H3N2 First Death In India: ಭಾರತದಲ್ಲಿ ಇನ್ಫ್ಲುಯೆನ್ಸ ವೈರಸ್ ಅಂದರೆ H3N2 ವೈರಸ್ ನಿಂದಾದ  ಸಾವಿನ ಮೊದಲ ಪ್ರಕರಣ ವರದಿಯಾಗಿದೆ. ಈ ವೈರಸ್‌ನಿಂದ ಕರ್ನಾಟಕದ ಹಾಸನದ 82 ವರ್ಷದ ವ್ಯಕ್ತಿಯ ಸಾವು ದೃಢಪಟ್ಟಿದೆ ಎಂದು ಹೇಳಲಾಗಿದೆ. ಮೃತರ ಹೆಸರು ಹೀರೆಗೌಡ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಅವರು ಮಾರ್ಚ್ 1 ರಂದು ನಿಧನರಾಗಿದ್ದರು. ಇದೀಗ ಆತನಿಗೆ ಎಚ್3ಎನ್2 ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪತ್ತಿದೆ.

COMMERCIAL BREAK
SCROLL TO CONTINUE READING

ಹೀರೆಗೌಡ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಕೂಡ ಬಳಲುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 24 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮಾರ್ಚ್ 1 ರಂದು ನಿಧನರಾಗಿದ್ದಾರೆ. ಮಾರ್ಚ್ 6 ರಂದು ಅವರ ಪರೀಕ್ಷಾ ವರದಿ ಧನಾತ್ಮಕ ಎಂದು ಬಹಿರಂಗಗೊಂಡಿದೆ.


ಇದನ್ನೂ ಓದಿ-ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ಒಂದು ಪರಿಣಾಮಕಾರಿ ಮನೆಮದ್ದು!

ಗಮನಾರ್ಹವೆಂದರೆ ಐದು ದಿನಗಳ ಹಿಂದೆ ಕರ್ನಾಟಕದ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಎಚ್3ಎನ್2 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಆರೋಗ್ಯ ಸಚಿವರ ಪ್ರಕಾರ, ಕೇಂದ್ರವು ಪ್ರತಿ ವಾರ 25 ಪರೀಕ್ಷೆಗಳ ಗುರಿಯನ್ನು ಹೊಂದಿದೆ. 15 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ ಎಂದು ಹೇಳಿದ್ದರು.


ಇದನ್ನೂ ಓದಿ-Cholesterol ನ ಈ ಲಕ್ಷಣಗಳನ್ನು ಮರೆತೂ ನಿರ್ಲಕ್ಷಿಸಬೇಡಿ, ಇಲ್ದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

ಗಮನಾರ್ಹವಾಗಿ, ಪ್ರಸ್ತುತ, ಹಾಂಗ್ ಕಾಂಗ್ ಫ್ಲೂ ಎಂದು ಕರೆಯಲ್ಪಡುವ H3N2 ವೈರಸ್‌ನ 90 ಪ್ರಕರಣಗಳು ದೇಶದಲ್ಲಿ ದೃಢಪಟ್ಟಿವೆ. ಇದಲ್ಲದೇ ಎಂಟು ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವೈದ್ಯರು ಕೂಡ ಹೇಳಿಕೆ ನೀಡಿದ್ದಾರೆ. ಇದರಿಂದ ಸೋಂಕಿತರಿಗೆ ಜ್ವರ, ನೆಗಡಿ, ಕಫ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಲ್ಲದೆ, ಅವರು ದೇಹದ ನೋವು, ಗಂಟಲುನೋವು ಮತ್ತು ಅತಿಸಾರದ ಬಗ್ಗೆ ದೂರು ಬರುತ್ತಿವೆ. ಈ ರೋಗಲಕ್ಷಣಗಳು ಒಂದು ವಾರದವರೆಗೆ ಅಥವಾ ಅದಕ್ಕಿಂತ ಹೆಚ್ಚಾಗಿ ಇರುವ ಸಾಧ್ಯತೆ ಇದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.