ಬೆಂಗಳೂರು: ಇನ್ನೊಂದು ದಿನದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಘೋಷಣೆ ಜೊತೆ ರೂಪುರೇಷೆ ಮಾಡಲಿದ್ದು, ಐದು ಗ್ಯಾರೆಂಟಿ ಪೈಕಿ ಮೂರು ಗ್ಯಾರಂಟಿಗಳನ್ನ ನಾಳೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಿದೆ. ಆದರೆ ಗ್ಯಾರೆಂಟಿ ಗಳ ಅನುಷ್ಠಾನಕ್ಕೆ ಆರ್ಥಿಕ ಸವಾಲು ಎದುರಾಗಿದ್ದು ಇದಕ್ಕೆ ಹಲವು ಸಲಹೆಗಳನ್ನ ಅಧಿಕಾರಿಗಳು ಸರ್ಕಾರಕ್ಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡುತ್ತಿದ್ದಂತೆ ಶಾಕ್ ಕೊಡೋ ರಚಿತಾ ರಾಮ್ ಫೋಟೋ ವೈರಲ್..! ಏನಿದೆ ಅದ್ರಲ್ಲಿ…


ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಮನೆ ಯಜಮಾನಿಗೆ ಎರಡು ಸಾವಿರ ರೂ. ಖಚಿತ, ಬಿಪಿಎಲ್ ಕಾರ್ಡ್ ಸದಸ್ಯರಿಗೆ 10 ಕೆಜಿ ಅಕ್ಕಿ ನಿಶ್ಚಿತ, ನಿರುದ್ಯೋಗ 3 ಸಾವಿರ ರೂ.ಖಂಡಿತ, ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಮೇಲೆ ದಿನಗಳು ಕಳೆದಂತೆ ಒತ್ತಡ ಹೆಚ್ಚುತ್ತಿದೆ.


ಅಧಿಕಾರಿವೃಂಧ ಯೋಜನೆ ಅನುಷ್ಠಾನಕ್ಕೆ ಇರುವ ವಿವಿಧ ಮಾರ್ಗಗಳ ಸಲಹೆ ನೀಡಿದ್ದಾರೆ. ಹಾಗೂ ಪ್ರತಿಯೊಂದು ಮಾರ್ಗದ ಲಾಭ ನಷ್ಟದ ಬಗ್ಗೆ ವಿವರಿಸಿದ್ದಾರೆ. ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಮಂತ್ರಿ ಮಂಡಲ ಸದಸ್ಯರಿಗೆ ಷರತ್ತುಗಳನ್ನು ಅಳವಡಿಸಿಕೊಂಡರೆ ಸರ್ಕಾರದ ಮೇಲೆ ಆಗುವ ಪರಿಣಾಮಗಳು ವಿವರಿಸಿದ್ದಾರೆ.


ಅಧಿಕಾರಿ ವೃಂದದ ಸಲಹೆಗಳು ಏನು?


1. ಎಲ್ಲ ಗ್ಯಾರೆಂಟಿಗಳನ್ನೂ ಒಟ್ಟಿಗೆ ಅನುಷ್ಠಾನ ಮಾಡುವುದರಿಂದ ಹಣಕಾಸು ಹೊಂದಾಣಿಕೆ ಕಷ್ಟ ಆಗಲಿದೆ.


2. ಮೊದಲು ಯಾವುದಾದರೂ ಎರಡು ಗ್ಯಾರೆಂಟಿಯನ್ನು ಅನುಷ್ಠಾನ ಮಾಡುವುದು ಸೂಕ್ತ.


3. ಸರ್ಕಾರದ ದೀರ್ಘಾವಧಿ ಸಾಲಗಳ ಕಂತು ವಿಸ್ತರಣೆ ಮೂಲಕ ಕಂತು ಮರುಪಾವತಿ ಮೊತ್ತವನ್ನು ಕಡಿಮೆ ಮಾಡಿಕೊಂಡರೆ ಒಂದಷ್ಟು ಹಣ ಲಭ್ಯವಾಗಲಿದೆ.


4.  ಉಚಿತ ವಿದ್ಯುತ್ ಯೋಜನೆೆಯಲ್ಲಿ ಮೊದಲು ಜನರಿಂದ ಹಣ ಕಟ್ಟಿಸಿಕೊಂಡು ಬಳಿಕ ಜನರ ಖಾತೆಗೆ ಸಬ್ಸಿಡಿ ಹಣ ಜಮಾ ಮಾಡುವುದೇ ಸೂಕ್ತ.


5. ಉಚಿತ ಪ್ರಯಾಣ ಯೋಜನೆ ಲಾನುಭವಿಗಳಿಗೆ ಪ್ರಯಾಣದ ಮಿತಿ, ಪರಿಮಿತಿ ಹಾಕಿದರೆ ಸೂಕ್ತ.


ಇದನ್ನೂ ಓದಿ:Dark Chocolate : ಡಾರ್ಕ್ ಚಾಕೊಲೇಟ್ ಈ ಸಮಸ್ಯೆಗೆ ರಾಮಬಾಣ.. ಕೆಲವೇ ಸೆಕೆಂಡುಗಳಲ್ಲಿ ನೀಡುತ್ತೆ ಪರಿಹಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ