Ugara Sugar Factory: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿರುವ ಉಗಾರ ಶುಗರ್ ಪ್ಯಾಕ್ಟರಿ, ರೈತರಿಂದ ಕಬ್ಬು ನುರಿಸಿ, ಅವರಿಗೆ ಲಾಭ ತರುವ ಕೆಲಸ ಮಾಡಬೇಕಿತ್ತು. ಆದರೆ ಈ ಪ್ಯಾಕ್ಟರಿ ಈ ಭಾಗದ ಜನರಿಗೆ ವರವಾಗದೆ, ಶಾಪವಾಗಿ ಪರಿಣಮಿಸಿದೆ. ಈ ಕುರಿತು ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ.


COMMERCIAL BREAK
SCROLL TO CONTINUE READING

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಹಾಗೂ ನಾಗರಹಳ್ಳಿ ಗ್ರಾಮಗಳ ಮಧ್ಯೆ ಉಗಾರ ಶುಗರ್ ಪ್ಯಾಕ್ಟರಿಯನ್ನು ನಿರ್ಮಿಸಲಾಗಿದೆ. ಇದು ನೀರಾವರಿ ಪ್ರದೇಶವಾಗಿರುವ ಕಾರಣ ಮೊದಲು ಈ ಸಕ್ಕರೆ ಕಾರ್ಖಾನೆ ಪ್ರಾರಂಭವಾದಾಗ ಈ ಭಾಗದ ರೈತರು ಕಬ್ಬು ಬೆಳೆದು ಲಾಭಗಳಿಸುವ ಕನಸು ಕಂಡಿದ್ದರು. ಅಲ್ಲದೆ ದೂರದ ಊರಿಗೆ ಕಬ್ಬು ತೆಗೆದುಕೊಂಡು ಹೋಗುವುದು ತಪ್ಪುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಆದರೆ ಈ ಕಾರ್ಖಾನೆಯಿಂದ ಈಗ ಈ ಭಾಗದ ರೈತರಿಗೆ ಲಾಭಕ್ಕಿಂತಲೂ ನಷ್ಟವೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಈ ಕಾರ್ಖಾನೆಯವರು ದಿನವಿಡಿ ಕಬ್ಬು ನುರಿಸಿದ ನಂತರ ಉಳಿಯು ಭೂದಿಯನ್ನು ಮಧ್ಯರಾತ್ರಿ ಹಾರಿಸುತ್ತಾರೆ. ಇದು ಗ್ರಾಮದ ಮನೆಗಳ ಮೇಲೆ ಹಾಗೂ ಪ್ರಮುಖವಾಗಿ, ಹೊಲದಲ್ಲಿನ ಬೆಳೆಗಳ ಮೇಲೆ ಬೀಳುತ್ತಿದೆ. ಇದರಿಂದ ಬೆಳೆ ಹಾಳಾಗತ್ತಿದೆ. 


ಇದನ್ನೂ ಓದಿ- ವಿವಿಧ ಯೊಜನೆಗಳಿಗಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ


ಈ ಪ್ಯಾಕ್ಟರಿ ಪಕ್ಕದಲ್ಲಿಯೇ ಹತ್ತಿ ಬೆಳೆಯನ್ನು ಬೆಳೆಯಲಾಗಿದೆ. ಈ ಹತ್ತಿ ಬೆಳೆಯ ಮೇಲೆ ಈ ಕಪ್ಪು ಬೂದಿ, ಮೆತ್ತಿದಂತೆ ಕೂತಿದೆ. ಇದರಿಂದ ಹತ್ತಿ ಬೆಳೆಯ ಬೆಲೆಯಲ್ಲಿ ಕುಸಿತವಾಗುತ್ತದೆ. ಅಲ್ಲದೆ ಇಳುವರಿಯೂ ಅರ್ಧಕ್ಕೆ ಕಡಿಮೆ ಬರುತ್ತಿದೆ. ಇದರಿಂದ ರೈತರು ನಷ್ಟ  ಅನುಭವಿಸುವಂತಾಗಿದೆ. ಅಲ್ಲದೆ ಈ ಬೂದಿ ಭೂಮಿಯ ಮೇಲೆ ಬೀಳುವುದರಿಂದಲೂ ಭೂಮಿಯ ಮೇಲೆಯೂ ಪರಿಣಾಮ ಬೀರುತ್ತದೆ. ಅಲ್ಲದೆ ಎಲ್ಲಾ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ. ಆದ್ದರಿಂದ ಕೂಡಲೆ ಈ ಬೂದಿ ಹಾರಿಸುವುದನ್ನು ನಿಲ್ಲಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.


ಈ ಉಗಾರ ಸಕ್ಕರೆ ಕಾರ್ಖಾನೆಯವರು ಹಾರಿಸುವ ಈ ಬೂದಿಯಿಂದ ಕೇವಲ ರೈತರ ಬೆಳೆಯ ಮೇಲಷ್ಟೆ ಅಲ್ಲ. ಸುತ್ತಲಿನ ಗ್ರಾಮದ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಈ ಬೂದಿ ಮನೆಯ ಮೆಲೆ, ನೀರಿನ ಮೇಲೆ, ಮನೆಯ ಅಂಗಳದಲ್ಲಿ ತೊಳೆದು ಹಾಕಿದ ಬಟ್ಟೆಯ ಮೇಲೆ, ಮಲಗಿದ ವ್ಯಕ್ತಿಯ ಚರ್ಮದ ಮೇಲೆ ಬೀಳುವುದರಿಂದ, ಜನರು ಚರ್ಮ ರೋಗಕ್ಕೆ  ಒಳಗಾಗುತ್ತಿದ್ದಾರೆ. ಈ ಕುರಿತು ಸುತ್ತಲಿನ ನಾಗರಹಳ್ಳಿ, ಮಳ್ಳಿ ಸೇರಿದಂತೆ ನಾಲ್ಕಾರು ಗ್ರಾಮದ ಜನರು ಹಲವಾರು ಬಾರಿ ಈ ಕಾರ್ಖಾನೆಯವರಿಗೆ ಈ ರೀತಿ ಬೂದಿ ಹಾರಿಸಬೇಡಿ ಇದರಿಂದ ನಮಗೆ ಕಷ್ಟವಾಗುತ್ತಿದೆ. ವಾತಾವರಣ ಹಾಳಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ ಗ್ರಾಮಸ್ಥರ ಮನವಿಗೆ ಈ ಪ್ಯಾಕ್ಟರಿ ಮಾಲೀಕರು ಕ್ಯಾರೆ ಅಂದಿಲ್ಲ.


ಇದನ್ನೂ ಓದಿ- "ಕಾಂಗ್ರೆಸ್‌ ಗ್ಯಾರಂಟಿಯಿಂದ ಆರ್ಥಿಕ ಬಲ; ಅಂಕಿ-ಅಂಶ ಬೇಕಿದ್ದರೆ ಕೇಳಿ ಪಡೆಯಿರಿ"


ಈ ರೀತಿಯಲ್ಲಿ ಕೆಮಿಕಲ್ ಮಿಶ್ರಿತ ಬೂದಿಯನ್ನು ಹಾರಿಸುವ ಮೂಲಕ ಈ ಜನರ ಜೀವನದೊಂದಿಗೆ ಚಲ್ಲಾಡವಾಡುತ್ತಿರುವ ಕಾರ್ಖಾನೆಯವರ ಮೇಲೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕ್ರಮ ಕೈಗೊಳ್ಳುವ ಮೂಲಕ, ಈ ಜನರ ಸಂಕಷ್ಟಕ್ಕೆ ಕೊನೆ ಹಾಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.