ಬೆಳಗಾವಿ: ಅಲ್ಲಿ ಶಿಳ್ಳೆ-ಕೇಕೆಗಳು ಮೊಳಗಿದ್ದವು. ಯುವಕ-ಯುವತಿಯರ ಕಮಾಲ್ ನೋಡಿ ಪ್ರೇಕ್ಷಕರು, ಪೋಷಕರು ಖುಷಿಯಾಗಿದ್ರು. ಯಾಕಂದ್ರೆ ಫ್ಯಾಷನ್ ಶೋನಲ್ಲಿ ಯುವ ಸಮೂಹ ಸಖತ್ ಆಗಿ ಮಿಂಚುತ್ತಿದ್ರು. ತಮ್ಮದೇ ಸ್ಟೈಲ್‌ಲ್ಲಿ ವಾಕ್ ಮಾಡಿದ ಮಾಡೆಲ್‌ಗಳು ಎಲ್ಲರ ಗಮನ ಸೆಳೆದ್ರು.. ಆ ಕುರಿತಾದ ಒಂದು ಝಲಕ್ ಇಲ್ಲಿದೆ ನೋಡಿ....!


COMMERCIAL BREAK
SCROLL TO CONTINUE READING

ಕಲರ್ ಫುಲ್ ಲೈಟ್ಸ್..ಸೂಪರ್ ಮ್ಯೂಸಿಕ್.. ಭರ್ಜರಿ ವೇದಿಕೆ.  ಇಷ್ಟೆಲ್ಲ ಇದ್ದ ಮೇಲೆ ಯುವ ಸಮೂಹ ಸುಮ್ಮನಿರುತ್ತಾ? ನೋ ಚಾನ್ಸ್! ಇವರೂ ಅಷ್ಟೇ, ರ್ಯಾಂಪ್ ವಾಕ್ ಮಾಡಿ ಮಿಂಚಿದರು. ಪರಿಣಾಮ ರಂಗು-ರಂಗಿನ ಲೋಕವೇ ಅಲ್ಲಿ ಅನಾವರಣಗೊಂಡಿತ್ತು. ಪ್ರೇಕ್ಷಕರಂತೂ ಇವರ ವೈಯಾರ, ನಡುಗೆ ನೋಡಿ ಫಿದಾ ಆಗಿದ್ರು. ಹೌದು, ಕುಂದಾನಗರಿಯಲ್ಲಿ ನಡೆದ ಫ್ಯಾಷನ್ ಶೋ ಗಮನ ಸೆಳೆಯಿತು.


ಕೆಎಲ್ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ 12 ನೇ ವಿನ್ಯಾಸ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳೇ ಡಿಸೈನ್, ಡಿಸೈನ್ ಬಟ್ಟೆಗಳನ್ನು ಸಿದ್ಧಪಡಿಸಿದ್ರು. ಕಲರ್‌ಫುಲ್ ಬಟ್ಟೆ ಧರಿಸಿದ್ದ ಮಾಡೆಲ್‌‌ಗಳು ಕ್ಯಾಟ್ ವಾಕ್ ಮಾಡಿ ಮಿಂಚು ಹರಿಸಿದ್ರು. ಕಾಲೇಜಿನ ವಿದ್ಯಾರ್ಥಿನಿಯರೇ 27 ಪರಿಕಲ್ಪನೆಯಲ್ಲಿ ಡಿಸೈನ್ ಬಟ್ಟೆಗಳನ್ನು ಸಿದ್ಧಪಡಿಸಿದ್ದರು. ಮಾಡೆಲ್‌‌ಗಳು ಕೂಡ ಕಲರ್‌ಫುಲ್ ಭಟ್ಟೆ ಧರಿಸಿ ಸಿಕ್ಕಿದ್ದೇ ಚಾನ್ಸ್ ಎಂದು ರ್ಯಾಂಪ್ ವಾಕ್ ಮಾಡಿ ಮಿಂಚಿದ್ರು.


ಇದೆ ಮೊದಲ ಬಾರಿಗೆ ಪುಟಾಣಿ ಮಕ್ಕಳು ಕೂಡ ಬೆಕ್ಕಿನ ನಡುಗೆಯಲ್ಲಿ ಗಮನ ಸೆಳೆದರು. ಮಕ್ಕಳಿಗಾಗಿಯೇ ಬಗೆ ಬಗೆ ಡಿಸೈನ್ ಬಟ್ಟೆ ಸಿದ್ಧಪಡಿಸಲಾಗಿತ್ತು. ಕಳೆದ 2006ರಿಂದಲೂ ಕೆಎಲ್ಇ ಸಂಸ್ಥೆ ಫ್ಯಾಷನ್ ಟೆಕ್ನಾಲಜಿ ಕಾಲೇಜಿನಿಂದ ಈ ಫ್ಯಾಷನ್ ಶೋ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಒಂದೊಂದು ಥಿಮ್ ಗೆ ಅನುಸಾರವಾಗಿ ಡ್ರೇಸಗಳನ್ನು ಡಿಸೈನ್ ಮಾಡಿದ್ದಾರೆ. ಹೀಗೆ ವಿದ್ಯಾರ್ಥಿಗಳೇ ಸಂಶೋಧಿಸಿದ 27 ಥಿಮ್ ಗೆ ವಿದ್ಯಾರ್ಥಿಗಳು ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಯಾವುದೇ ಕ್ಯಾಪಿಟಲ್ ಸಿಟಿಗೂ ಕಮ್ಮಿ ಇಲ್ಲದಂತೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಿದ್ದಾರೆ.


ಇದನ್ನೂ ಓದಿ : ವ್ಯಕ್ತಿ ಮಾಡಿದ ತಪ್ಪಿನಿಂದ ಬಾಂಬ್ ನಂತೆ ಬ್ಲಾಸ್ಟ್ ಆಯ್ತು Xiaomi ಫೋನ್: ಈ ತಪ್ಪನ್ನು ನೀವು ಮಾಡ್ತಿದ್ದೀರಾ? 


ಈ ಫ್ಯಾಷನ್ ಶೋನಲ್ಲಿ ದೇಸಿಯ ಬಟ್ಟೆಗಳ ವಿನ್ಯಾಸಕ್ಕೆ ಒತ್ತು ನೀಡಲಾಗಿತ್ತು. ರಾಜವಾಡಿ ರಿವಾಯತ್, ಎಪಿಡೋಮಿ ಆಫ್ ಲವ್, ರಿಸೈಕ್ಲರ್ ಯಸ್ಟರ್ ವೇಯರ್ ಹೀಗೆ 27 ಪರಿಕಲ್ಪನೆಯಲ್ಲಿ ಬಟ್ಟೆಗಳ ವಿನ್ಯಾಸ ಮಾಡಲಾಗಿತ್ತು. 90ಕ್ಕೂ ಅಧಿಕ ಮಾಡೆಲ್‌‌ಗಳು ಈ ಭಟ್ಟೆ ಧರಿಸಿ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದ ವಿದ್ಯಾರ್ಥಿಗಳು ಆಕರ್ಷಕ ಉಡುಪುಗಳನ್ನು ತೊಟ್ಟು ಮನಮೋಹಕ ಹೆಜ್ಜೆ ಹಾಕಿದ್ದು ನೋಡುಗರನ್ನ ಮಂತ್ರ ಮುಗ್ಧಗೊಳಿಸಿತು.


ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಲಲನೆಯರ ಕ್ಯಾಟ್ ವಾಕ್, ಮನಸ್ಸು ಹಿಡಿದಿಡುವಂತಹ ಮ್ಯೂಸಿಕ್, ಮ್ಯೂಸಿಕ್ ಬೀಟ್ ಗೆ ತಕ್ಕಂತೆ ಸುಂದರಿಯರ ಮಾದಕ ಕ್ಯಾಟ್ ವಾಕ್ ನೋಡಿ ಎಲ್ಲರೂ ಎಂಜಾಯ್ ‌ಮಾಡಿದರು. ಕೆಎಲ್ಇ‌ ಕಾಲೇಜಿನ ವಿದ್ಯಾರ್ಥಿಗಳ ವಿನ್ಯಾಸ,  ಫ್ಯಾಷನ್ ಶೋ ಕಲರವ ನೋಡಿದ್ರೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಏನು ಕಮ್ಮಿ ಇಲ್ಲ ಅನ್ನೋ ರೀತಿ ವಿದ್ಯಾರ್ಥಿಗಳು ಥಳಕು ಬಳಕಿನ ನಡಿಗೆ ಎಲ್ಲರ ಕಣ್ಣುಕಟ್ಟುವಂತೆ ಮಾಡಿದ್ದು ಸುಳ್ಳಲ್ಲ.


ಇದನ್ನೂ ಓದಿ : ಅಥಣಿಯಲ್ಲಿ ಭೀಕರ ಅಪಘಾತ ಪ್ರಕರಣ : ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ


ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸೈನರ್ ಚಂದನಾ,  ಕೆಎಲ್‍ಇ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ಮೊದಲ ವರ್ಷದಿಂದಲೇ ಡಿಸೈನ್ ಕಲೆಕ್ಷನ್ ಹೇಗೆ ಮಾಡಬೇಕು.ಡಿಸೈನ್ ಹೇಗೆ ಮಾಡಬೇಕೆಂಬ ಕುರಿತು ಮಾಹಿತಿ ಸಿಗುತ್ತದೆ.ಮಾಡಲಿಂಗ್ ಮಾಡುವ ಕುರಿತಂತೆಯೂ ಅವರಿಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ.ಕೋವಿಡ್ ಕಾರಣಕ್ಕೆ 2 ವರ್ಷಗಳ ಕಾಲ ವಿನ್ಯಾಸ ನಡೆಸಿರಲಿಲ್ಲ. ಆದ್ರೆ ಈ ವರ್ಷ ನಡೆದ ಫ್ಯಾಷನ್ ಶೋ ಕಲರ್ ಫುಲ್ ಆಗಿತ್ತು. ಮಾಡೆಲ್‌ಗಳು ಮಿಂಚು ಹರಿಸಿದ್ರೆ, ಡಿಸೈನರ್ಸ್ ಕೂಡ ಬಗೆಬಗೆಯ ವಿನ್ಯಾಸದ ಬಟ್ಟೆ ಸಿದ್ಧಪಡಿಸಿ ಸೈ ಎನಿಸಿಕೊಂಡ್ರು. ಫ್ಯಾಷನ್ ಶೋ ಕಣ್ತುಂಬಿಕೊಂಡಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.