Bengaluru: ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್ಐಆರ್
FIR against Chinnaswamy Stadium Management: ಆರ್ಸಿಬಿ ಮತ್ತು ದೆಹಲಿ ಪಂದ್ಯ ವೀಕ್ಷಣೆ ವೇಳೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಆರ್ಸಿಬಿ ಮತ್ತು ದೆಹಲಿ ಪಂದ್ಯ ವೀಕ್ಷಣೆ ವೇಳೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಚೈತನ್ಯ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚೈತನ್ಯ ಅವರು ಕತಾರ್ ಏರ್ವೇಸ್ ಫ್ಯಾನ್ ಸ್ಟಾಂಡ್ ನಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದರು.
ಇದನ್ನೂ ಓದಿ: ನೇಹಾ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ನಡೆಯಿತು ಮತ್ತೊಂದು ಕೊಲೆ : ಮನೆ ಮಂದಿ ಕಣ್ಣೆದುರೇ ಯುವತಿ ಹತ್ಯೆ
ಸ್ಟೇಡಿಯಂ ನ ಕತಾರ್ ಏರ್ವೇಸ್ ಫ್ಯಾನ್ ಸ್ಟಾಂಡ್ ನಲ್ಲಿ ಡ್ರೈ ಜಾಮೂನ್ ಮತ್ತು ಗೀ ರೈಸ್ ಪಡೆದಿದ್ದರು. ನಂತರ ಪುಡ್ ಪಾಯ್ಸನ್ ಆಗಿ ಸ್ಟೇಡಿಯಂ ನಲ್ಲಿ ಕುಸಿದುಬಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಊಟದಲ್ಲಿ ಫುಡ್ ಪಾಯಿಸನ್ ಆಗಿದೆಯೆಂದು ವೈದ್ಯರು ದೃಡಪಡಿಸಿದ್ದರು.
ಆರೋಗ್ಯ ಹದಗೆಡಲು ಸ್ಟೇಡಿಯಂ ನ ಕ್ಯಾಂಟೀನ್ ಊಟ ಹಾಗೂ ಮ್ಯಾನೇಜ್ಮೆಂಟ್ ಕಾರಣವೆಂದು ಚೈತನ್ಯ ಎಂಬುವವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Pre-Monsoon Season: ಪೂರ್ವ ಮುಂಗಾರು ಹಂಗಾಮಿನ ವೇಳೆ ನಿಮ್ಮ ಭೂಮಿಯನ್ನು ಸಿದ್ದಪಡಿಸುವ ವಿಧಾನ ಹೇಗೆ ಗೊತ್ತೇ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.