ಕಲಬುರಗಿ: ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆ ಹಾಗೂ ಸಮರ್ಪಕ ವೈದ್ಯಕೀಯ ಸೇವೆಯನ್ನು ಒದಗಿಸಲು ಅನುಕೂಲವಾಗುವಂತೆ ಕಲಬುರಗಿ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿಯಿರುವ ಶುಶ್ರೂಷಕರು-53 ಹುದ್ದೆ, ಫಾರ್ಮಾಸಿಸ್ಟ್ 50 ಹುದ್ದೆ ಹಾಗೂ ಲ್ಯಾಬ್ ಟೆಕ್ನಿಷಿಯನ್ 08 ಅರೆ ವೈದ್ಯಕೀಯ ಹುದ್ದೆಗಳನ್ನು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಾಕ್-ಇನ್-ಇಂಟರ್‍ವ್ಯೂವ್ (ನೇರ ಸಂದರ್ಶನ) ಮೂಲಕ ಭರ್ತಿ ಮಾಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಮೇಲ್ಕಂಡ ಹುದ್ದೆಗಳನ್ನು 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಅಥವಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿಯಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಶುಶ್ರೂಷಕರ ಹುದ್ದೆಗೆ 25,000 ರೂ. ವೇತನ ಹಾಗೂ ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳಿಗೆ ತಲಾ 20,000 ರೂ.ಗಳ ಮಾಸಿಕ ವೇತನ ನೀಡಲಾಗುತ್ತದೆ.


2020 ರ ಜುಲೈ 23 ರಂದು ಶುಶ್ರೂಷಕರ ಹುದ್ದೆಗೆ ಹಾಗೂ ಜುಲೈ 24 ರಂದು ಫಾರ್ಮಾಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಹಿಂದುಗಡೆ ಹೆಚ್.ಐ.ಟಿ ಹಾಲ್‍ನಲ್ಲಿ ವಾಕ್‍ಇನ್‍ಇಂಟರವ್ಯೂವ್ ನಡೆಯಲಿದೆ. ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ಮೂಲ, ಜಿರಾಕ್ಸ್ ಶೈಕ್ಷಣಿಕ ದಾಖಲಾತಿ, ಬಯೋಡಾಟಾ ಹಾಗೂ ಪಾಸ್‍ಪೋರ್ಟ ಸೈಜಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ನಂತರ ಬಂದ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ.


ಅಭ್ಯರ್ಥಿಗಳು ವಯೋಮಿತಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278618ಗೆ ಸಂಪರ್ಕಿಸಲು ಕೋರಲಾಗಿದೆ.