ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಸೇಫ್
Amarnath Yatra 2023: ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಸೇಫ್ ಆಗಿದ್ದಾರೆ. ಸದ್ಯ ಕಾಫಿನಾಡಿಗರು ಮರನಾಥ ಬಳಿಯ ಶೇಷನಾಗ್ ಪ್ರದೇಶದಲ್ಲಿದ್ದಾರೆ. ಚಿಕ್ಕಮಗಳೂರಿನಿಂದ ಕಳೆದ ವಾರ ಯಾತ್ರೆಗೆ ತೆರಳಿದ್ದ ಯಾತ್ರಿಕರು.
ಚಿಕ್ಕಮಗಳೂರು: ಅಮರನಾಥ್ ನಲ್ಲಿ ಸಿಲುಕಿರುವ ಕರ್ನಾಟಕದ ಯಾತ್ರಾರ್ಥಿಗಳ ರಕ್ಷಣೆಗೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿಯವರನ್ನು ನೇಮಿಸಲಾಗಿದೆ. ಮಳೆಯಾಗುತ್ತಿರುವುದರಿಂದ ಅವರನ್ನು ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ರಕ್ಷಿಸಲಾಗುತ್ತಿಲ್ಲ.
ನಮ್ಮ ಅಧಿಕಾರಿಗಳು ಅಲ್ಲಿನ ಪ್ರಾದೇಶಿಕ ಆಯುಕ್ತರು ಹಾಗೂ ಡಿಸಿ, ಮತ್ತು ಪೊಲೀಸರೊಂದಿಗೆ ಮಾತನಾಡಿದ್ದಾರೆ. ಮಳೆ ಕಡಿಮೆಯಾದ ನಂತರ ರಕ್ಷಣಾ ಕಾರ್ಯ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ: ʼಯೇ ಸಾವು ಆಗಿಲ್ಲ ಮಾರ್ರೆ ಪ್ರದೀಪ್; ಬಜೆಟ್ ಮಂಡನೆ ವೇಳೆ ಸ್ವೀಕರ್, ಶಾಸಕನಿಗೆ ಪಾಠ.. ವಿಡಿಯೋ ವೈರಲ್ .. !
ಇದೀಗ ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಸೇಫ್ ಆಗಿದ್ದಾರೆ. ಸದ್ಯ ಕಾಫಿನಾಡಿಗರು ಮರನಾಥ ಬಳಿಯ ಶೇಷನಾಗ್ ಪ್ರದೇಶದಲ್ಲಿದ್ದಾರೆ. ಚಿಕ್ಕಮಗಳೂರಿನಿಂದ ಕಳೆದ ವಾರ ಯಾತ್ರೆಗೆ ತೆರಳಿದ್ದ ಶ್ರೀನಿವಾಸ್, ಮಣಿ, ಭರತ್, ಚಂದ್ರಶೇಖರ್, ಮನೋಜ್ ಸುರಕ್ಷಿತವಾಗಿದ್ದಾರೆ. ಇನ್ನು ಕರ್ನಾಟದಿಂದ ತೆರಳಿದ್ದ ಹಲವರನ್ನು ಸುರಕ್ಷಿತವಾಗಿ ವಾಪಸ್ ಕರೆಸಲು ಸರ್ಕಾರ ಆಯೋಜಿಸಿದೆ.
ಪವಿತ್ರ ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತವಾಗಿ ಮರಳಲು ಅಗತ್ಯ ಎಲ್ಲಾ ನೀಡಲಾಗುವುದು. 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ನಿ ಟೆಂಟ್ ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.