ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) ಇಂದು  ನಡೆಸಬೇಕಿದ್ದ ಎಫ್ ಡಿಎ ಪರೀಕ್ಷೆ ಮುಂದೂಡಲಾಗಿದೆ (FDA exam postponed).  ಎಫ್ ಡಿಎ ಪ್ರಶ್ನೆಪತ್ರಿಕೆ ಸೋರಿಕೆ (question paper leak) ಯಾಗಿದ್ದು, ಉತ್ತರಗಳೊಂದಿಗೆ ಪ್ರಶ್ನೆಪತ್ರಿಕೆಗಳೇ ಸಿಕ್ಕಿದ್ದು ಈ ನಿರ್ಧಾರಕ್ಕೆ ಕಾರಣವಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಪರೀಕ್ಷೆಯ ಮುಂದಿನ ದಿನಾಂಕ ತಿಳಿಸುವುದಾಗಿ ಕೆಪಿಎಸ್ ಸಿ ತಿಳಿಸಿದೆ. ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಪೊಲೀಸರು 14 ಜನರನ್ನು ಬಂಧಿಸಿದ್ದು, ಇನ್ನಷ್ಟು ಲೀಕಾಸುರರ ಶೋಧದಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಸಮಗ್ರ ತನಿಖೆಗೆ ಯಡಿಯೂರಪ್ಪ ಆದೇಶ : 
ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಸಿಎಂ ಯಡಿಯೂರಪ್ಪ (BS Yediyurappa), ಇದೊಂದು ಅಕ್ಷಮ್ಯ ಅಪರಾಧ, ರಾತ್ರಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಸಮಗ್ರ ತನಿಖೆಗೆ ಆದೇಶ ನೀಡಿದ್ದೇನೆ. ತಪ್ಪಿತಸ್ಥಅಧಿಕಾರಿಗಳನ್ನು ಅಗತ್ಯ ಬಿದ್ದರೆ ವಜಾ ಮಾಡಿ  ಎಂದು ಹೇಳಿರುವುದಾಗಿ ಹೇಳಿದ್ದಾರೆ. 


ಇದನ್ನೂ ಓದಿ : Karnataka State Police Recruitment 2021: 545 PSI ಹುದ್ದೆಗಳಿಗೆ ಅರ್ಜಿ ಆಹ್ವಾನ!


14 ಮಂದಿಯ ಬಂಧನ..
 ಈ ಬಗ್ಗೆ ಹೇಳಿಕೆ ನೀಡಿರುವ ಸಿಸಿಬಿ (CCB) ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ (Sandeep Patil), 14 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಹಾಗೂ ಬಂಧಿತರಿಂದ 35 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.  ಪ್ರಮುಖ ಆರೋಪಿಗಳಾಗಿರುವ ಚಂದ್ರು, ರಾಚಪ್ಪ ನೀಡಿರುವ ಮಾಹಿತಿ ಆಧರಿಸಿ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಸಿಸಿಬಿ ಬಲೆ ಬೀಸಿದೆ ಎಂದು ಅವರು ಹೇಳಿದ್ದಾರೆ. 


ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಓರ್ವ ಅಧಿಕಾರಿಯೇ..?
ತನಿಖೆಯ ಪ್ರಕಾರ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಓರ್ವಅಧಿಕಾರಿ ಎನ್ನಲಾಗಿದೆ. ಆತನೇ ತನ್ನ ಕಚೇರಿಯಿಂದ ಪ್ರಶ್ನೆ ಪತ್ರಿಕೆಗಳನ್ನು ಹೊರತಂದು ಆರೋಪಿ ಚಂದ್ರುವಿಗೆ ನೀಡಿದ್ದ. ಚಂದ್ರು ಅದನ್ನು ತಂದು ಉಲ್ಲಾಳದ ಆರ್ ಆರ್ ರೆಸಿಡೆನ್ಸಿ ಫ್ಲ್ಯಾಟಿನಲ್ಲಿಟ್ಟಿದ್ದ. ನಂತರ ರಾಜ್ಯದ ವಿವಿಧೆಡೆ ಮಧ್ಯವರ್ತಿಗಳ ಮೂಲಕ ಪೂರೈಸಲು ಸಂಚು ರೂಪಿಸಲಾಗಿತ್ತು ಎಂಬುದು ತಿಳಿದು ಬಂದಿದೆ.  ತನಿಖೆಯ ದೃಷ್ಟಿಯಿಂದ ಆ ಅಧಿಕಾರಿ ಯಾರು ಎಂಬುದನ್ನು ಪೊಲೀಸರು (Police) ಇನ್ನೂ ಹೇಳಿಲ್ಲ.


ಇದನ್ನೂ ಓದಿ : SSC: ಡಿಗ್ರಿ ಆದವರಿಗೆ ಸಿಹಿ ಸುದ್ದಿ: SSC ಯಲ್ಲಿ 6506 ಹುದ್ದೆಗಳ ನೇಮಕಾತಿಗೆ ಅರ್ಜಿ!


ಮಹಾ ಅಕ್ರಮದ ಸಂಚು ವಿಫಲವಾಗಿದ್ದು ಹೇಗೆ..?
ಆದರೆ, ಸಿಸಿಬಿ ಪೊಲೀಸರಿಗೆ ಆರ್ ಆರ್ ರೆಸಿಡೆನ್ಸಿ ಫ್ಲ್ಯಾಟಿನಲ್ಲಿ ಪ್ರಶ್ನೆ ಪತ್ರಿಕೆಗಳಿರುವ ವಾಸನೆ ಬಡಿದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಸಿಸಿಬಿ ತಂಡ ಆರ್ ಆರ್ ರೆಸಿಡೆನ್ಸಿಗೆ (RR Residency) ದಾಳಿ ನಡೆಸಿತ್ತು. ಆಗ ಶಾಕ್ ಆಗಿದ್ದು ಸಿಸಿಬಿ ತಂಡ.  ಆ ಫ್ಯ್ಲಾಟಿನಲ್ಲಿ ಎಫ್ ಡಿಎ ಪ್ರಶ್ನೆ ಪತ್ರಿಕೆ ಅಷ್ಟೇ ಅಲ್ಲ. ಅದರ ಉತ್ತರವೂ ಸಿದ್ದವಾಗಿತ್ತು. ಅಷ್ಟೆ ಅಲ್ಲದೆ ಅದರ ವಿತರಣೆಗೂ ಸರ್ವ ಸಿದ್ದತೆ ಮಾಡಲಾಗಿತ್ತು. 


ಕೆಪಿಎಸ್ ಸಿ 1112 ಪ್ರಥಮ ದರ್ಜೆ ಸಹಾಯಕರ First Division Assistant ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿತ್ತು. ಅದರ ಪರೀಕ್ಷೆ ಇವತ್ತಿಗೆ ನಿಗದಿಗೊಂಡಿತ್ತು. ಕಳೆದ ರಾತ್ರಿ ಬೆಂಗಳೂರಿನಲ್ಲಿ (Bengaluru) ಪ್ರಶ್ನೆ ಪತ್ರಿಕೆ ಲೀಕಾಸುರರನ್ನು ಬಂಧಿಸಲಾಗಿತ್ತು. ರಾಜ್ಯಾದ್ಯಂತ ಲಕ್ಷಾಂತರ  ವಿದ್ಯಾರ್ಥಿಗಳು ಎಫ್ ಡಿಎ ಪರೀಕ್ಷೆ ಬರೆಯಲು ಸಜ್ಜಾಗಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.