ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಎಸ್.ಟಿ.ಸೋಮಶೇಖರ್ ಲೋಕಾಯುಕ್ತ ಪೊಲೀಸರು ಈಗ ಎಫ್ಐಆರ್ ದಾಖಲಿಸಿದ್ದಾರೆ. ಆದ್ದರಿಂದ ಅವರು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗಬಹುದಾದ ಭೀತಿಯನ್ನು ಎದುರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಆರ್ಟಿಜಿಸಿ ಮೂಲಕ ಹಣ ವರ್ಗಾವಣೆ ಸಂಬಂಧಿಸಿದ ಪ್ರಕರಣ ಇದಾಗಿರುವುದರಿಂದ ಟಿ.ಜೆ.ಅಬ್ರಹಾಂ ದಾಖಲಿಸಿದ ಖಾಸಗಿ ದೂರು ಆಧಾರದ ಮೇಲೆ ಹೈಕೋರ್ಟ್ ಈಗ ಎಫ್ಐಆರ್ ದಾಖಲಿಸಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಐಪಿಸಿ ೩೮೩,೩೮೪,೪೧೫,೪೧೮,೪೨೦,೪೩೪,೧೨೦(ಬಿ) ಸಿಆರ್ ಪಿಸಿ ೭,೮,೯,೧೦,೧೩ ರಡಿ ಕೇಸ್ ದಾಖಲಿಸಲಾಗಿದೆ.


ಎಫ್ಐಆರ್ ನಲ್ಲಿ ಆರೋಪಿ ೧ ಯಡಿಯೂರಪ್ಪ,ಆರೋಪಿ-೨ ವಿಜಯೇಂದ್ರ,ಆರೋಪಿ ೩ ಶಶಿಧರ ಮರಡಿ,ಆರೋಪಿ ೪ ಸಂಜಯ್,ಆರೋಪಿ ಚಂದ್ರಕಾಂತ್ ರಾಮಲಿಂಗಂ,ಆರೋಪಿ ಸಚಿವ ಎಸ್.ಟಿ.ಸೋಮಶೇಖರ್,ಆರೋಪಿ ೭ ಡಾ.ಜೆ.ಸಿ.ಪ್ರಕಾಶ್ (ಹಿಂದಿನ ಬಿಡಿಎ ಆಯುಕ್ತ,ಆರೋಪಿ ೮ ಕೆ.ರವಿ,ಆರೋಪಿ ೯ ವಿರೂಪಾಕ್ಷಪ್ಪ ಯಮಕನಮರಡಿ( ನಿವೃತ್ತ ಚೀಫ್ ಎಂಜಿನಿಯರ್) ಎಂದು ಉಲ್ಲೇಖಿಸಲಾಗಿದೆ.[[{"fid":"257926","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ: ಬಿಡುಗಡೆಯಾಯ್ತು ಬೆರಗಾಗಿಸೋ ‘ಬನಾರಸ್’ ಲಿರಿಕಲ್ ವಿಡಿಯೋ ಸಾಂಗ್


ಪಿಸಿಆರ್ ೪೦/೨೨೧,೨೨೨೧ ರ ಪ್ರಕಾರ ಟೆಂಡರ್ ನೊಟಿಪಿಕೇಶನ್ ಆಗಿದ್ದು,ಬಿದರಹಳ್ಳಿ ಹೋಬಳಿ ಕೋನದಾಸಪುರದಲ್ಲಿ ಸರ್ವೆ ೨೨/೨೩ ರಲ್ಲಿ 1BHK,2BHK ಪ್ಲಾಟ್ ನಿರ್ಮಾಣಕ್ಕೆ ೫೬೭ ಕೋಟಿ ಟೆಂಡರ್ ಕರೆಯಲಾಗಿರುತ್ತದೆ.ಇದಕ್ಕೆರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ೬೭೫ ಕೋಟಿ ಬಿಡ್ ಮಾಡಿರುತ್ತೆ.ಟೆಂಡರ್ ಗಿಂತ ೧೦೮ ಹೆಚ್ಚುವರಿ ದರಕ್ಕೆ ಬಿಡ್ ಮಾಡಿರುತ್ತಾರೆ.ಬಿಡಿಎ ರಾಮಲಿಂಗಂ ಕನ್ಸ್ ಟ್ರಕ್ಷನ್ ಗೆ ೬೬೬ ಕೋಟಿಗೆ ಅನುಮೋದನೆ ನೀಡುತ್ತದೆ.ಈ ವೇಳೆ ಬಿಡಿಎ ಅಧ್ಯಕ್ಷರಾಗಿದ್ದವರು ಇಂದಿನ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅನುಮೋದನೆ ಕೊಟ್ಟಿರುತ್ತಾರೆ.


ಬಿಡಿಎ ಅಂದಿನ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಯೋಜನೆ ಮುಂದುವರೆಸಲು ರಾಮಲಿಂಗಂ ಕಂಪನಿಗೆ ೧೨ ಕೋಟಿ ರೂ ಬಿಎಸ್ ವೈ,ವಿಜಯೇಂದ್ರರಿಗೆ ನೀಡುವಂತೆ ಬೇಡಿಕೆ ಇಡ್ತಾರೆ.ಇಲ್ಲಿಂದ ಪ್ರಕರಣ ಶುರುವಾಗುತ್ತದೆ.ಚಂದ್ರಕಾಂತ್ ರಾಮಲಿಂಗಂ ಆರೋಪಿ- ೮ ರವಿಗೆ ವಿಜಯೇಂದ್ರ ಸೂಚನೆ ಮೇರೆಗೆ ಮೇ ೨೦೨೦ ರಲ್ಲಿ ಹಣವನ್ನ ನೀಡಲು ಸೂಚನೆ ಹೋಗುತ್ತದೆ.ಆರೋಪಿ -೭ ಪ್ರಕಾಶ್ ರವಿಗೆಯ ಕಡೆಯಿಂದ ವಿಜಯೇಂದ್ರ ಮೂಲಕ ಬಿಎಸ್ ವೈ ಗೆ ಹಣ ತಲುಪಿಸಲು ಕೊಂಡೊಯ್ಯಲಾಗಿರುತ್ತದೆ.ಆದ್ರೆ ಆರೋಪಿ ೨( ವಿಜಯೇಂದ್ರ) ಗೆ ಹಣ ತಲುಪಿಲ್ಲವೆನ್ನಲಾಗಿದೆ..ಆರೋಪಿ ೩ ಶಶಿಧರ್ ಮರಡಿಗೆ ೧.೫+೧+೧+೭.೪+೧.೬ ಕೋಟಿರೂಗಳನ್ನ ಹಂತಹಂತವಾಗಿ ಶಶಿಧರ್ ಮರಡಿ ಮೂಲಕ ಬಿಎಸ್ ವೈಗೆ ತಲುಪಿಸಲಾಗಿದೆ ಎನ್ನಲಾಗಿದೆ.[[{"fid":"257927","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಇದನ್ನೂ ಓದಿ: ತೆರೆ ಕಂಡಾಯ್ತು ಮಾನ್ಸೂನ್ ರಾಗ, ಚಿತ್ರಕ್ಕೆ ಪ್ರೇಕ್ಷಕ ಕೊಟ್ಟ ಮಾಕ್ಸ್ ಎಷ್ಟು ಗೊತ್ತಾ ?


ವಾಟ್ಸಾಪ್ ಮೆಸೇಜ್ ಗಳಲ್ಲಿ ಹಣ ಸಂದಾಯದ ಬಗ್ಗೆ ಮಾಹಿತಿಯಿದೆ.ವಿರೂಪಾಕ್ಷಪ್ಪ‌ಮರಡಿ ಹಣ ಸ್ವೀಕರಿಸಿ ತಲುಪಿಸಿರುವ ಐದು ಬಾರಿ ದೂರವಾಣಿಯಲ್ಲಿ ಮಾತನಾಡಿರುವುದು ಕಂಡು‌ಬಂದಿದೆ.ಇವರು ಹಣ ಪಡೆಯಲು ಶೆಲ್ ಕಂಪನಿಗಳ ಮೂಲಕ ಹಣವನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಕಂಡು ಬಂದಿದೆ.ಷೆಲ್ ಕಂಪನಿಗಳ ಮೂಲಕ ಅಕ್ರಮ ಆರ್ಥಿಕ‌ವಹಿವಾಟು ನಡೆಸಿರುವುದು ತಿಳಿದು ಬಂದಿದೆ.ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ ೭,೮,೯,೧೦,೧೩ ಪಿಸಿ ಆಕ್ಟ್ತ ೯೮೮ ಮತ್ತು ಐಪಿಸಿ ಕಲಂ ೩೮೩,೩೮೪,೪೧೫,೪೧೮,೪೨೦,೩೪,೧೨೦(ಬಿ) ಕಲಂ ನಡಿ ದೂರನ್ನು ದಾಖಲಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.