RLB: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ `ಭರ್ಜರಿ ಗುಡ್ ನ್ಯೂಸ್`..!
RLB ಅನುದಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಮಣಿಪುರ, ಗುಜರಾತ್, ಗೋವಾ ಸೇರಿದಂತೆ 18 ರಾಜ್ಯಗಳಿಗೆ ಒಟ್ಟು 12,351.5 ಕೋಟಿ ರೂ ಬಿಡುಗಡೆ
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (RLB) ಎರಡನೇ ಕಂತಿನ 2412.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
RLB ಅನುದಾನವಾಗಿ ಕರ್ನಾಟಕ(Karnataka), ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಮಣಿಪುರ, ಗುಜರಾತ್, ಗೋವಾ ಸೇರಿದಂತೆ 18 ರಾಜ್ಯಗಳಿಗೆ ಒಟ್ಟು 12,351.5 ಕೋಟಿ ರೂ ಬಿಡುಗಡೆ ಮಾಡಿದ್ದು, ಈ ಮೊತ್ತ 2020-21ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಮೂಲ ಅನುದಾನದ 2ನೇ ಕಂತಾಗಿದೆ. ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಒಟ್ಟು 45,738 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Uddhav Thackeray: 'ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ'
ಹಳ್ಳಿ, ತಾಲೂಕುಗಳಾದ್ಯಂತ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲು ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಿಗೆ ಅಂದರೆ ಗ್ರಾಮ, ತಾಲೂಕು ಹಾಗೂ ಜಿಲ್ಲೆಗಳಿಗೆ ಈ ಅನುದಾನ ನಿಡಲಾಗುತ್ತದೆ. ಕೇಂದ್ರದ ಯೋಜನೆಗಳಾದ ಸ್ವಚ್ಚ ಭಾರತ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯವು ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಹಣಕ್ಕೆ ಹೆಚ್ಚುವರಿಯಾಗಿ ಈ ಅನುದಾನ ನೀಡಲಾಗುತ್ತದೆ.
Congress: ರಾಮ ಮಂದಿರ ನಿರ್ಮಾಣಕ್ಕೆ '₹ 2 ಲಕ್ಷ ದೇಣಿ'ಗೆ ನೀಡಿದ ಕಾಂಗ್ರೆಸ್ ಶಾಸಕಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.ದೆ.