ಬೆಂಗಳೂರು : ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಹಿನ್ನೆಲೆ ಬಿಬಿಎಂಪಿ ಮಾರ್ಷಲ್ಸ್ ಗಳಿಗೆ ಟಾರ್ಗೆಟ್ ನೀಡಿದ. ಕೋವಿಡ್ ನಿಯಮ ಉಲ್ಲಂಘಿಸಿದ್ರೆ ವಿಧಿಸುವ ದಂಡ ಸಂಖ್ಯೆ ಹೆಚ್ಚಿಸಲು ಮಾರ್ಷಲ್ಸ್ ಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ಮಾರ್ಗಸೂಚಿ(Covid Guidelines) ಉಲ್ಲಂಘಿಸಿದ್ರೆ ಭಾರೀ ದಂಡ‌ ಹಾಕಲು ಬಿಬಿಎಂಪಿ ಮಾರ್ಷಲ್ಸ್ ಗಳು ಸಿದ್ದರಾಗಿದ್ದಾರೆ. ಹೀಗಾಗಿ ಮಾರ್ಷಲ್ಸ್ ಗಳು ಇಂದಿನಿಂದ ಮತ್ತಷ್ಟು ಆ್ಯಕ್ಟೀವ್ ಆಗಲಿದ್ದಾರೆ. 


ಇದನ್ನೂ ಓದಿ : JOBS: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗಾಗಿ ಅರ್ಜಿ ಅಹ್ವಾನ


ಬೆಂಗಳೂರಿಗರು ಮಾಸ್ಕ್(Mask) ಇಲ್ಲದೆ ಹೊರ ಹೋಗುವ‌‌ ಮುನ್ನ ಇರಲಿ ಎಚ್ಚರವಾಗಿರಬೇಕಾಗಿದೆ. ಜನಸಂದಣಿ ಪ್ರದೇಶಗಳು, ಮಾರ್ಕೆಟ್, ಸಿಗ್ನಲ್, ಮಾಲ್, ಥಿಯೇಟರ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಲ್‌ಗಳಲ್ಲಿ ಮಾರ್ಷಲ್ಸ್ ಗಳು ಕಾರ್ಯಾಚರಣೆ ನಡೆಸಲಿದ್ದಾರೆ.


ರಾಜಧಾನಿಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗಿದ್ರೂ ಬಹಳಷ್ಟು ಮಂದಿ ಮಾಸ್ಕ್ ಹಾಕ್ತಿಲ್ಲ ಮತ್ತೆ ಸಾಮಾಜಿಕ ಅಂತರ ಪಾಲಿಸ್ತಿಲ್ಲ ಹೀಗಾಗಿ ತಜ್ಞರ ಸಲಹೆಯಂತೆ ಕಟ್ಟುನಿಟ್ಟಿನ ‌ಕ್ರಮಕ್ಕೆ ಬಿಬಿಎಂಪಿ(BBMP) ಮುಂದಾಗಿದೆ. 


ಇದನ್ನೂ ಓದಿ : ನಿರುದ್ಯೋಗಿ ಯುವಕ, ಯುವತಿಯರಿಗೆ ಇಲ್ಲೊಂದು ಸುವರ್ಣ ಅವಕಾಶ...ನೀವು ಕೂಡ ಅರ್ಜಿ ಹಾಕಬಹುದು..!


ದಂಡದ ಮೊತ್ತ‌ ಹೆಚ್ಚಳ‌ ಇಲ್ಲ ಬದಲಾಗಿ ನಿತ್ಯ ವಿಧಿಸುವ ಸಂಖ್ಯೆ ಹೆಚ್ಚಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.