ಕರ್ನಾಟಕದಲ್ಲಿ ಮಹಾತ್ಮ ಗಾಂಧಿಜಿ ಅವರ ಅತ್ಯಂತ ಅವಿಸ್ಮರಣಿಯ ಘಟನೆಗಳು ನಡೆದಿದೆ. ರಾಷ್ಟçಪಿತ ಮಹಾತ್ಮ ಗಾಂಧಿಜಿ ಅವರು ತಮ್ಮ ಶಾಂತಿ, ಸತ್ಯ,ಅಹಿಂಸೆಗಳ ಮೂಲಕ ದೇಶದಲ್ಲಿ ಸ್ವಾತಂತ್ರö್ಯ ಚಳುವಳಿಗೆ ಹೊಸ ರೂಪವನ್ನು ನೀಡಿದವರು. ಕರ್ನಾಟಕದಲ್ಲಿ ಅವರ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎನ್ನುವ ಘೊಷಣೆಯ ಪ್ರಭಾವದಿಂದ ಇಡೀ ದೇಶದಲ್ಲಿ ಮೊದಲು ಸ್ವಾತಂತ್ರö್ಯವನ್ನು ಘೋಷಿಸಿಗೊಂಡ ಗ್ರಾಮ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮ, ಶಿವಪುರ ದ್ವಜ ಸತ್ಯಗ್ರಹ ಅಂಕೋಲ ಉಪ್ಪಿನ ಸತ್ಯಗ್ರಹ, ಅಸಹಕಾರ ಚಳುವಳಿ, ಹೀಗೆ ಗಾಂಧಿಜೀ ಅವರ ಜೀವನ ಆದರ್ಶಗಳು ಕನ್ನಡದ ನೆಲದಲ್ಲಿ ಅಚ್ಚಳಿಯಾಗಿ ಬೆರೂರಿದ್ದು ಕರ್ನಾಟಕಕ್ಕೆ ಅವರು ಅನೇಕ ಬಾರಿ ಬಂದು ಹೋಗಿದ್ದಾರೆ. ಗಾಂಧಿಜೀ ಅವರ ಜಯಂತಿಯ ಪ್ರಯುಕ್ತ ಅವರು ಈ ನೆಲದಲ್ಲಿ ನಡೆದಾಡಿದ ದಿನಗಳನ್ನು ನೆನೆಯೊಣ.


COMMERCIAL BREAK
SCROLL TO CONTINUE READING

ಕರುನಾಡಿನಲ್ಲಿ ಗಾಂಧಿಯ ಹೆಜ್ಜೆ ಗುರುತು:


1915ರಲ್ಲಿ ಗಾಂಧೀಜಿ ಆಫ್ರೀಕಾದಿಂದ ಭಾರತಕ್ಕೆ ಮರಳಿದ ಮೇಲೆ ತನ್ನ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸೂಚನೆ ಮೇರೆಗೆ ದೇಶ ಪರ್ಯಟನೆ ಹೊರಟರು.1915ರ ಮೇ 8ರಂದು ಬೆಂಗಳೂರಿಗೆ ಪತ್ನಿ ಜೊತೆ ಬಂದ ಗಾಂಧೀಜಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಗೋಪಾಕೃಷ್ಣ ಗೋಖಲೆಯವರ ಭಾವಚಿತ್ರ ಅನಾವರಣ ಮಾಡಿದರು.ಗಾಂಧೀಜಿ ಅವರು ಕರುನಾಡಿಗೆ ಮೊದಲು ಭೇಟಿ ನೀಡಲು ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ಪ್ರಯತ್ನವಿದೆ ಎಂದು ಉಲ್ಲೇಖವಿದೆ. 1915 ಮಾತ್ರವಲ್ಲ 1920, 1927, 1934, 1936ರಲ್ಲಿ ಕೂಡ ಹಲವು ಬಾರಿ ಗಾಂಧೀಜಿ ಬೆಂಗಳೂರಿಗೆ ಬಂದಿದ್ದಾರೆ.


ಇದನ್ನೂ ಓದಿ: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕೀಳುಮಟ್ಟದ ಪದ ಬಳಕೆ: ಐಜಿಪಿ ಚಂದ್ರಶೇಖರ್‌ ವಿರುದ್ದ ಕ್ರಮಕ್ಕೆ ಸೂಚನೆ


ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ:


ಗಾಂಧೀ ಅಧ್ಯಕ್ಷತೆಯಲ್ಲಿ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ 1924, ಡಿಸೆಂಬರ್ 20 ರಂದು ನಡೆಯಿತು. ಇದು 39ನೇ ಕಾಂಗ್ರೇಸ್ ಅಧಿವೇಶನವಾಗಿದ್ದು 26 ಮತ್ತು 27ರಂದು ನಡೆಯಲಿದ್ದ ಅಧಿವೇಶನಕ್ಕೆ ಆರು ದಿನ ಮೊದಲೇ ಆಗಮಿಸಿದ್ದರು. ಸಭೆಗಳಲ್ಲಿ ಮಹಾರಾಷ್ಟ್ರ, ಮೈಸೂರು ಪ್ರಾಂತ್ಯಗಳಿಂದ ಬಂದ ಜನರನ್ನು ಉದ್ದೇಶಿಸಿ ಮಾತನಾಡಿದರು.ಅಧಿವೇಶನದಲ್ಲಿ 10 ನಿಮಿಷಗಳ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಬಾಂಧವರಲ್ಲಿ ಒಗ್ಗಟ್ಟು, ಸ್ಥಳೀಯ ಭಾಷೆಯ ಮಹತ್ವ, ಅಸ್ಪೃಶ್ಯತೆ, ಸ್ವರಾಜ್ಯ ಕುರಿತು ಮಾತನಾಡಿದರು. ಯಾರದೇ ಮನೆಯಲ್ಲಿ ವಾಸ್ತವ್ಯ ಹೂಡದೆ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಗಾಂಧಿ ಟೆಂಟ್ ಹಾಕಿಕೊಂಡಿದ್ದರು.


ಅನಾರೋಗ್ಯದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿರುವ ಬಗ್ಗೆ ಉಲ್ಲೇಖವಿದೆ. ಮೊದಲ ಬಾರಿ 1927ರಲ್ಲಿ 45 ದಿನಗಳ ಕಾಲ ಮತ್ತು 1936 ರಲ್ಲಿ 20ಗಳ ನಂದಿಬೆಟ್ಟದಲ್ಲಿ ತಂಗಿ ಆರೋಗ್ಯ ವೃದ್ಧಿಸಿಕೊಂಡಿದ್ದರು.


1934ರಲ್ಲಿ ದೊಡ್ಡ ಬಳ್ಳಾಪುರಕ್ಕೆ ಬಂದಿದ್ದ ಗಾಂಧೀಜಿ ಅಲ್ಲಿ ನೆರೆದಿದ್ದ 25 ಸಾವಿರದಷ್ಟು ಜನರಿಗೆ ದೇಶಪ್ರೇಮದ ಪಾಠ ಮಾಡಿದ್ದರು.


1921 , ಅಕ್ಟೋಬರ್ 10 ರಂದು ಅಸಹಕಾರ ಚಳುವಳಿಯ ಪ್ರಚಾರಕ್ಕೆಂದು ಗಾಂಧಿ ಬಳ್ಳಾರಿಗೆ ರೈಲಿನಲ್ಲಿ ಬಂದಿದ್ದರು.


ಗದಗ ಜಿಲ್ಲೆಗೆ ಗಾಂಧೀಜಿ ಎರಡು ಬಾರಿ ಭೇಟಿ ನೀಡಿದ್ದರು, ಮೊದಲನೇ ಬಾರಿಗೆ 1920 ರಲ್ಲಿ ಮತ್ತು 1934ರಲ್ಲಿ ಎರಡನೇ ಬಾರಿಗೆ ಆಗಮಿಸಿದ್ದರು,


ವಿಜಯಪುರ (ಆಗಿನ ಬಿಜಾಪುರ)ಕ್ಕೆ ಕಾಂಗ್ರೆಸ್ ನ 17 ಸಮಾವೇಶಕ್ಕೆಂದು 1918, ಮೇ 5ರಂದು ಬಂದಿದ್ದರು ಅದಾದ ಬಳಿಕ ಎರಡನೇ ಬಾರಿ 1921, ಮೇ 28ರಂದು ಗುಮ್ಮಟ ನಗರಿಗೆ ಬಂದಿದ್ದರು.


ಮೈಸೂರಿಗೆ ಗಾಂಧೀಜಿ ಮೊದಲು ಭೇಟಿಕೊಟ್ಟಿದ್ದು, 1927ರಲ್ಲಿ, ಇದಾದ ಬಳಿಕ 1934ರಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿಗೆ ಗಾಂಧೀಜಿ ಭೇಟಿ ಕೊಟ್ಟಿದ್ದರು.


1927ರ ಅಗಸ್ಟ್ ನಲ್ಲಿ ಚಿಕ್ಕಮಗಳೂರಿನಗೆ ಬಂದಿದ್ದ ಗಾಂಧಿ, ಅಲ್ಲಿನ ಜಿಲ್ಲಾಧಿಕಾರಿ ಪ್ರಾಂಗಣದಲ್ಲಿ ಸಭೆ ನಡೆಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.