ಬೆಂಗಳೂರು: ಸಿಎಂ ಯಡಿಯೂರಪ್ಪ ಎಂಟನೇ ಬಜೆಟ್ ಮಂಡಿಸಿದ್ದಾರೆ. ಯಾವುದೇ ನಿರ್ದಿಷ್ಟ ಗುರಿ, ಕಾರಣ ಇಲ್ಲದಿರೋ ಬಜೆಟ್. ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಿಎಂ ಬಿಎಸ್​ವೈ ಬಜೆಟ್​ ಮಂಡನೆ ಮಾಡಿದ ಬಳಿಕ ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಡಾ.ಜಿ ಪರಮೇಶ್ವರ್(G Parameshwara), 71 ಸಾವಿರ ಕೋಟಿ ಸಾಲ ಮಾಡಿರೋದಾಗಿ ಘೋಷಣೆ ಮಾಡಿದ್ದಾರೆ. 2002ರಲ್ಲಿ ಫಿಸಿಕಲ್ ಆಯಕ್ಟ್​ ತಂದಿದ್ದರು. ಅವರ ಪ್ರಕಾರ ಶೇ.25ರಷ್ಟು ಮೇಲೆ ಹೋಗದಂತೆ ಸೂಚಿಸಲಾಗಿತ್ತು ಅದನ್ನ ಮೀರ ಶೇ.26ರಷ್ಟು ಸಾಲ ಪಡೆದಿದ್ದಾರೆ ಎಂದಿದ್ದಾರೆ.


Karnataka Budget 2021: ಕೃಷಿ, ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಿದ ಬಜೆಟ್


ಮುಂದಿನ ದಿನದಲ್ಲಿ ಕರ್ನಾಟಕದ ಆಯವ್ಯಯ ಕೆಟ್ಟ ಪರಿಸ್ಥಿತಿ ಬರಲಿದೆ. ಅಮೆಂಡ್ ಮಾಡಿ ಸರಿಸಮ ಮಾಡೋದಾಗಿ ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ ಇನ್ ಡಿಸಿಪ್ಲೀನ್ ಮಾಡಲು ಹೊರಟಿದ್ದಾರೆ. ಹಸಿರುಶಾಲು ಹಾಕಿ ಬಜೆಟ್(Budget) ಮಂಡಿಸುತ್ತಿದ್ದಾರೆ. ಆದರೆ, ರೈತರಿಗೆ ಅನುಕೂಲವಾಗೋ ಯಾವುದೇ ಯೋಜನೆ ಕಾಣುತ್ತಿಲ್ಲ. ಇಡೀ ದೇಶದಲ್ಲಿ ಕೃಷಿ ಅಮೇಂಡ್ಮೆಂಟ್ ವಿರೋಧಿಸುತ್ತಿದ್ದಾರೆ. ಕೃಷಿ, ನಿರಾವರಿಗೆ ಯಾವುದೇ ಯೋಜನೆ ಕಾಣುತ್ತಿಲ್ಲ ಎಂದರು.


Karnataka Budget 2021 :ಸಿದ್ದರಾಮಯ್ಯ ಕ್ಷೇತ್ರಕ್ಕೆ ಭರ್ಜರಿ ಅನುದಾನ ನೀಡಿದ ಸಿಎಂ


ಎರಡು ಸಮುದಾಯಕ್ಕೆ 500 ಕೋಟಿ ಕೊಡೋದಾಗಿ ಘೋಷಿಸಿದ್ದಾರೆ. ಅಂಬೇಡ್ಕರ್, ಜಗಜೀವನ್ ಸೇರಿದಂತೆ ಕೆಲ ಕಾರ್ಪೊರೇಷನ್​(Corporation)ಗಳಿಗೆ 500 ಕೋಟಿ ನೀಡಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಇದು ಘೋಷಿಸಬೇಕು. ಕಳೆದಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಬಿಡುಗಡೆ ಮಾಡೋದಾಗಿ ಹೇಳಿ, ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ದಾವೋಸ್​ಗೆ ತೆರಳಿ ಹೂಡಿಕೆದಾರರನ್ನ ಕರೆದುಕೊಂಡು ಬರೋದಾಗಿ ಹೇಳಿದರು. ಯಾರನ್ನೂ ಸಹ ಕರೆತಂದಿಲ್ಲ ಎಂದು ಮಾಜಿ ಸಚಿವ ಡಾ.ಜಿ ಪರಮೇಶ್ವರ್ ಅವರು ಸಿಎಂ ಬಿಎಸ್​ವೈ ಬಜೆಟ್​ ಅನ್ನು ವಿರೋಧಿಸಿದ್ದಾರೆ.


Karnataka Budget 2021: 'ಎಣ್ಣೆ ಪ್ರಿಯ'ರಿಗೆ ಸಿಹಿ ಸುದ್ದಿ: ಅಬಕಾರಿ ಸುಂಕ ಹೆಚ್ಚಳವಿಲ್ಲ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.