ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರುಗೊಡ್ತಿ ಅಲ್ಲ ಎಂದು ಅವರ ಜಾತಿ ಬಗ್ಗೆ ಪ್ರಸ್ತಾಪಿಸಿ ಜಾತಿ ಸಂಘರ್ಷಕ್ಕೆ ಎಡೆಮಾಡಿಕೊಡುವ ಹೇಳಿಕೆ ನೀಡಿದ್ದ ಸಂಸದ ಎಲ್​.ಆರ್​. ಶಿವರಾಮೇಗೌಡ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಮಂಡ್ಯ ಲೋಕಸಭಾ ಚುನಾವಣೆಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ನಾಮಂಗಲ ತಾಲೂಕಿನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ, ಸಂಸದ ಎಲ್.ಆರ್.ಶಿವರಾಮೇಗೌಡ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನಾಯ್ಡು ಜಾತಿಯವರು, ಚಿತ್ರನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹ ನಾಯ್ಡು ಜಾತಿಯವರು. ಇವರಾರೂ ಒಕ್ಕಲಿಗರಲ್ಲ. ಜಿಲ್ಲೆಯನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಶಿವರಾಮೇಗೌಡ ಅವರು ಕೋಮು ದ್ವೇಷ ಹರಡುವ ಹಾಗೂ ಜಾತಿ ಸಂಘರ್ಷ ಉಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ  ಜಿಲ್ಲಾ ಕಾಂಗ್ರೆಸ್​ ಕಾರ್ಯದರ್ಶಿ ಕಬ್ಬಾಳಯ್ಯ ಬುಧವಾರ ಚುನಾವಣಾಧಿಕಾರಿಗೆ ದೂರು ನೀಡಿದ್ದರು.


ಈ ಹಿನ್ನೆಲೆಯಲ್ಲಿ ಆರ್​.ಪಿ. ಕಾಯ್ದೆ 125ರ ಪ್ರಕಾರ ಜಾತಿ ಜಾತಿಗಳ ನಡುವೆ ಕೋಮುವಾದ ಸೃಷ್ಟಿಸುವ ಆರೋಪದ ಮೇಲೆ ಫ್ಲೈಯಿಂಗ್​ ಸ್ಕ್ವಾಡ್​ ರಾಘವೇಂದ್ರ ಅವರು ನಾಗಮಂಗಲ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.