ಬೆಂಗಳೂರು: ಭಾರತ ಮತ್ತು ಅದರಾಚೆಗೆ ಮಾರಕ ಕ್ಯಾನ್ಸರ್ ವಿರುದ್ಧದ ಹೋರಾಟದ ರೂಪುರೇಶೆಗಳ ಬಗ್ಗೆ ಚರ್ಚಿಸುವ ಸಂಬಂಧ ʼದಿ ಗ್ಲೋಬಲ್ ಹೆಲ್ತ್ ಕೇರ್ ಅಕಾಡೆಮಿʼಯಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 3 ದಿನಗಳ ʼಬೆಸ್ಟ್ ಆಫ್ ಎಎಸ್‌ಸಿಒʼ ಸಮ್ಮೇಳನಕ್ಕೆ ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ರೋಗ ನಿರ್ಮೂಲನೆ ಮತ್ತು ಈ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದಿರುವ ಸಂಶೋಧನೆಗಳು ಮತ್ತು ಸುಧಾರಣೆಗಳ ಬಗ್ಗೆ ಬೆಳಕು ಚೆಲ್ಲುವ ಸಮ್ಮೇಳನ ಇದಾಗಿದೆ. ಈ ಸಮ್ಮೇಳನದಲ್ಲಿ ದೇಶದಾದ್ಯಂತ ಆಗಮಿಸಿರುವ ಪ್ರಮುಖ ಕ್ಯಾನ್ಸರ್ ರೋಗ ತಜ್ಞರು ಸಮಗ್ರ ಚರ್ಚೆ ನಡೆಸಲಿದ್ದಾರೆ. ಅದೇ ರೀತಿ ಅಮೇರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕಾಲಾಜಿ (ASCO)ನ ವಾರ್ಷಿಕ ಸಭೆಯಲ್ಲಿ ಚರ್ಚಿಸಲಾದ ಮತ್ತು ತೆಗೆದುಕೊಂಡ ಪರಿಣಾಮಕಾರಿ ನಿರ್ಧಾರಗಳನ್ನು ಮಂಡಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಸಮ್ಮೇಳನವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಕೆ.ರಮೇಶ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೆಲ್ತ್‌ಕೇರ್ ಎಂಟರ್‌ಪ್ರೈಸಸ್‌ನ ಗ್ರೂಪ್ ಮೆಡಿಕಲ್ ಅಡ್ವೈಸರ್ ಡಾ.ರಾಧೇಶ್ಯಾಂ ನಾಯಕ್ ಮತ್ತು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್‌ನ ಕಾರ್ಯಕಾರಿ ಅಧ್ಯಕ್ಷ ಡಾ.ಬಿ.ಎಸ್.ಅಜಯಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಬಡ ಮತ್ತು ಮಧ್ಯಮ ಆದಾಯವಿರುವ ಭಾರತದಂತಹ ದೇಶಗಳಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ಹೊರೆಯನ್ನು ಪರಿಹರಿಸುವ ಜರೂರು ಅಗತ್ಯದ ಬಗ್ಗೆ ಗಮನಹರಿಸಿದ ʼಬೆಸ್ಟ್ ಆಫ್ ಎಎಸ್‌ಸಿಒʼ ಸಮ್ಮೇಳನ ಇದಾಗಿದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಇಮ್ಯುನೋಥೆರಪಿಯೊಂದಿಗೆ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಆಗಿರುವ ಇತ್ತೀಚಿನ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಕಳೆದ 15 ವರ್ಷಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿರುವ ಕ್ಯಾನ್ಸರ್ ಚಿಕಿತ್ಸೆಗೆ ಈ ನವೀನ ವಿಧಾನದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆದಿದೆ. ಇದು ಕ್ಯಾನ್ಸರ್ ಆರೈಕೆ ವೃತ್ತಿಪರರಿಗೆ ಹೊಸ ಭರವಸೆಗಳನ್ನು ನೀಡುತ್ತದೆ ಎಂಬ ಅಭಿಪ್ರಾಯ ಸಮ್ಮೇಳನದಲ್ಲಿ ಮೂಡಿಬಂದಿದೆ ಎಂದರು.


ಇದನ್ನೂ ಓದಿ: ಕರಡಿ ಸಂಗಣ್ಣ ಅಸಮಧಾನ ತಣಿಸಲು ಹೈಕಮಾಂಡ್ ಸರ್ಕಸ್


ಜಿಎಚ್ಎ ಮತ್ತು ಎಚ್‌ಸಿಜಿ ಹಾಸ್ಪಿಟಲ್ಸ್‌ನ ಅಧ್ಯಕ್ಷ ಡಾ.ಅಜಯಕುಮಾರ್ ಮಾತನಾಡಿ, ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಗಣನೀಯವಾಗಿ ಸುಧಾರಣೆ ತರುವ ನವೀನ ಚಿಕಿತ್ಸಾ ವಿಧಾನಗಳನ್ನು ಅಳವಡಿಸುವ ಗುರಿಯನ್ನು ಹೊಂದಲಾಗಿದೆ. ಇದು ನೈಜ-ಪ್ರಪಂಚದ ಸನ್ನಿವೇಶಗಳ ಕಡೆಗೆ ಆಂಕಾಲಾಜಿ ಆರೈಕೆಯನ್ನು ರೀ-ಓರಿಯೆಂಟ್ ಮಾಡುವ ಅಥವಾ ತೀವ್ರ ರೀತಿಯ ಗಮನಹರಿಸುವ ವೇದಿಕೆಯಾಗಿ ಸಮ್ಮೇಳನ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.


ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಮೇಶ್ ಎಂ.ಕೆ ಅವರು ಸಮ್ಮೇಳನದ ಶೈಕ್ಷಣಿಕ ಪರಿಣಾಮಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದರು. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಯನ್ನು ಗಣನೀಯವಾಗಿ ಮುನ್ನಡೆಸಲು ಅಥವಾ ಕೈಗೊಳ್ಳಲು ಇಮ್ಯುನೋಥೆರಪಿ ವಿಧಾನಗಳು ಪೂರಕವಾಗಿವೆ ಎಂಬುದನ್ನು ಸಭೆಯ ಮುಂದಿಟ್ಟರು. ಈ ಸಮ್ಮೇಳನ ಕೇವಲ ಕಲಿಕೆಯ ವೇದಿಕೆಯಾಗಿ ಮಾತ್ರವಲ್ಲದೇ ವೈದ್ಯಕೀಯ ವೃತ್ತಿಪರರಿಗೆ ಮತ್ತಷ್ಟು ಆರೋಗ್ಯ ಸುಧಾರಣೆಗಳು ಹಾಗೂ ಅವಕಾಶಗಳಿಗೆ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಕರೆ ನೀಡಿದರು.


ಯುನೈಟೆಡ್ ಕಿಂಗ್‌ಡಂನ ಡಾ.ಆ್ಯಂಡ್ರ್ಯೂ ವಾರ್ಡ್ಲೆ ಅವರು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅಂತಾರಾಷ್ಟ್ರೀಯ ಸಹಯೋಗದ ಪ್ರಾಮುಖ್ಯತೆ ಬಗ್ಗೆ ಚರ್ಚಿಸುತ್ತಾ, ಇಮ್ಯುನೋಥೆರಪಿಯಲ್ಲಿ ಇತ್ತೀಚಿನ ಆವಿಷ್ಕಾರಗಳ ಕಡೆಗೆ ಕ್ಯಾನ್ಸರ್ ತಜ್ಞರನ್ನು ಆಕರ್ಷಿಸುವ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಂಘಟನಾ ಸಮಿತಿ ಕಾರ್ಯದರ್ಶಿ ಡಾ.ಶೇಖರ್ ಪಾಟೀಲ್ ಮತ್ತು ಅಧ್ಯಕ್ಷ ಡಾ.ರಾಧೇಶ್ಯಾಂ ಮಾತನಾಡಿ, ಇಮ್ಯುನೋಥೆರಪಿಯ ವೈಜ್ಞಾನಿಕ ತಿಳುವಳಿಕೆಯನ್ನು ಮುಂದುವರಿಸುವಲ್ಲಿ ಸಮ್ಮೇಳನ ಪಾತ್ರ ದೊಡ್ಡದು ಎಂದು ಶ್ಲಾಘಿಸಿದರು. ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ರೋಗಿಗಳ ಆರೈಕೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಬದ್ಧತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.


ಸೈಂಟಿಫಿಕ್ ಕಮಿಟಿ ಅಧ್ಯಕ್ಷ ಡಾ.ಗೋವಿಂದ ಬಾಬು ಮಾತನಾಡಿ, ಜೀನೋಮಿಕ್ಸ್, ನಿಖರವಾದ ಔಷಧಗಳು, ಕೃತಕ ಬುದ್ಧಿಮತ್ತೆ ಮತ್ತು ಕ್ಲಿನಿಕಲ್ ಸಂಶೋಧನೆಯ ಮೇಲಿನ ಚರ್ಚೆಗಳು ಸೇರಿದಂತೆ ಕ್ಯಾನ್ಸರ್ ನಿರ್ವಹಣೆಯ ಬಗೆಗಿನ ಅಂಶಗಳು ಸಮ್ಮೇಳನದ ಕೇಂದ್ರಬಿಂದುವಾಗಿದ್ದವು. ಇವೆಲ್ಲವೂ ಕ್ಯಾನ್ಸರ್ ಆರೈಕೆಗೆ ಅಗತ್ಯವಾದ ಬಹುಶಿಸ್ತೀಯ ವಿಧಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂಬುದನ್ನು ಹೇಳಿದರು.


ಇದನ್ನೂ ಓದಿ: ಚುನಾವಣಾಧಿಕಾರಿಗಳಿಂದ ಕಾರ್ಯಾಚರಣೆ ಹಣ ಜಪ್ತಿ


ಬೆಂಗಳೂರಿನಲ್ಲಿ ೩ ದಿನಗಳ ಕಾಲ ನಡೆಯಲಿರುವ ʼಬೆಸ್ಟ್ ಆಫ್ ಎಎಸ್‌ಸಿಒʼ ಸಮ್ಮೇಳನವು ಭಾರತದಲ್ಲಿ ಆಂಕಾಲಾಜಿ ಸಮ್ಮೇಳನಗಳಿಗೆ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ. ಕ್ಯಾನ್ಸರ್ ಆರೈಕೆಯ ಪ್ರಸ್ತುತ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸುವಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರ ವಹಿಸುತ್ತದೆ. ಆಂಕಾಲಾಜಿಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ತಜ್ಞರನ್ನು ಒಟ್ಟುಗೂಡಿಸುವ ಮೂಲಕ ಜಿಎಚ್ಎ ಕ್ಯಾನ್ಸರ್ ಆರೈಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಹಾಗೂ ಭಾರತ ಸೇರಿದಂತೆ ಪ್ರಪಂಚದಾದ್ಯಂತದ ರೋಗಿಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.