ನವದೆಹಲಿ:ಸುಳ್ಳು ಸುದ್ದಿಗಳು ಸತ್ಯ ಸಂಗತಿಗಳಿಗಿಂತ ಟ್ವಿಟ್ಟರ್ನಲ್ಲಿ ಹೆಚ್ಚು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತವೆ ಎಂದು ಹೊಸ ಅಧ್ಯಯನ ತಿಳಿಸಿದೆ.


COMMERCIAL BREAK
SCROLL TO CONTINUE READING

ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ'ಸ್ ಯ ಮೀಡಿಯಾ ಕೇಂದ್ರವು ನಡೆಸಿದ ಸಂಶೋಧನೆಯ ಪ್ರಕಾರ ಈ ಅಂಶ ಬೆಳಕಿಗೆ ಬಂದಿದೆ.ಸುಮಾರು 3 ದಶಲಕ್ಷ ಜನರು ಟ್ವಿಟರ್ನಲ್ಲಿ 2006 ರಿಂದ 2017 ರವರೆಗಿನ 126,000 ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಸುಳ್ಳು ಸುದ್ದಿಯು ಶೇ 70% ರಷ್ಟು ಹೆಚ್ಚು ನಿಜ ಸುದ್ದಿಗಿಂತ ಜನರಿಂದ ರೀ ಟ್ವೀಟ್ ಮಾಡಲಾಗಿದೆ ಎಂದು ಅದು ತಿಳಿಸಿದೆ.  


ಈ ಅಧ್ಯಯನವು ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು ಇದು ಪ್ರಮುಖವಾಗಿ  ಸೋಷಿಯಲ್ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳು ಹೇಗೆ ಹಬ್ಬುತ್ತವೆ ಎನ್ನುವುದನ್ನು ಪತ್ತೆ ಹಚ್ಚಲು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.