರು ಅಮಾನತಾಗಿದ್ದಾರೆ.
ಬೆಂಗಳೂರು : ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ಮಾಡಿದಂತೆ ನಟಿಸಿ ಹಣ ಪೀಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರು ಅಮಾನತಾಗಿದ್ದಾರೆ.
ಸದಾಶಿವನಗರ ಪಿಎಸ್ ಐ ಮೋಹನ್ ಬಸವರಾಜು , ಎಸ್ ಬಿ ಕಾನ್ಸ್‌ಟೇಬಲ್ ಶಿವಕುಮಾರ್, ಕ್ರೈಂ ಸ್ಟಾಫ್ ಪರಶುರಾಮ್, ನಾಗರಾಜ್ ಸೇರಿದಂತೆ ಐವರನ್ನ ಹಿರಿಯ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ತಮ್ಮದಲ್ಲದ ವ್ಯಾಪ್ತಿಯಾದ ಸಹಕಾರ ನಗರದಲ್ಲಿ ಬುಕ್ಕಿಗಳೆಂದು ಉದ್ಯಮಿ ಯೋಗೆಶ್ ಎಂಬುವರನ್ನ ಬೆದರಿಸಿ ಶಿವಕುಮಾರ್ ಮೂರು ಲಕ್ಷ ಹಣ ಪಡೆದಿದ್ದರು.
ಇದನ್ನೂ ಓದಿ: Beer ಗೆ ಸಂಬಂಧಿಸಿದ ಈ ಇಂಟರೆಸ್ಟಿಂಗ್ ಸಂಗತಿಗಳು ನಿಮಗೆ ತಿಳಿದಿವೆಯಾ?
ಈ ವಿಚಾರವನ್ನ ಯೋಗೆಶ್ ಈಶಾನ್ಯ ಡಿಸಿಪಿ ಅನೂಪ್ ಶೆಟ್ಟಿ ಗೆ ಲಿಖಿತ ದೂರು ನೀಡಿದ್ದರು. ಈ ದೂರಿನ ತನಿಖೆ ನಡೆಸಿದ ಯಲಹಂಕ ಎಸಿಪಿ ವರದಿ ನೀಡಿದ್ದು, ವರದಿ ಆದಾರದ ಮೇಲೆ ಐವರನ್ನ ಅಮಾನತು ಮಾಡಲಾಗಿದೆ. ಸಹಕಾರ ನಗರದ ಉದ್ಯಮಿಯೊಬ್ಬರಿಗೆ ಬೆಟ್ಟಿಂಗ್ ವಿಚಾರವಾಗಿ ಅರೆಸ್ಟ್ ಮಾಡುತ್ತೇವೆ ಎಂದು ಸದಾಶಿವನಗರ ಪೊಲೀಸು ಬೆದರಿಸಿ ಹಣ ಪೀಕಿರೋದು ವರದಿಯಲ್ಲಿ ಕಂಡು ಬಂದಿತ್ತು. ಈ ಹಿನ್ನೆಲೆ ಐವರನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.