ಉಡುಪಿ: ಕೊರೊನಾ 3ನೇ ಅಲೆ(Covid 3rd Wave)ಯ ಭೀತಿಯ ಮಧ್ಯೆಯೇ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾಲುಬಾಯಿ ರೋಗ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾರ್ಕಳ ನಗರ(Udupi District Karkala)ದ ಆಸುಪಾಸಿನಲ್ಲಿ 50ಕ್ಕೂ ಅಧಿಕ ಜಾನುವಾರುಗಳು ಕಾಲುಬಾಯಿ ರೋಗಕ್ಕೆ ಬಲಿಯಾಗಿವೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಅನೇಕ ಜಾನು​ವಾ​ರು​ಗಳಲ್ಲಿ ಕಾಲು​ಬಾಯಿ ಜ್ವರ(Foot and Mouth Disease) ಕಾಣಿ​ಸಿ​ಕೊಂಡಿರುವುದರಿಂದ ಇಲ್ಲಿನ ಗ್ರಾಮಸ್ಥರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ತೆಳ್ಳಾರು, ಮಿಯಾರು, ದುರ್ಗಾ ಮೊದಲಾದ ಕಡೆ ಕಾಯಿಲೆ ಕಾಣಿಸಿಕೊಂಡಿದೆ. ಜಾನುವಾರುಗಳ ಬಾಯಿಯಲ್ಲಿ ಮತ್ತು ಗೊರಸಿನ ಸಂಧಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತಿದೆ. ಪರಿನಾಮ ಆಹಾರ ಸೇವಿಸಲು ಆಗದೆ ಜಾನುವಾರುಗಳು ಯಾತನೆ ಪಡುತ್ತಿವೆ.


ಇದನ್ನೂ ಓದಿ: Republic Day 2022: ದೆಹಲಿಯಲ್ಲಿ ಮಿಂಚಲಿದ್ದಾಳೆ ಮೈಸೂರಿನ ಕುವರಿ


ಕೆಲ ಗ್ರಾಮ​ಗ​ಳ ಜಾನು​ವಾ​ರು​ಗ​ಳಲ್ಲಿ ಕಾಲು​ಬಾ​ಯಿ ರೋಗ ಲಕ್ಷಣ(Foot and Mouth Disease in Cattle)ಕಾಣಿಸಿಕೊಂಡಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ರೋಗ ಬಂದ ಐದಾರು ದಿನದಲ್ಲಿಯೇ ಹಸುಗಳು ಸಾವನ್ನಪ್ಪುತ್ತಿವೆ. ಜಾನು​ವಾ​ರು​ಗಳು ಕಾಲು​ಬಾಯಿ ರೋಗಕ್ಕೆ ತುತ್ತಾ​ಗುತ್ತಿರುವುದರಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ. ಈ ಪ್ರಕ​ರ​ಣ​ಗಳು ವರ​ದಿ​ಯಾ​ಗು​ತ್ತಿ​ದ್ದಂತೆಯೇ ರಾಸು​ಗ​ಳಿಗೆ ಚುಚ್ಚು​ ಮದ್ದು ಹಾಗೂ ಅಗತ್ಯ ಚಿಕಿತ್ಸೆ ಕೊಡಿಸಲು ಜನರು ಪರದಾಡುವಂತಾಗಿದೆ. ಅಲ್ಲದೆ ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಯಿಲೆಯಿಂದ ಒಂದರ ಮೇಲೊಂದರಂತೆ ರಾಸುಗಳು ಸಾವನ್ನಪ್ಪುತ್ತಿದ್ದರೂ ಪಶು ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲುಬಾಯಿ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಜಾನುವಾರುಗಳನ್ನು ಗ್ರಾಮಸ್ಥರೇ ತಮ್ಮ ಜಮೀನುಗಳಲ್ಲಿ ಹೂಳುತ್ತಿದ್ದಾರೆ. ಕೂಡಲೇ ರಾಸುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕೆಂದು ಪಶು ಇಲಾಖೆ(Animal Husbandry Dept.)ಗೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಟಿತ ಕಾಲೇಜಿನ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದವನ ಬಂಧನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.