ಬೆಂಗಳೂರು: ದಾಸರಹಳ್ಳಿ ಕ್ಷೇತ್ರದಲ್ಲಿ ಇವತ್ತು ಪ್ರದಕ್ಷಿಣೆ ಹಾಕಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದಾಸರಹಳ್ಳಿ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಾಸರಹಳ್ಳಿ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ 780 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೆ. ಅಮೇಲೆ ಬಿಜೆಪಿ ಸರ್ಕಾರ ಅದನ್ನು ತಡೆ ಹಿಡಿದಿದೆ. ರಾಜಕಾಲುವೆಗೆ 130 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೆ. ಅದನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.


ಇದನ್ನೂ ಓದಿ: ಚರ್ಮದ ಈ ಐದು ಸಮಸ್ಯೆಗಳಿಗೆ ಪರಿಹಾರ ವೀಳ್ಯದೆಲೆ ..!


ಚಿಕ್ಕಬಾಣವಾರ ಕೆರೆ 102 ಎಕರೆ ಇದೆ. ಈ ಕೆರೆಗೆ ಸ್ಯಾನಿಟರಿ ನೀರು ಬರ್ತಿದೆ. ಕೆರೆ ಪಕ್ಕದಲ್ಲಿ ಮಾಜಿ ಶಾಸಕರು ಹಣ ಪಡೆದು ಅಪಾರ್ಟ್ ಮೆಂಟ್ ಕಟ್ಟಿಸಲು ಅನುಮತಿ ಕೊಟ್ಟಿದ್ದಾರೆ. ಈ ಅಪಾರ್ಟ್ ಮೆಂಟ್ ನಿಂದ ಸ್ಯಾನಿಟರಿ ನೀರು ಬರುತ್ತಿದೆ. ನಾನು ಕೆರೆ ಅಭಿವೃದ್ಧಿ ಗೆ ಕೊಟ್ಟ ಹಣವೂ ಬಿಡುಗಡೆ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದರು.


ಇಂತಹ ಕೆರೆಗಳನ್ನು ಮುಚ್ಚಿಕೊಂಡು ಬರುತ್ತಿದ್ದೀರಾ, ಕಾಂಗ್ರೆಸ್ ಅವರು ಮೇಕೆದಾಟು ಅಂತ ಬಾಯಿ ಬಡಿದುಕೊಳ್ಳಬೇಡಿ ಹೀಗೆ ಕೆರೆ ಮುಚ್ಚಿಕೊಂಡು ಬಂದು ಪಾದಯಾತ್ರೆ ಅಂದರೆ ಏನು ಪ್ರಯೋಜನ ಎಂದು ವಾಗ್ದಾಳಿ ನಡೆಸಿದರು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಾವೂಸ್ ಶೃಂಗಸಭೆಗೆ ಹೋಗಿ ಹೇಗೆ ಹೂಡಿಕೆದಾರರನ್ನು ಕರೆಯುತ್ತೀರಾ‌. ಇಷ್ಟು ಸಮಸ್ಯೆ ಇದ್ದರೆ ಹೂಡಿಕೆದಾರರು ಬರ್ತಾರಾ? ಎಂದು ಪ್ರಶ್ನಿಸಿದರು.


ಕರಪ್ಟ್ ಬಿಬಿಎಂಪಿ ಅಲ್ಲ, ಕರಪ್ಟ್ ಬಿಜೆಪಿ:


ಉದ್ಯಮಿ ಮೋಹನ್ ದಾಸ್ ಪೈ ಅವರು  ಪ್ರಧಾನಿಗಳಿಗೆ ಸೇವ್ ಬೆಂಗಳೂರು ಅಂತ ಟ್ವೀಟ್ ಮಾಡಿದ್ದಾರೆ. ಭ್ರಷ್ಟಾಚಾರ  ಬಿಬಿಎಂಪಿ ಅಂತ ಟ್ವೀಟ್ ಮಾಡಿ ಸೇವ್ ಬೆಂಗಳೂರು (ಬೆಂಗಳೂರು ರಕ್ಷಿಸಿ) ಎಂದು ಹೇಳಿದ್ದಾರೆ. ಮೋಹನ್ ದಾಸ್ ಪೈ ಅವರು ಕರಪ್ಟ್ ಬಿಬಿಎಂಪಿ ಅಂತ ಹೇಳಬೇಡಿ. ಕರಪ್ಟ್ ಬಿಜೆಪಿ ಅಂತ ಹೇಳಿ ಎಂದರು.


ಬಿಬಿಎಂಪಿಯಲ್ಲಿ ಆಡಳಿತ ಮಾಡ್ತಿರೋದು ಬಿಜೆಪಿ ಸರ್ಕಾರ. ಬೆಂಗಳೂರು ಉಸ್ತುವಾರಿ ಸಿಎಂ ಇದ್ದಾರೆ. ಬೆಂಗಳೂರು ಮಂತ್ರಿಗಳು ಲೂಟಿ ಮಾಡಿದ್ದಾರೆ. ಲೂಟಿ ಮಾಡಿದ ಮಂತ್ರಿಗಳ ಕ್ಷೇತ್ರದಲ್ಲಿ ಪ್ರದಕ್ಷಿಣೆ ಮಾಡ್ತೀರಾ. ಲೂಟಿ ಮಾಡಿರೋದು ಸತ್ಯ ಹೇಳ್ತಾರೆ ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: ಪುಸ್ತಕ ಬಹುಮಾನಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅರ್ಜಿ ಆಹ್ವಾನ


ಸಿದ್ದರಾಮಯ್ಯ ಕಾಲದಲ್ಲಿ ಹೆಚ್ಚು ಅನುದಾನ ಕೊಟ್ಟಿದ್ದೇನೆ ಅಂತಾರೆ. ಅ ಅನುದಾನದಲ್ಲಿ ಎಷ್ಟು ಜನರ ಸಮಸ್ಯೆ ಸರಿ ಆಯಿತು. ಎಷ್ಟು ಲೂಟಿ ಆಯ್ತು, ಅವರ ಐದು ವರ್ಷದ ಅವಧಿಯಲ್ಲಿ ಏನು ಆಗಿದೆಂದು ಸಿದ್ದರಾಮಯ್ಯ ಅವರು ಹೇಳಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದರೆ ಇವತ್ತು ಯಾಕೆ ಈ ಸಮಸ್ಯೆ ಆಗುತಿತ್ತು ಎಂದು ವಾಗ್ದಾಳಿ ನಡೆಸಿದರು.


ಸಿದ್ದರಾಮಯ್ಯಗೆ ಹೆಚ್ ಡಿಕೆ ಸವಾಲು:


ಸಿದ್ದರಾಮಯ್ಯ ಕಾಲದಲ್ಲಿ ಯಾರು, ಯಾರು ಎಷ್ಟು ಹಣ ನುಂಗಿದವರ ಪಟ್ಟಿ ಕೊಡಲಾ? ಎಂದು ಸವಾಲು ಕಾಂಗ್ರೆಸ್ ಅವಧಿಯಲ್ಲಿ ಕಾಂಗ್ರೆಸ್ ನ ಮಂತ್ರಿಗಳು ಎಷ್ಟು ಲೂಟಿ ಮಾಡಿದ್ದೀರಾ ಗೊತ್ತಿದೆ.


ಹೌದು ನಾನು ಕೆಲಸ ಮಾಡಿಲ್ಲ. ನಿಮ್ಮ ತರಹ ಲೂಟಿಯೂ ಮಾಡಿಲ್ಲ. ನನ್ನನ್ನು ಹೆಸರಿಗೆ ಸಿಎಂ ಮಾಡಿದ್ರಿ. ನನಗೆ ಒಂದೇ ಒಂದು ವರ್ಗಾವಣೆ ಮಾಡಲು ಬಿಡಲಿಲ್ಲ. ಬೆಂಗಳೂರಿನ ಸಂಬಂಧ ಒಂದೇ ಒಂದು ಸಭೆ ಮಾಡಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಪರಮೇಶ್ವರ್ ಅವರನ್ನು ಕೇಳಿ.‌ ಇದಕ್ಕೆ ಕಾರಣ ಸಿದ್ದರಾಮಯ್ಯ. ನನ್ನ ಬಗ್ಗೆ ಸಿದ್ದರಾಮಯ್ಯ ಮಾತಾಡೋದು ಬೇಡ. ನಾನು ಸಿದ್ದರಾಮಯ್ಯಗೆ ಒಪನ್ ಚಾಲೆಂಜ್ ಮಾಡುತ್ತೇನೆ. ಬನ್ನಿ ಚರ್ಚೆ ಮಾಡೋಣ. ಯಾರ ಕಾಲದಲ್ಲಿ ಏನೇನು   ಆಗಿದೆ ಚರ್ಚೆಗೆ ನಾನು ಸಿದ್ದ ಎಂದು ಕುಮಾರಸ್ವಾಮಿ ಅವರು  ಸಿದ್ದರಾಮಯ್ಯಗೆ ಸವಾಲು ಹಾಕಿದರು.


ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ. ಎ.ಶರವಣ ಮುಂತಾದವರು ಜತೆಯಲ್ಲಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.