ಮಂಡ್ಯ : ಬಿಜೆಪಿಯವರು ರಾಜಕೀಯವಾಗಿ ತೀಟೆ ಮಾಡ್ತಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿಯವರು ಹೈಕೋರ್ಟ್ ನಿಂದ ಎಸಿಬಿ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮಳವಳ್ಳಿಯಲ್ಲಿ  ಸುದ್ದಿಗಾರರ ಜೊತೆ ಮಾತನಾಡಿದ ಚಲುವರಾಯಸ್ವಾಮಿ, ಈಗಾಗಲೇ ನಮ್ಮ ನಾಯಕ ಸಿದ್ದರಾಮಯ್ಯ ಸ್ವಾಗತ ಮಾಡಿದ್ದಾರೆ. ಹೈಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವತ್ತಿನ ಅನುಗುಣವಾಗಿ ಅನೇಕ ರಾಜ್ಯದಲ್ಲಿತ್ತು ನಾವು ಮಾಡಿದ್ದೇವೆ. ಐಪಿಎಸ್, ಐಎಎಸ್, ಅಧಿಕಾರಿಗಳನ್ನ ಸಂವಿಧಾನ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಬಿಡಬೇಕು. ಅವರನ್ನ ಬಲವಂತವಾಗಿ ತಪ್ಪು ದಾರಿಗೆ ಎಳೆಯುವುದು ಅರಿಯಲ್ಲ. ಇದು ದೇಶದ ದುರಾದೃಷ್ಟ. ಎಸಿಬಿಯನ್ನ ನಾವು ಯಾರನ್ನೊ ರಕ್ಷಣೆ ಮಾಡಲು ಮಾಡಿದ್ದಲ್ಲ. ಎಸಿಬಿ ಸ್ವಾತಂತ್ರವಾಗಿ ನಿರ್ವಹಣೆ ಮಾಡಬೇಕು ಅಂತನೇ ಮಾಡಿದ್ದು. ಅವಲೋಕನ ಮಾಡಿ ಅಂತಿಮವಾಗಿ ರದ್ದು ಪಡಿಸಿದೆ. ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ್ದಾರೆ ಸ್ವಾಗತ. ನಾವು ಕೂಡ ಸ್ವಾಗತ ಮಾಡ್ತೇವೆ ಎಂದರು. 


ಇದನ್ನೂ ಓದಿ : Cabinet meeting approves : ಶಿಕ್ಷಕರ ನೇಮಕಾತಿ ವಯೋಮಿತಿ ಏರಿಕೆ : ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ 


ಎಸಿಬಿ ರದ್ದು ಕಾಂಗ್ರೆಸ್ ವಿರುದ್ದ ಬಿಜೆಪಿ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಅವರ ಆದೇಶ ನಮ್ಮ ಆದೇಶವನ್ನು ಅಣಕಿಸುವುದು ಬಿಟ್ಟು. ನೆನ್ನೆ ಸ್ವಾಗತ ಮಾಡಬೇಕಿತ್ತು, ಸಭೆ ಯಾಕೆ ಮಾಡ್ತಿದ್ದಾರೆ. ಮೀಟಿಂಗ್ ಮಾಡಿ ತೀರ್ಮಾನ ತೆಗೆದುಕೊಳ್ಳ್ತಿದ್ದಾರೆ. ಆಗಿದ್ರೆ ನೇರವಾಗಿ ಬೊಮ್ಮಯಿ ಹೇಳಬಹುದಿತ್ತು. ಪೂರಕವಾಗಿ ಇರ್ತಿವಿ ಅಂತ ಹೇಳಿಲ್ಲ. ರಾಜಕೀಯವಾಗಿ ತೀಟೆ ಮಾಡುವುದಕ್ಕೆ ಏನು ಬೇಕು ಅದನ್ನ ಹೇಳ್ತಾರೆ ಎಂದು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.