ಬೆಂಗಳೂರು: ಜೆಡಿಎಸ್ ಕೋರ್ ಕಮಿಟಿ ಸಭೆಗೂ ಮುನ್ನ ಜೆಪಿ ಭವನದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು, ಈ ಹಿಂದೆ ನರ್ಸ್‌ಗಳಿಗೆ ಸರ್ಟಿಫಿಕೇಟ್ ಕೊಡೋದರಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ದೊಡ್ಡ ಇತಿಹಾಸವೇ ಇದೆ ಎಂದು ಹೊಸ ಆರೋಪ ಮಾಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೀವು ಹೆಚ್ಚು ಆಲೂಗಡ್ಡೆ ತಿನ್ನುತ್ತೀರಾ? ಅದರ ಅನಾನುಕೂಲಗಳನ್ನು ತಪ್ಪದೇ ತಿಳಿಯಿರಿ


ಅಶ್ವತ್ಥ ನಾರಾಯಣ ಎಕ್ಸಾಂ ಮಾಡಿಸೋದ್ರಲ್ಲಿ‌ ದೊಡ್ಡ ಅನುಭವ ಇರುವ ವ್ಯಕ್ತಿ. ಅದನ್ನಾದ್ರು ಕಾಂಗ್ರೆಸ್ ಅವರು ಮಾತನಾಡಲಿ. ನರ್ಸ್‌ಗಳಿಗೆ ಸರ್ಟಿಫಿಕೇಟ್ ನೀಡುವುದಕ್ಕೆ ಒಂದು ಟೀಂ ಇತ್ತು. ಇದಕ್ಕೆ ಅಶ್ವತ್ಥ ನಾರಾಯಣ ಹೆಸರು ಇತ್ತು ಎಂದು ತಿಳಿಸಿದರು.


ನಾನು ವಿಶ್ವ ಒಕ್ಕಲಿಗ ಅಂತ ಹೇಳ್ತಾರೆ. ಯಾವ ವಿಶ್ವ ಒಕ್ಕಲಿಗನೋ ಗೊತ್ತಿಲ್ಲ. ಯಾವ ಬಂಧೂನೋ, ಯಾವ ಒಕ್ಕಲಿಗನೋ ಗೊತ್ತಿಲ್ಲ. ರಾಜಕಾರಣಕ್ಕೆ ಬರೋಕು ಮುಂದೆ ಎಂಥವರಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಲ್ಲಾ ಗೊತ್ತಿದೆ. ಎಕ್ಸಾಂ ಬರೆಯದವರು, ಎಕ್ಸಾಂಗೆ ಬಾರದೇ ಇರೋರಿಗೂ ಸರ್ಟಿಫಿಕೇಟ್ ಕೊಟ್ಟಿರೋ ಇತಿಹಾಸ ಇದೆ. ಇಂತಹ ಸರ್ಕಾರ ಇದು. ಇಂತಹ ಮಂತ್ರಿಗಳು ಈ ಸರ್ಕಾರದಲ್ಲಿ ಇದ್ದಾರೆ ಎಂದು ಕಿಡಿಕಾರಿದರು.


ನಾನು ನಿನ್ನೆ ಅಶ್ವತ್ಥ ನಾರಾಯಣ ಪರ ಮಾತನಾಡಿಲ್ಲ. ವಿಪಕ್ಷಗಳು ದಾಖಲೆ ಇಟ್ಟು ಮಾತನಾಡಬೇಕು ಎಂದು ಸಲಹೆ ನೀಡಿದ್ದೇನೆ. ಜೊತೆಗೆ ಈ ಪ್ರಕರಣಗಳಲ್ಲಿ ಸರ್ಕಾರ ಮೌನವಾಗಿದೆ, "ಮೌನಂ ಸಮ್ಮತಿ ಲಕ್ಷಣಂ" ಎಂದು ಟೀಕಿಸಿದರು. 


ಇದನ್ನೂ ಓದಿ: Video : ಹುಬ್ಬಳ್ಳಿಯಲ್ಲಿ ‌ಭಾರೀ ಮಳೆ ಗಾಳಿಗೆ ಸ್ಕೂಟಿ ಸಮೇತ ಹಾರಿ ಕೆಳಗುರುಳಿದ ವಿದ್ಯಾರ್ಥಿನಿಯರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.