ಬೆಳಗಾವಿ : ಮಂತ್ರಿ ಆಗ್ತಿವೂ, ಬಿಡ್ತಿವೊ ಬೇರೆ ವಿಚಾರ, ಸಧ್ಯ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗಲಿ ಬಿಡಲಿ, ನನಗೆ ಪಕ್ಷ ಸಂಘಟನೆ ಮುಖ್ಯ. ಇದರಿಂದ ಬೆಳಗಾವಿ ಗ್ರಾಮೀಣದಿಂದ ಪ್ರಾರಂಭ ಮಾಡಲಾಗಿದೆ. ಜನಸಾಮಾನ್ಯರ ಪ್ರಾಮಾಣಿಕ ಕೆಲವನ್ನು ಮಾಡಬೇಕು. ಹಣದಿಂದ ಚುನಾವಣೆಯಲ್ಲಿ ಆಯ್ಕೆ ಆಗುತ್ತೇನೆ ಎಂದರೆ ಆಗುವುದಿಲ್ಲ, ಎಲ್ಲವೂ ದುಡ್ಡಿನ ಮೇಲೆ ಏನು ಆಗುವುದಿಲ್ಲ, ಕೆಲವು ಕಡೆ ಜಾತಿ ಬೆರೆ ಮಾಡುವುದು, ಮರಾಠಿ ಜನರ ಹತ್ತಿರ ಬಂದು ಮೈ ಇನ್ಸಾನ್ ಹೋ ಎನ್ನುವುದು ಇದನ್ನೆಲ್ಲ ಜನರು ನೋಡುತ್ತಿದ್ದಾರೆ. ಜನರು ತಕ್ಕ ಉತ್ತರ ಕೊಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯುದ್ದ ರಣತಂತ್ರ ಏನು ಎಂಬುದು ಹೇಳುವುದಿಲ್ಲ. ಚುನಾವಣೆಯಲ್ಲಿ ನನ್ನ ಶಕ್ತಿ ತೊರಿಸುತ್ತೇನೆ.


ಇದನ್ನೂ ಓದಿ : ದಿವ್ಯಾಂಗರಿಗೆ 1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ, ರಾಜ್ಯದಿಂದ ಚಾಮರಾಜನಗರ ಆಯ್ಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.