ಬೆಂಗಳೂರು: ಮಹಾದಾಯಿ ಹೋರಾಟ ದಿನಂದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಹಾದಾಯಿ ಹೋರಾಟದಲ್ಲಿ ತೊಡಗಿರುವ ರೈತರೊಂದಿಗಿನ ಸಂಧಾನ ಯತ್ನ ವಿಫಲಗೊಂಡಿದ್ದು, ಆ ಮೂಲಕ ರೈತರ ಹೋರಾಟ ಹೊಸ ಸ್ವರೂಪ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ  ಪ್ರತಿಕ್ರಯಿಸಿರುವ  ಮಹದಾಯಿ ಹೋರಾಟ ಸಮನ್ವಯ ಸಮಿತಿಯ ಮುಖಂಡರಾದ ವೀರೇಶ್ ಸೊಬರದಮಠ ಪತ್ರಕರ್ತರ ಜೊತೆ ಮಾತನಾಡುತ್ತಾ ನಮಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಆದ್ದರಿಂದ ನಾವು ಮುಂದೆ ಇಟ್ಟ ಹೆಜ್ಜೆಯನ್ನು ಎಂದಿಗೂ ಹಿಂದೆ ಇಡುವುದಿಲ್ಲ, ಹೋರಾಟದಲ್ಲಿ ತೊಡಗಿರುವ ಹೋರಾಟಗಾರರನ್ನು ಭೇಟಿಯಾಗಲು ಇವರೆಲ್ಲರಿಗೆ ನಾಲ್ಕು ದಿನ ಬೇಕಾಗಿತ್ತೆ? ಎಂದು  ಸಂಧಾನ ಮಾಡಲು ಬಂದ ಬಿಜೆಪಿ ನಾಯಕರನ್ನು ರೈತರು ಪ್ರಶಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಬಿಜೆಪಿಯ ಸಂಧಾನ ಪ್ರಯತ್ನ ತಾರ್ಕಿಕ ಅಂತ್ಯ ಕಾಣದೆ ವಿಫಲಗೊಂಡಿದೆ.


 ನಾಳೆ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದ್ದು. ಅದರ ಭಾಗವಾಗಿ  ಡಿಸೆಂಬರ್ 27 ರಂದು ಸಂಪೂರ್ಣ ಉತ್ತರ ಕರ್ನಾಟಕವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ರೈತಪರ ಸಂಘಟನೆಗಳು ತಿಳಿಸಿವೆ. ಅಲ್ಲದೆ ಮಹಾದಾಯಿ ಸಮನ್ವಯ ಸಮಿತಿ ಹೋರಾಟಗಾರರು ನಾಳೆ ದಿನ ಚುನಾವಣಾ ಆಯೋಗ ಹಾಗೂ ರಾಜಭವನಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಕ್ಕೆ ರೈತರು ಆಗ್ರಹ ಮಾಡಲಿದ್ದಾರೆ.