ಬೆಂಗಳೂರು: ಆಜಾನ್ ವಿರುದ್ಧ ಸುಪ್ರಭಾತ ವಿಚಾರವಾಗಿ ಬಾದಾಮಿಯ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಪ್ರಮೋದ್ ಮುತಾಲಿಕ್‌ರಂಥವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಇಂಥವರನ್ನ ಒದ್ದು ಒಳಗೆ ಹಾಕದೇ ಇದ್ದಲ್ಲಿ, ಸಮಾಜದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಉಳಿಸಲಿಕ್ಕೆ ಕಷ್ಟ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರು ಭಯೋತ್ಪಾದಕರು- ಬಿಕೆ ಹರಿಪ್ರಸಾದ್ ವಾಗ್ದಾಳಿ


ಸರ್ಕಾರ ಇಂತಹ ವಿಷಯಗಳನ್ನ ಬೆಳೆಯೋದಕ್ಕೆ ಬಿಡಬಾರದು. ಮೌನವಾಗಿ ಒಪ್ಪಿಗೆ ಸೂಚಿಸುವುದನ್ನ ಬಿಡಬೇಕು. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಿದ್ರೆ ಆಮೇಲೆ ರಿಪೇರಿ ಮಾಡೋಕಾಗುತ್ತಾ?  ರಾಮಸೇನಾನೋ ? ರಾವಣ ಸೇನಾನೋ? ಇವೆಲ್ಲಾ ಒಂದಕಡೆ ಇರಲಿ. ಸುಪ್ರೀಂ ಆದೇಶದಂತೆ ಸರ್ಕಾರ ಒಪ್ಪಿಗೆ ಕೊಡಲಿ. ಆ ಪ್ರಕಾರ ಹನುಮಾನ ಚಾಲೀಸಾ ಇವ್ರು ಓದಲಿ. ಅದಕ್ಕೆ ದೊಡ್ಡ ಪ್ರಚಾರ ಬೇಕಿಲ್ಲ. ನಮಗೆ ಸಂಕಷ್ಟ ಅಂದ್ರೆ ದಿನಾ ನಾವೆಲ್ಲ ಮನೆಯಲ್ಲೆ ಹನುಮಾನ ಚಾಲೀಸಾ ಹೇಳಿಕೊಳ್ಳಲ್ವಾ? ಆರೋಗ್ಯ ಸಮಸ್ಯೆ ಆದ್ರೆ,  ಸಮಸ್ಯೆ ಉದ್ಭವ ಆದಾಗ ಮನೆಯಲ್ಲಿ ಹೇಳಿಕೊಳ್ಳುತ್ತೇವೆ. ಅದೇನು ದೊಡ್ಡ ಸಾಧನೆ ಅಲ್ಲ ಎಂದರು.


ಸಮಾಜದಲ್ಲಿ ಬೆಂಕಿ ಇಡುವ ಕೆಲಸ ಮಾಡ್ತಿರುವ ಇಂಥವೆಲ್ಲ ನಮಗೆ ಬೇಕಾಗಿಲ್ಲ. ಬೆಳೆ ವಿಮೆ ಬಂದಿಲ್ಲ ಎಂದು ರೈತರು ಹೇಳ್ತಿದ್ದಾರೆ. ಏನೂ ಗಂಟೆ ಅಲ್ಲಾಡಿಸಿ ಬಿಟ್ರೆ ರೈತರಿಗೆ ಏನಾದ್ರೂ ಸಿಗುತ್ತಾ? ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ದರ ಏರಿಕೆ ಕುರಿತು ನೀವು ಮಾತನಾಡಲು ತಯಾರಿಲ್ಲ. ಜನ‌ ಸಾಯುತ್ತಿದ್ದಾರೆ. ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದನ್ನ ಸರಿಪಡಿಸುವ ಕೆಲಸ ಸಂಘಟನೆಗಳ ಪ್ರಥಮ ಆದ್ಯತೆ ಆಗಿರಬೇಕು ಎಂದು ಹೇಳಿದರು. 


ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರವನ್ನು ಅಲಿಬಾಬಾ ಮತ್ತು 40 ಕಳ್ಳರಿಗೆ ಹೋಲಿಸಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಶಾಸಕ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 2500 ಕೋಟಿ ರೂ. ಕೊಟ್ಟರೆ ಸಿಎಂ. ಇದನ್ನು ಒಬ್ಬ ಜವಾಬ್ದಾರಿಯುತ ಶಾಸಕ, ಕೇಂದ್ರದಲ್ಲಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಆದವರು ಹೇಳಿದ್ದಾರೆ. ರಾಜ್ಯದಲ್ಲಿ ಹಣದ ವ್ಯವಹಾರದ ಮೂಲಕವೇ ಸರ್ಕಾರ ಬಂದಿದೆ. ಸರ್ಕಾರ ರಚನೆ ಮಾಡಿದ್ದು ಹೇಗೆ? ಪಾಪದ ಹಣದ ಮುಖಾಂತರ ಕೆಲ ಎಂಎಲ್‌ಎಗಳನ್ನು ತಗೊಂಡು ಸರ್ಕಾರ ಮಾಡಿದ್ದಾರೆ. ಇಲ್ಲಿ 2500 ಕೋಟಿ ರೂ. ಏನಿದೆ. ದುಡ್ಡಲ್ಲೆ ಲೆಕ್ಕ ಇವರದ್ದು. ಬಿಜೆಪಿ ಸರ್ಕಾರ ನಡೆಯುತ್ತಿರುವುದೇ  ನಾಡಿನ ಜನರ ಸಂಪತ್ತು ಇರುವ ಖಜಾನೆ ಲೂಟಿ ಮಾಡಿ ಎಂದು ಕಿಡಿಕಾರಿದರು.


ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದ ಕೆ.ಎಸ್.ಆರ್.ಟಿ.ಸಿ ಬಸ್ : 25 ಜನರಿಗೆ ಗಾಯ


ನಾನು ಪ್ರಧಾನಮಂತ್ರಿಗಳ ಮೇಲೆ ಚರ್ಚೆ ಮಾಡಲ್ಲ. ಆದರೆ, ಪಕ್ಷದ ಕೆಲ ಮುಖಂಡರು, ಚುನಾವಣಾ ತಂತ್ರಗಾರಿಕೆ ನಡೆಸುತ್ತಾರಲ್ಲ. ಅವರ ಜೊತೆ ಇದ್ದಾರಲ್ಲ ಕೆಲವರು. ಅವರು ಪರಿಶುದ್ದರಿಲ್ಲ. ಚುನಾವಣಾ ತಂತ್ರಗಾರರು ಯಾರು ಅಂತ ಅರ್ಥ ಆಗಲ್ವೆ? ಬಿಜೆಪಿ ಅಂದ್ರೆ ಭ್ರಷ್ಟ ಜನರ ಸರ್ಕಾರ ಎಂದು ಅಸಮಾಧಾನ ಹೊರಹಾಕಿದರು.


ಇವರಲ್ಲಿ ಯಾರು ಕಡಿಮೆ ಅಂತ ಹೇಳಲಿ. ಅಲಿಬಾಬಾ ಮತ್ತು 40 ಜನ ಕಳ್ಳರು ಇದ್ದರಲ್ಲ. ಅಂತ ಒಂದು ಸರ್ಕಾರ ಇದು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕುಮಾರಸ್ವಾಮಿ‌ ದಾಖಲೆ ಇದ್ರೆ ಕೊಡಲಿ ಅಂದಿದ್ದಾರೆ. ನಾನು 2008 ರಿಂದ ಟನ್ ಗಟ್ಟಲೆ ದಾಖಲೆ ಇಟ್ಟೆ. ದಾಖಲೆ ಇಟ್ಟುಕೊಂಡು ಯಾರ ಯಾರೋ ದುಡ್ಡು ಮಾಡ್ಕೊಂಡ್ರೋ? ಯಾವ ಯಾವ ವ್ಯಕ್ತಿ ಎಷ್ಟು ದುಡ್ಡು ಮಾಡ್ಕೊಂಡ್ರು ಆ ದಾಖಲೆ ಮುಚ್ಚಿ ಹಾಕಿದ್ರು. ಇವರಿಗೆ ಯಾವ ದಾಖಲೆ ಕೊಟ್ಟು ಏನು ಮಾಡ್ತೀರಿ ಈ ಸರ್ಕಾರಕ್ಕೆ ಎಂದು ಪ್ರಶ್ನಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.