Fire in car: ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ನ್ಯಾನೋ ಕಾರು
Fire in a Nano car: ಬೆಂಗಳೂರು ನಗರದ ಪ್ಯಾಲೆಸ್ ಗುಟ್ಟಹಳ್ಳಿ ಬಳಿ ಇಂದು ಬೆಳಗ್ಗೆ ನ್ಯಾನೋ ಕಾರು ಧಗಧಗನೆ ಹೊತ್ತಿ ಉರಿದಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಕಾರುಗಳು ಹೊತ್ತಿ ಉರಿಯುತ್ತಿವೆ. ಪದೇಪದೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ನಗರದ ಪ್ಯಾಲೆಸ್ ಗುಟ್ಟಹಳ್ಳಿ ಬಳಿ ಇಂದು ಬೆಳಗ್ಗೆ ನ್ಯಾನೋ ಕಾರು (Fire in a Nano car) ಧಗಧಗನೆ ಹೊತ್ತಿ ಉರಿದಿದೆ.
ಮುಖ್ಯ ರಸ್ತೆಯಲ್ಲೇ ನಿಂತಿದ್ದ ನ್ಯಾನೋ ಕಾರಿನಲ್ಲಿ (Fire in car) ಧಿಡೀರ್ ಬೆಂಕಿ ಕಾಣಿಸಿಕೊಂಡಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಕಾರು ಸುಟ್ಟು ಕರಕಲಾಗಿತ್ತು.
ತಾಂತ್ರಿಕ ದೋಷ ಕಾರಣ?:
ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ನಿಂತಿದ್ದ ನ್ಯಾನೋ ಕಾರಿನಲ್ಲಿ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಈ ಅವಘಡಕ್ಕೆ ತಾಂತ್ರಿಕ ದೋಷ ಕಾರಣ ಎನ್ನಲಾಗಿದೆ.
[[{"fid":"225770","view_mode":"default","fields":{"format":"default","field_file_image_alt_text[und][0][value]":"Fire in a Nano car on the main road in Bengaluru ","field_file_image_title_text[und][0][value]":"ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ "},"type":"media","field_deltas":{"1":{"format":"default","field_file_image_alt_text[und][0][value]":"Fire in a Nano car on the main road in Bengaluru ","field_file_image_title_text[und][0][value]":"ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ "}},"link_text":false,"attributes":{"alt":"Fire in a Nano car on the main road in Bengaluru ","title":"ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ","class":"media-element file-default","data-delta":"1"}}]]
ಪದೇಪದೆ ಬೆಂಕಿಯ ಆರ್ಭಟ!:
ರಾಜಧಾನಿ ಬೆಂಗಳೂರಲ್ಲಿ ಕಾರುಗಳಿಗೆ ದಿಢೀರ್ ಬೆಂಕಿ ಹೊತ್ತಿಕೊಳ್ಳುವುದು ಕಾಮನ್ ಆಗೋಗಿದೆ. ಕೆಲವು ಸಂದರ್ಭಗಳಲ್ಲಿ ಇದೇ ಕಾರಣಕ್ಕೆ ಮಾರುದ್ದ ಟ್ರಾಫಿಕ್ ಕೂಡ ಎದುರಾಗಿದ್ದು ಉಂಟು. ಕೆಲ ವರ್ಷಗಳ ಹಿಂದೆ ಪೆಟ್ರೋಲ್ ಬಂಕ್ ಪಕ್ಕದಲ್ಲೇ ನಿಂತಿದ್ದ ಓಮ್ನಿ ಒಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅದೃಷ್ಟವಶಾತ್ ಯಾವುದೇ ದೊಡ್ಡಮಟ್ಟದ ಹಾನಿ ಸಂಭವಿಸಲಿಲ್ಲ. ಹೀಗೆ ಪದೇಪದೆ ಕಾರುಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಸಹಜವಾಗಿ ಬೆಂಗಳೂರಿಗರಲ್ಲಿ ಆತಂಕ ಉಂಟುಮಾಡಿದೆ.
ಇದನ್ನೂ ಓದಿ: e-RUPI: ನಗದು ರಹಿತ ವಿದ್ಯಾರ್ಥಿವೇತನಕ್ಕಾಗಿ 'ಇ-ರೂಪಿ' ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.