IMA ಹಗರಣ: ರೋಷನ್ ಬೇಗ್‌ಗೆ ಮುಟ್ಟಿದ CBI ಶಾಕ್!
IMA ಬಹುಕೋಟಿ ವಂಚನೆ ಪ್ರಕರಣ ರೋಷನ್ ಬೇಗ್ ಗೆ ಮತ್ತೆ ಸಿಬಿಐ ಬಿಸಿ
ಬೆಂಗಳೂರು: IMA ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಶಾಸಕ ರೋಷನ್ ಬೇಗ್ ಗೆ ಮತ್ತೆ ಸಿಬಿಐ ಬಿಸಿ ಮುಟ್ಟಿಸಿದೆ. ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಇಂದು ಬೆಳಗಿನಿಂದಲೇ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ನಗರದಲ್ಲಿರುವ ಸಿಬಿಐ( ಕಚೇರಿ(CBI Office)ಯಲ್ಲಿ ರೋಷನ್ ಬೇಗ್ ವಿಚಾರಣೆ ನಡೆಯುತ್ತಿದೆ. IMA ನಿಂದ ರೋಷನ್ ಬೇಗ್‌ಗೆ ಹಣ ವರ್ಗಾವಣೆಯಾದ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.
ಆತ್ಮ ನಿರ್ಭರರಾಗಬೇಕೇ? ಇಗೋ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ..! ಈಗಲೇ ಅರ್ಜಿ ಸಲ್ಲಿಸಿ
IMA ಕಂಪನಿ ಮತ್ತು ಮನ್ಸೂರ್ ಖಾನ್‌ನಿಂದ ರೋಷನ್ ಬೇಗ್‌ಗೆ ಹಣ ಪಾವತಿಯಾಗಿರುವ ಆರೋಪವಿದೆ. IMA ಹಗರಣದ ಕುರಿತು ಫೋರೆನ್ಸಿಕ್ ಆಡಿಟ್ ನಡೆಸಿದ ವೇಳೆ, ರೋಷನ್ ಬೇಗ್ ಅವರಿಗೆ ಹಣ ಪಾವತಿಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಸಿಬಿಐ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಿಚಾರಣೆಗೆ ಕರೆಸಿದ್ದರು.
ಮುಂದಿನ ಮೂರು ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ನಿಂದ 'ಭರ್ಜರಿ ಪ್ಲಾನ್'!
IMA ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್‌ನಿಂದ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ. ಹಣವಷ್ಟೇ ಅಲ್ಲ, ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ.