HD Kumaraswamy : `ಮುಸ್ಲಿಂರು ತಿರುಗಿ ಬಿದ್ದರೆ ಯಾವ ಸರ್ಕಾರಗಳು ಉಳಿಯಲು ಸಾಧ್ಯವಿಲ್ಲ`
ಯಾವುದೇ ಒಬ್ಬ ಮನುಷ್ಯ ಎಲ್ಲಿಯವರೆಗೆ ಸಹಿಸಲು ಸಾಧ್ಯ. ಅವರು ತಿರುಗಿ ಬಿದ್ದರೆ ಯಾವ ಸರ್ಕಾರಗಳು ಉಳಿಯಲು ಸಾಧ್ಯವಿಲ್ಲ. ಅಂತಹ ಅವಕಾಶ ನೀಡದೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಎಲ್ಲಾ ವರ್ಗ, ಸಮಾಜದ ಜನರು ನೆಮ್ಮದಿಯಿಂದ ಬದುಕುವ ಕೆಲಸ ಸರ್ಕಾರ ಮಾಡಬೇಕಿದೆ. ಸರ್ಕಾರ ನಿಷ್ಕ್ರಿಯವಾದ್ರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಅವಕಾಶ ಕಲ್ಪಿಸಬೇಡಿ ಎಂಬುದು ನನ್ನ ಆಗ್ರಹ ಎಂದರು.
ರಾಮನಗರ : ಶ್ರೀ ಆಂಜನೇಯಸ್ವಾಮಿ ದೇಗುಲ ಬಳಿ 15 ವರ್ಷದಿಂದ ಮುಸ್ಲಿಂ ವ್ಯಾಪಾರಿ ವ್ಯಾಪಾರ ಮಾಡುತ್ತಿದ್ದಾತ. ಅಂಗಡಿ ಮೇಲೆ ದಾಳಿ ಮಾಡಿ ಕಲ್ಲಂಗಡಿ ನಾಶ ಮಾಡಿದ್ದಾರೆ. ಸುಮಾರು 70 ಸಾವಿರ ಮೌಲ್ಯದ ಕಲ್ಲಂಗಡಿ ನಾಶ ಮಾಡಿದ್ದಾರೆ. ಕಲ್ಲಂಗಡಿ ರಸ್ತೆಗೆ ಹಾಕಿ ತುಳಿದಿರುವ ಘಟನೆ ಏನಿದೆ? ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದ ಅಂಗರಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಆ ದುಷ್ಕರ್ಮಿಗಳನ್ನ ತಕ್ಷಣ ಸರ್ಕಾರ ಬಂಧಿಸದಿದ್ದರೆ. ಇದೇ ರೀತಿ ಇಂತಹ ಚಟುವಟಿಕೆಗಳನ್ನು ಮುಂದುವರಿಸಿದರೆ. ಇದರಿಂದಲೇ ಜೀವ ಹಾನಿಗಳು ಆಗುತಕ್ಕಂತಹದ್ದು. ಒಂದು ಸಮಾಜದ ನಡುವೆ ಈ ರೀತಿಯ ಆಕ್ರೋಶದ ಉಂಟು ಮಾಡಿ. ಇವತ್ತು ಇಂದು ಸಮಾಜದ ಹೊಟ್ಟೆ ಮೇಲೆ ಹೊಡಿತೀವಿ. ಸಮಾಜದ ಹೊಟ್ಟೆಯ ಮೇಲೆ ಹೊಡೆಯಲು ಹೊರಟಾಗ. ಯಾವುದೇ ಒಬ್ಬ ಮನುಷ್ಯ ಎಲ್ಲಿಯವರೆಗೆ ಸಹಿಸಲು ಸಾಧ್ಯ. ಅವರು ತಿರುಗಿ ಬಿದ್ದರೆ ಯಾವ ಸರ್ಕಾರಗಳು ಉಳಿಯಲು ಸಾಧ್ಯವಿಲ್ಲ. ಅಂತಹ ಅವಕಾಶ ನೀಡದೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಎಲ್ಲಾ ವರ್ಗ, ಸಮಾಜದ ಜನರು ನೆಮ್ಮದಿಯಿಂದ ಬದುಕುವ ಕೆಲಸ ಸರ್ಕಾರ ಮಾಡಬೇಕಿದೆ. ಸರ್ಕಾರ ನಿಷ್ಕ್ರಿಯವಾದ್ರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಅವಕಾಶ ಕಲ್ಪಿಸಬೇಡಿ ಎಂಬುದು ನನ್ನ ಆಗ್ರಹ ಎಂದರು.
ಇದನ್ನೂ ಓದಿ : BJP MLA : ನಾನು ಮುಖ್ಯಮಂತ್ರಿ ಕೆಳಗಿಳಿಸೋ ತಾಕತ್ತು ಇಟ್ಕೊಂಡಿನಿ : ಶಾಸಕ ಯತ್ನಾಳ್
ಶೋಭಾಯಾತ್ರೆ ಮಾಡೋದು ನಾನು ಬೇಡ ಅನ್ನಲ್ಲ. ಒಳ್ಳೆಯ ರೀತಿಯಲ್ಲಿ ಶೋಭಾಯಾತ್ರೆ ನಡೆಸಲಿ. ಶೋಭಾಯಾತ್ರೆ ಹೆಸರಿನಲ್ಲಿ ಸಾಮರಸ್ಯ ಕೆಡಿಸಬೇಡಿ. ಇವತ್ತು ರಾಮನಿಗೆ ಭಕ್ತಿಯನ್ನು ತೋರಿಸಬೇಕು. ರಾಮನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶೋಭಾಯಾತ್ರೆ ಹೆಸರಲ್ಲಿ ಇನ್ನೊಂದು ಸಮಾಜವನ್ನು ಉದ್ರೇಕಿಸಬೇಡಿ. ಅವರು ವಾಸಿಸುವ ಬೀದಿಗಳಲ್ಲಿ ಡಿಜೆ ಸೆಟ್, ಡ್ಯಾನ್ಸ್ ಮಾಡಬೇಡಿ. ಅಹಿತಕರ ವಾತಾವರಣ ನಿರ್ಮಾಣ ಮಾಡೋದು ನಿಲ್ಲಿಸಿ. ಬೇಕಿದ್ದರೆ ಮೆರವಣಿಗೆ ಅದ್ದೂರಿಯಾಗಿ ಮಾಡಿ. ರಾಮನ ಬಗ್ಗೆ ಭಕ್ತಿ ತೋರಿಸಿ ನಾನು ನಿಮ್ಮೊಂದಿಗೆ ಇದ್ದೇನೆ. ರಾಮನ ಹೆಸರಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.