ಮಂಡ್ಯ : ಇಲ್ಲಿಯವರೆಗೆ ಕೆತ್ತನೆ ಮಾಡಿರೋ ವಿಗ್ರಹ ಪ್ರತಿಷ್ಠಾಪನೆ ಆಗೋಗಿದೆ. ಅವುಗಳನ್ನು ಈಗ ನೀವು ಏನು ಮಾಡ್ತಿರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಸ್ಲಿಂರ ವಿಗ್ರಹ ವಿರೋಧ ಅಭಿಯಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೆಆರ್.ಪೇಟೆ ತಾಲೂಕಿನ ತಂಡೇಕೆರೆ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ(HD Kumaraswamy), ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿಗಳಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತಿದೆ. ಇತಿಹಾಸದ ಆಧಾರದ ಮೇಲೆ ವಿಗ್ರಹಗಳಿಗೆ ಪೂಜೆ ಮಾಡಿಕೊಂಡು ಬರಲಾಗಿದೆ. ಈಗ ಮುಸಲ್ಮಾನರು ಕೆತ್ತನೆ ಮಾಡಿರೊ ವಿಗ್ರಹಗಳ ಪೂಜೆ ಬೇಡ ಅಂದ್ರೆ ಹೇಗೆ? ಆ ರೀತಿ ಇದ್ರೆ ಆಗಲೇ  ಪ್ರತಿಭಟನೆ ಮಾಡಿ ಪೂಜೆ ನಿಲ್ಲಿಸಬೇಕಿತ್ತಲ್ಲವೇ. ಕಳೆದ ಎರಡು ತಿಂಗಳಿಂದ ಈ ರೀತಿಯ ವಾತವರಣ ನಿರ್ಮಾಣ ಮಾಡಿ ನೀವು ಧರ್ಮದ ಅಂಶಗಳನ್ನ ಜನರಿಗೆ ಬಿತ್ತರಿಸಬೇಕಾದವರು. ಈಗ ಯಾವುದೋ ಕಾರಣಕ್ಕೆ ಧರ್ಮ ಧರ್ಮಗಳನ್ನ ಕೊಂದು ಬದುಕಲಾಗಲ್ಲ. ನಮ್ಮ ಧರ್ಮದ ತಳಹದಿಯಲ್ಲಿ ಎಲ್ಲಾ ಧರ್ಮವೂ ಉಳಿಯಬೇಕು. ಬೇರೆ ಧರ್ಮವೂ ಉಳಿಯಬೇಕು ಅನ್ನೋದು ನನ್ನ ಆಶಯ. ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.


ಇದನ್ನೂ ಓದಿ : K Sudhakar : ನಾನೊಬ್ಬ ಸೆಕ್ಯುಲರ್ ರಾಜಕಾರಣಿ : ಸಚಿವ ಸುಧಾಕರ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.