ಮಹದಾಯಿ ವಿವಾದ ಇತ್ಯರ್ಥಕ್ಕೆ ರೈತ ನಿಯೋಗದಿಂದ ಸಚಿವ ಗಡ್ಕರಿಗೆ ಮನವಿ
ನವದೆಹಲಿ: ಮಹದಾಯಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ರಾಜ್ಯ ರೈತರ ನಿಯೋಗ ಭೇಟಿ ಮಾಡಿತು.
ಈ ಭೇಟಿ ಸಂದರ್ಭದಲ್ಲಿ ಮಹಾದಾಯಿ ನದಿ ವ್ಯಾಪ್ತಿಯ ಮೂರು ಜಿಲ್ಲೆಗಳ ಒಟ್ಟು 23 ರೈತರನ್ನು ಒಳಗೊಂಡ ನಿಯೋಗವು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಈ ವಿವಾದದ ವಿಚಾರವಾಗಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ರೈತರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ನಿತಿನ್ ಗಡ್ಕರಿ ಜುಲೈಯೋಳಗಡೆ ಮಹದಾಯಿ ತೀರ್ಪು ಬರಲಿದೆ ಒಂದು ವೇಳೆ ಬಾರದಿದ್ದಲ್ಲಿ ಅಗಸ್ಟ್ ಒಂದರ ಬಳಿಕ ಮತ್ತೊಮ್ಮೆ ಭೇಟಿಯಾಗುವಂತೆ ರಾಜ್ಯ ರೈತ ನಿಯೋಗಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸದ್ಯ ವಿವಾದವು ನ್ಯಾಯಧಿಕರಣದಲ್ಲಿರುವುದರಿಂದ ಈ ವೇಳೆ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ರೈತರಿಗೆ ಗಡ್ಕರಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.