Congress administration: ಕಾಂಗ್ರೆಸ್ ನ ದುರಹಂಕಾರ, ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ - ಬೊಮ್ಮಾಯಿ
Congress Administration: ಕಾಂಗ್ರೆಸ್ ಆಡಳಿತದ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ನೂತನವಾಗಿ ಸರ್ಕಾರ ರಚನೆ ಆಗಿದೆ.
ಬೆಂಗಳೂರು: ಕಾಂಗ್ರೆಸ್ ಆಡಳಿತದ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ನೂತನವಾಗಿ ಸರ್ಕಾರ ರಚನೆ ಆಗಿದೆ.
8 ಜನರು ಕೂಡ ಸಚಿವರು ಆಗಿದ್ದಾರೆ. ಆ ಸಚಿವರು ಮಾತನಾಡುವುದನ್ನು ನೋಡಿದರೆ, ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭ ಮಾಡಿದ್ದಾರೆ. ಅಭಿವೃದ್ಧಿಗಿಂತ ಸೇಡು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ, ಅದನ್ನು ಎದರಿಸಲು ನಾವು ಸಿದ್ದರಿದ್ದೇವೆ. ಇದನ್ನು ನಾವು ಸಮರ್ಥವಾಗಿ ಎದುರಿಸುವುದಲ್ಲದೇ, ಅವರ ವಿಚಾರವನ್ನು ನಾವು ಹಿಮ್ಮೆಟ್ಟಿಸುತ್ತೇವೆ ಎಂದರು.
ಇದನ್ನೂ ಓದಿ: Viral Video : ಇದೊಂದು ಬಾಕಿ ಇತ್ತು ನೋಡಿ: ಹಣೆ ಮೇಲೆ ಪತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಪತ್ನಿ !
ಚುನಾಯಿತ ಸರ್ಕಾರದ ಮುಂದೆ ಜನರ ಸಮಸ್ಯೆಗಳಿವೆ. ಸಮಸ್ಯೆಗಳ ಬಗೆಹರಿಸಲು ತುರ್ತಾದ ನಿರ್ಣಯ ಎಲ್ಲೂ ಕಾಣುತ್ತಿಲ್ಲ. ರಾಜ್ಯದಲ್ಲಿ ಇವತ್ತು ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಆದರೆ, ಆ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಕೊಟ್ಟಿಲ್ಲ.
ಕೇವಲ ಸೂಚನೆ ಕೊಡುವುದರಲ್ಲಿ ಕಾಳ ಕಳೆಯುತ್ತಿದ್ದಾರೆ. ಹಣ ಕೂಡ ಬಿಡುಗಡೆ ಮಾಡಿಲ್ಲ. ಬರ ಪೀಡಿತ ತಾಲ್ಲೂಕುಗಳು, ಕುಡಿಯುವ ನೀರಿನ ತಾಲ್ಲೂಕುಗಳ ಬಗ್ಗೆ ಪತ್ತೆ ಹಚ್ಚಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣ ಇದೆ. ಅದನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸಿ ಎಂಬ ಸೂಚನೆ ಸಿಎಂ ರಿಂದಲೂ ಹೋಗಿಲ್ಲ ಎಂದರು.
ಸಚಿವರಿಗೆ ಇನ್ನೂ ಖಾತೆಯೇ ಆಗಿಲ್ಲ. ಅವರಿಗೆ ಇನ್ನೂ ಅಧಿಕಾರನೇ ಸಿಕ್ಕಿಲ್ಲ. ಕೇವಲ ಇವ್ರು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ವಿಧಾನಸಭೆಯಲ್ಲಿ ಕೇಳಿದ್ದೇನೆ. ನಾನು ನನಗೋಸ್ಕರ ಈ ಮಾತು ಕೇಳಿಲ್ಲ. ಜನರಿಗಾಗಿ ಈ ಮಾತು ಕೇಳಿದ್ದೇನೆ. ಈ ರೀತಿಯ ಆಡಳಿತವನ್ನು ನಾನು ಹಿಂದೆಂದು ನೋಡಿಲ್ಲ ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.