ಚಾಮರಾಜನಗರ: ಕಾಡಿಗೆ ಬೆಂಕಿ ಕಂಟಕ.. 50 ಕ್ಕೂ ಹೆಚ್ಚು ಎಕರೆ ಸುಟ್ಟು ಭಸ್ಮ
Chamarajanagar News: ಪುಣಜನೂರು ವಲಯದ 3 ಕಡೆ ಬೆಂಕಿ ಬಿದ್ದಿದ್ದು ಎರಡು ಕಡೆ ಬೆಂಕಿ ಹತೋಟಿಗೆ ಬಂದಿದ್ದು ಒಂದು ಕಡೆ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಚಾಮರಾಜನಗರ: ಬಿಆರ್ ಟಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಂಕಿ ಕಾಣಿಸಿಕೊಂಡು 50 ಕ್ಕೂ ಹೆಚ್ಚು ಎಕರೆ ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ವಲಯದಲ್ಲಿ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ 1,190 ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಮುಂದಾದ ಎಸ್ಕಾಂ
ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ 3 ಕಡೆ ಬೆಂಕಿ ಬಿದ್ದಿದ್ದು ಎರಡು ಕಡೆ ಬೆಂಕಿ ಹತೋಟಿಗೆ ಬಂದಿದ್ದು ಒಂದು ಕಡೆ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಈ ಕುರಿತು ಬಿಆರ್ ಟಿ ಡಿಸಿಎಫ್ ದೀಪ್ ಜೆ ಕಂಟ್ರಾಕ್ಟರ್ ಮಾತನಾಡಿ, ಪುಣಜನೂರು ವಲಯದ ಮೂರು ಕಡೆ ಬೆಂಕಿ ಬಿದ್ದಿತ್ತು. 2 ಕಡೆ ಬೆಂಕಿ ನಂದಿಸಲಾಗಿದ್ದು 1 ಕಡೆ ಬೆಂಕಿ ನಂದಿಸಲಾಗುತ್ತಿದೆ. ಗ್ರೌಂಡ್ ಫೈರ್ ಆಗಿದ್ದು 40-50 ಎಕರೆ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೋಂದಣಿ ಮಾಡಿಸಿಕೊಳ್ಳದಿದ್ದರೆ ನೀರಿನ ಟ್ಯಾಂಕರ್ ಗಳು ಸೀಜ್: ಡಿಸಿಎಂ ಡಿ.ಕೆ.ಶಿವಕುಮಾರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.