ಮೈಸೂರು: ನನಗಿದ್ದ ಒಳ್ಳೆಯ ಹೆಸರು, ವರ್ಚಸ್ಸು, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಿಂದಾಗಿ ಸರ್ವನಾಶವಾಯಿತು. ಬಿಜೆಪಿ ಜೊತೆ ಮೈತ್ರಿಯಿಂದಲೂ ನನಗೆ ಇಷ್ಟೊಂದು ದ್ರೋಹ ಆಗಿರಲಿಲ್ಲ. ನಾನು ಮತ್ತೆಂದೂ ಇಂಥ ತಪ್ಪು ಮಾಡುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ(H D Kumaraswamy), ಸಿದ್ಧರಾಮಯ್ಯ ಅವರ ಕುತಂತ್ರ ಹಾಗೂ ಹೆಚ್.ಡಿ. ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟುಬಿದ್ದು ನಾನು ಹೆಸರು ಕೆಡಿಸಿಕೊಂಡೆ. ನಾನು ಅವರ ಮಾತನ್ನು ಕೇಳದೇ ಬೇರೆಯ ನಿರ್ಧಾರವನ್ನು ಮಾಡಿದ್ದೇ ಆಗಿದ್ದರೇ, ಈಗಲೂ ನಾನು ಮುಖ್ಯಮಂತ್ರಿ ಆಗಿರುವ ಅವಕಾಶ ಇರುತ್ತಿತ್ತು ಎಂದರು.


ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ: ಐವರಿಗೆ ಮಾತ್ರ ಸಚಿವಸ್ಥಾನ!


2006ರಲ್ಲಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ನನಗೆ ಒಳ್ಳೆಯ ಹೆಸರು ಇತ್ತು. ಇದೇ ಕಾರಣದಿಂದಾಗಿ ನನ್ನನ್ನು ಈ ರಾಜ್ಯದ ಜನರು 12 ವರ್ಷ ಸಾಕಿದರು. ಆದ್ರೇ ನನ್ನ ಹೆಸರು ಕೆಡಿಸಲೆಂದು ಕಾಂಗ್ರೆಸ್ ಹೆಣೆದ ಬಲೆಯಲ್ಲಿ ಸಿಲುಕಿದೆ. ಜೊತೆಗೆ ದೇವೇಗೌಡರ ಮಾತು ಕೇಳಿ, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹೆಸರು ಕೆಡಿಸಿಕೊಂಡೆ. ಮತ್ತೆಂದು ಇಂತಹ ತಪ್ಪು ಮಾಡುವುದಿಲ್ಲ ಎಂದು ಹೇಳಿದರು.


ರಾಜ್ಯದ ಜನತೆಗೆ ಮತ್ತೊಂದು 'ಭರ್ಜರಿ ಗುಡ್ ನ್ಯೂಸ್'..!