ಕಣ್ಣೂರು (ಕೇರಳ): ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಆಗಿರುವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಇಲ್ಲಿಗೆ ಸಮೀಪದ ತಳಿಪರಂಬದ ಪುರಾಣ ಪ್ರಸಿದ್ಧ ಶ್ರೀ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು.


COMMERCIAL BREAK
SCROLL TO CONTINUE READING

ಖಾಸಗಿ ಕಾರ್ಯಕ್ರಮದ ನಿಮಿತ್ತ ಕಣ್ಣೂರಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿಗಳು, ಬೆಳಗ್ಗೆಯೇ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಕೆಲ ಹೊತ್ತು ದೈವ ಸನ್ನಿಧಾನದಲ್ಲಿ ಸಮಯ ಕಳೆದರು.


ಇದನ್ನೂ ಓದಿ: ಕಾಶ್ಮೀರ ಫೈಲ್ಸ್ ಮಾಡುವುದಾದರೆ ಲಖಿಂಪುರ್ ಫೈಲ್ಸ್ ಕೂಡ ನಿರ್ಮಾಣವಾಗಲಿ- ಅಖಿಲೇಶ್ ಯಾದವ್


ಪ್ರಶಾಂತ ವಾತಾವರಣದಲ್ಲಿ ಇರುವ ಈ ಆಲಯ, ನಮ್ಮ ದೇಶದ 108 ಪ್ರಾಚೀನ ಶಿವಾಲಯಗಳಲ್ಲಿ ಒಂದು, ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನೇ ಇಲ್ಲಿನ ಶ್ರೀ ರಾಜರಾಜೇಶ್ವರ ಸ್ವಾಮಿ ಅವರಿಗೆ ಪೂಜೆ ಸಲ್ಲಿಸಿದ್ದರು ಎಂಬ ಐತಿಹ್ಯವಿದೆ.ಇಂಥ ಪುಣ್ಯಸ್ಥಳದಲ್ಲಿ ಶಿವನ ದರುಶನ ಪಡೆದಿದ್ದು ನನ್ನ ಭಾಗ್ಯವೇ ಸರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.


ಇದನ್ನೂ ಓದಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಅಂಬೇಡ್ಕರ್‌ವಾದಿಗಳು ಸಮಾಜವಾದಿಗಳೊಂದಿಗೆ ಸೇರಬೇಕು: ಅಖಿಲೇಶ್ ಯಾದವ್


ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ್ ಅವರು ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು.ದೇವಳದ ಆಡಳಿತ ಮಂಡಳಿಯ ಮುಖ್ಯಸ್ಥರು, ಇತರೆ ಸದಸ್ಯರು, ಅಧಿಕಾರಿಗಳು ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ದೇವಳದ ಬಗ್ಗೆ ಮಾಹಿತಿ ನೀಡಿದರು.


ದೇವರ ದರ್ಶನ ಪಡೆದ ನಂತರ ಮಾಜಿ ಮುಖ್ಯಮಂತ್ರಿಗಳು ಸುವಿಶಾಲವಾದ ದೇವಳಕ್ಕೆ ಪ್ರದಕ್ಷಿಣೆ ಹಾಕಿದರು.ದೇವಾಲಯದ ನಿರ್ಮಾಣ ಶೈಲಿ, ಧಾರ್ಮಿಕ ವಿಧಿ ವಿಧಾನಗಳು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.