ಬೆಂಗಳೂರು :ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ  ಕೃಷಿ ಕಾನೂನು (Farm Law) ವಿರೋಧಿಸಿ ರೈತರು ಇಂದು ಬೆಂಗಳೂರು (Bangaluru) ನಗರಕ್ಕೆ ಮುತ್ತಿಗೆ ಹಾಕಲಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ಟ್ರ್ಯಾಕ್ಟರ್ ಜೊತೆ ಮುನ್ನುಗ್ಗುತ್ತಿದ್ದು, ನೈಸ್ ಜಂಕ್ಷನ್ (Nice Junction)ನಿಂದ ಫ್ರೀಡಂ ಪಾರ್ಕ್ (Freedom Park) ತನಕ ಟ್ರ್ಯಾಕ್ಟರ್ ಪರೇಡ್ ನಡೆಸಲು ತೀರ್ಮಾನಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮೈಸೂರು ಕಡೆಯ ರೈತರು (Farmers) ಬಿಡದಿ ಕೈಗಾರಿಕಾ ಜಂಕ್ಷನ್ ಬಳಿ, ಉತ್ತರ ಕರ್ನಾಟಕದ ರೈತರು ತುಮಕೂರು ನೈಸ್  ರಸ್ತೆ ಜಂಕ್ಷನ್ ಬಳಿ, ಚಿಕ್ಕಬಳ್ಳಾಪುರ ಕಡೆ ರೈತರು ದೇವನಹಳ್ಳಿ ನಂದಿಕ್ರಾಸ್ ಬಳಿ, ಕೋಲಾರ ಕಡೆ ರೈತರು  ಹೊಸ ಕೋಟೆ ಟೋಲ್ ಮತ್ತು ಬೆಂಗಳೂರು ಸಿಟಿ ರೈಲ್ವೆ ಜಂಕ್ಷನ್ ಬಳಿ ಬೆಳಗ್ಗೆ ಸೇರಲಿದ್ದಾರೆ.  
ಈಗಾಗಲೇ ಸಹಸ್ರ ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.  


ಇದನ್ನೂ ಓದಿಟ್ರಾಕ್ಟರ್ ರ‍್ಯಾಲಿ ಬೆನ್ನೆಲೆ ಮತ್ತೊಂದು 'ರ‍್ಯಾಲಿ ಘೋಷಣೆ' ಮಾಡಿದ ರೈತರು..!


125 ಟ್ರ್ಯಾಕ್ಟರ್ ಪರೇಡ್ ಗೆ ಪೊಲೀಸರ ಅನುಮತಿ : 
125 ಟ್ರ್ಯಾಕ್ಟರ್ ಗಳೊಂದಿಗೆ  ರೈತರು ಪರೇಡ್ ನಡೆಸಬಹುದು ಎಂದು ಪೊಲೀಸರು (Police) ತಿಳಿಸಿದ್ದಾರೆ. ಅದಕ್ಕೆ ಅನುಮತಿಯನ್ನೂ ನೀಡಲಾಗಿದೆ. ಜೊತೆಗೆ ಇತರ ವಾಹನಗಳ ಬೆಂಗಳೂರು (Bengaluru) ಪ್ರವೇಶಕ್ಕೆ ಯಾವುದೇ ನಿರ್ಬಂಧ ಕೂಡಾ ವಿಧಿಸಲಾಗಿಲ್ಲ. ಹಾಗಾಗಿ, ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಇಂದು ಹೆಚ್ಚುವ  ಎಲ್ಲಾ ಸಾಧ್ಯತೆಗಳಿವೆ.  ಅಲ್ಲದೆ, ಬೆಂಗಳೂರಿನ ಹೊರಭಾಗದ ರಸ್ತೆಗಳಲ್ಲೇ ಪೊಲೀಸರು ಟ್ರ್ಯಾಕ್ಟರ್ ಗಳನ್ನು ತಡೆಯುವ ಸಾಧ್ಯತೆಗಳಿವೆ. 


12:30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಪರೇಡ್ :
ರೈತರು ಟ್ರ್ಯಾಕ್ಟರ್ ಮತ್ತು ಇತರ ವಾಹನಗಳೊಂದಿಗೆ 12.30ಕ್ಕೆ ಫ್ರೀಡಂ ಪಾರ್ಕ್ (Freedom Park) ಗೆ ಆಗಮಿಸಲಿದ್ದಾರೆ. ಅಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ (HS Doreswamy) ಧ್ವಜಾರೋಹಣ ನೆರವೇರಿಸಲಿದ್ದಾರೆ.


ಇದನ್ನೂ ಓದಿ :ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ರೈತರ ಬೃಹತ್ ರ್ಯಾಲಿ


ಇಂದು ಆದಷ್ಟೂ ರಸ್ತೆಗಿಳಿಯಬೇಡಿ :
ಇಂದು ಬೆಂಗಳೂರಿನ ರಸ್ತೆಗಳು (Bangaluru road) ಬ್ಲಾಕ್ ಆಗುವ ಸಾಧ್ಯತೆಗಳಿರುತ್ತವೆ. ರೈತರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್ಸ್ ಕೂಡಾ ಹಾಕಬಹುದು. ಟ್ರಾಫಿಕ್  (Bangaluru traffic)ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಆದಷ್ಟೂ, ಮೆಜಿಸ್ಟಿಕ್, ಶೇಷಾದ್ರಿ ರಸ್ತೆ, ಕೆ ಆರ್. ವೃತ್ತ, ರೇಸ್ ಕೋರ್ಸ್ ರೋಡ್, ಕಾರ್ಪೋರೇಶನ್ ರಸ್ತೆ, ಕೆ.ಜಿ ರಸ್ತೆ ಇವತ್ತಿಗೆ ಅವಾಯ್ಡ್ ಮಾಡಿ. ನೆಲಮಂಗಲದಲ್ಲಿ ಬೆಳಿಗ್ಗೆಯಿಂದಲೇ ಟ್ರಾಫಿಕ್ ಜಾಮ್ ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.