ಬೆಂಗಳೂರು: ದಿವಂಗತ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನವೇ ಅವರು ನಟಿಸಿದ ಕೊನೆಯ ಚಲನಚಿತ್ರ "ಜೇಮ್ಸ್" ತೆರೆಕಂಡಿದೆ (James Release). ಇದೀಗ  ಅಭಿಮಾನಿಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು  ಒತ್ತಾಯ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ರಾಜಕೀಯ ಮುಖಂಡರು ಕೂಡ ಪಕ್ಷಾತೀತವಾಗಿ "ಜೇಮ್ಸ್" ಚಿತ್ರಕ್ಕೆ (James film) ತೆರಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ಹೆಚ್ಚಿದೆ. 


ಇದನ್ನೂ ಓದಿ : Karnataka Bandh: ಹಿಜಾಬ್ ಧರಿಸಲು ಅನುಮತಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್


ಕಂದಾಯ ಸಚಿವ ಆರ್ ಅಶೋಕ್ (R Ashok) ಮಾತಾಡಿ, ಪುನೀತ್ ರಾಜ್ ಕುಮಾರ್ ಈಗ ನಮ್ಮ ಮಧ್ಯೆ ಇಲ್ಲ. ಆದರೆ ಅವರು ಇಲ್ಲದಿದ್ದರೂ ಅವರು ಬದುಕಿರುವ ರೀತಿ ಹುಟ್ಟುಹಬ್ಬ ಆಚರಣೆ ಆಗುತ್ತಿದೆ. ಪುನೀತ್ ಗೆ (Puneeth Rajkumar) ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಆದಷ್ಟು ಬೇಗ ಅದನ್ನ ಕೊಡುವ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ.  


ತೆರಿಗೆ ವಿನಾಯಿತಿ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್ , ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್  ಇಂದು ಬಿಡುಗಡೆಯಾಗಿದೆ (James release). ಚಿತ್ರಮಂದಿರಗಳ  ಬಳಿ ಸಂಭ್ರಮ ಇದೆ. ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಪುನೀತ್ ಅಭಿಮಾನಿಗಳು (Puneeth Fans) ನನಗೆ ಕರೆ ಮಾಡಿದ್ದರು. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.  


ಇದನ್ನೂ ಓದಿ : ಜೈನ್ ಸಮಾಜ ಪರೋಪಕಾರಿ ಸಮಾಜ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಇದರ ಜತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು, ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ತೆರಿಗೆ ವಿನಾಯಿತಿ ನೀಡುವ ಎಲ್ಲಾ ಸಾಧ್ಯತೆಗಳು ಹೆಚ್ವಿದೆ ಎಂದು ಮೂಲಗಳು ತಿಳಿಸಿವೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.