ಕೌಟುಂಬಿಕ ಕಲಹ: ಕಾವೇರಿಗೆ ಹಾರಿದ ಮಹಿಳೆ ಜನರಿಂದ ಬಚಾವ್
ಪತ್ನಿಗೆ ಮಂಜುನಾಥ್ ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆ ಮಾಡುತ್ತಿದ್ದ ಜೊತೆಗೆ ದೌರ್ಜನ್ಯ ಪ್ರಕರಣದ ಆರೋಪಿಯೂ ಆಗಿದ್ದು ಹಿಂಸೆ ತಾಳಲಾರದೇ ಮಹಿಳೆ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ: ಕೌಟುಂಬಿಕ ಕಾರಣಕ್ಕಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕಾವೇರಿ ನದಿಗೆ ಹಾರಿದ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸಮೀಪ ತಡರಾತ್ರಿ ನಡೆದಿದೆ.
ಕೊಳ್ಳೇಗಾಲ ನಿವಾಸಿ ರೇಣುಕಾ(56) ಬದುಕುಳಿದ ಮಹಿಳೆ. ಈಕೆಯ ಪತಿ ಮಂಜುನಾಥ್ ದೌರ್ಜನ್ಯ ಕೊಟ್ಟು ಕಿರುಕುಳ ಎಸಗುತ್ತಿದ್ದರು ಎನ್ನಲಾಗಿದ್ದು ಕೌಟುಂಬಿಕ ಕಲಹ ತಾಳಲಾರದೇ ಕಾವೇರಿ ನದಿಗೆ ಹಾರಿದ್ದಾರೆ. ಇನ್ನು, ಮುಳುಗುತ್ತಿದ್ದ ಈಕೆಯನ್ನು ಕಂಡ ಸ್ಥಳೀಯರು ಮೇಲಕ್ಕೆತ್ತಿ ಬದುಕುಳಿಸಿದ್ದಾರೆ.
ಇದನ್ನೂ ಓದಿ- ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಮಾನವ ಸರಪಳಿಯಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ
ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಾರ್ವಜನಿಕರು ನಂತರ ಆಕೆಯನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ. ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ಪೊಲೀಸರು ರೇಣುಕಾ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ- ಶತಮಾನ ಪೂರೈಸಿದ ಪೋಸ್ಟಲ್ ಎಂಪ್ಲಾಯಿಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ
ಪತ್ನಿಗೆ ಮಂಜುನಾಥ್ ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆ ಮಾಡುತ್ತಿದ್ದ ಜೊತೆಗೆ ದೌರ್ಜನ್ಯ ಪ್ರಕರಣದ ಆರೋಪಿಯೂ ಆಗಿದ್ದು ಹಿಂಸೆ ತಾಳಲಾರದೇ ಕಾವೇರಿ ನದಿಗೆ ಹಾರಿದೆ ಎಂದು ರೇಣುಕಾ ಅಳಲು ತೋಡಿಕೊಂಡಿದ್ದಾರೆ.
ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.