ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುಡುಗು
ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು
ಚನ್ನಪಟ್ಟಣ: ಯಾವ ವೆಂಟಿಲೇಟರ್ ಕೂಡ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿ ಡಿಕೆ ಸಹೋದರರ ಹೆಸರು ಹೇಳದೆ ಗುಡುಗಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು.
ಇದನ್ನೂ ಓದಿ: Businessman bankrupt:ಜೂಜಾಟ & ಹುಡುಗಿಯರ ಶೋಕಿಯಿಂದ ಭಿಕ್ಷುಕನಾದ ಬೆಂಗಳೂರಿನ 70 ಲಾರಿಗಳ ಮಾಲೀಕ!
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಕೆ ಸಹೋದರರನ್ನು ಅಪೂರ್ವ ಸಹೋದರರು ಎಂದು ಟಾಂಗ್ ಕೊಟ್ಟು, ಆರು ತಿಂಗಳಿಂದ ಅಣಕದ ಮಾತು. ಯಾರು ಅಭ್ಯರ್ಥಿ ಅಂದರೆ ನಾನೇ.. ನಾನೇ...ನಾನೇ.. ನಾನೇ.. ಆ ನಾನೇ ಎನ್ನುತ್ತಿದ್ದವರು ಎಲ್ಲಿ ಹೋದರು ಈಗ? ಚನ್ನಪಟ್ಟಣಕ್ಕೆ ನಿಲ್ಲುವ ನಾನೇ.. ಇವಾಗ ಎಲ್ಲಿ ಹೋದಿರಿ? ಈಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ನಾನು ಅವರ ಹೆಸರೇಳಲ್ಲ. ಅವರ ಹೆಸರು ಹೇಳಿದರೆ ದೇವೇಗೌಡರು ವೆಂಟಿಲೇಟರ್ ನಲ್ಲಿ ಬಂದು ಭಾಷಣ ಮಾಡೋಕೆ ಬರ್ತಾರೆ ಎಂದು ಬಹಳ ಲಘುವಾಗಿ ಮಾತಾಡಿದರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ" ಎಂದರು.
"ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಂತೆ.. ಹಾಗಂತೆ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್ ಮೆನ್ ಹೇಳುತ್ತಾರೆ. ನಾನು ಪ್ರಚಾರಕ್ಕೆ ಬರುತ್ತೇನೆ. ಹನ್ನೊಂದನೇ ತಾರೀಖಿನವರೆಗೂ ಪ್ರಚಾರಕ್ಕೆ ಬರುತ್ತೇನೆ" ಎಂದು ಹೇಳಿದರು.
ಮೋದಿ ಹಾಗೂ ನನ್ನ ಸಂಬಂಧ ಚೆನ್ನಾಗಿದೆ. ಮುಂದೆಯೂ ಚೆನ್ನಾಗಿರುತ್ತದೆ. ರಾಜಕಾರಣಕ್ಕೆ ಮೀರಿದ ಸಂಬಂಧ ನಮ್ಮದು. ಆದರೆ, ಕಾಂಗ್ರೆಸ್ ನವರು ಹೇಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಕುಟುಂಬ ಬಿಟ್ಟರೆ ಮಾತನಾಡಲು ಬೇರೆ ವಿಷಯ ಇಲ್ಲ. ದೇವೇಗೌಡರೇ.. ಯಾಕೆ ನೀವು ನಿಮ್ಮ ಮೊಮ್ಮಗನನ್ನು ನಿಲ್ಲಿಸಿದ್ದೀರಿ ಎಂದು ಯಾರಾದರೂ ಕೇಳಬಹುದು. ಯಾವ ಕನ್ವರ್ಟಡ್ ಕಾಂಗ್ರೆಸ್ ನಾಯಕ ಇದ್ದಾರೋ, ಅವರನ್ನು ಬಿಜೆಪಿಯಿಂದಲಾದರೂ ನಿಲ್ಲಿ, ಜೆಡಿಎಸ್ ನಿಂದಲಾದರೂ ನಿಲ್ಲಿ ಎಂದು ಹೇಳಿದ್ದೇವು. ನಮಗೆ, ಬಿಜಿಪಿಯವರಿಗೆ ಮೋಸ ಮಾಡಿ ಹೋದರು. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಹೀಗಾಗಿ ಈ ಕುತಂತ್ರಕ್ಕೆ ಸೆಡ್ಡು ಹೊಡೆಯಲು ಸ್ಥಳೀಯ ಮುಖಂಡರು ಎಲ್ಲರೂ ಸೇರಿ ನಿಖಿಲ್ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು ಎಂದು ಹೇಳಿದರು.
ಯಾರು ಕಾಂಗ್ರೆಸ್ ನಿಂದ ನಿಂತಿದ್ದಾರೋ ಅವರನ್ನು, ಬೇಡಪ್ಪ ನೀನು ಜೆಡಿಎಸ್ ನಿಂದ ನಿಂತ್ಕೋ ಎಂದು ಹೇಳಿದೆವು. ಅಲ್ಲದೇ ಅವರ ಪಕ್ಷದ ಅಧ್ಯಕ್ಷ ನಡ್ಡಾ ಅವರು ಕೂಡ ಬಿಜೆಪಿಯಿಂದ ಸ್ಪರ್ಧೆಗೆ ಸೂಚಿಸಿದರು. ಆ ಕನ್ವರ್ಟರ್ಡ್ ಕಾಂಗ್ರೆಸ್ ನಾಯಕನಿಗೆ.. ನೀನು ಪಕ್ಷಕ್ಕೆ ದ್ರೋಹ ಮಾಡಬೇಡ, ನೀನು ಪಕ್ಷದಿಂದಲೇ ನಿಲ್ಲುವಂತೆ ನಡ್ಡಾ ಹೇಳಿದರು. ಅವರ ಮಾತನ್ನು ಕೂಡ ತಿರಸ್ಕಾರ ಮಾಡಿದರು ಎಂದು ದೇವೇಗೌಡರು ಹೇಳಿದರು.
ಮುಖ್ಯಮಂತ್ರಿ ಗರ್ವದ ಸೊಕ್ಕನ್ನು ಮುರಿಯಬೇಕು:
ಜೆ.ಬ್ಯಾಡರಹಳ್ಳಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಮುಖ್ಯಮಂತ್ರಿಗೆ ಇರುವ ಗರ್ವದ ಸೊಕ್ಕನ್ನು ಮುರಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಕಾಂಗ್ರೆಸ್ ನಾಯಕರು ಜನರಿಗೆ ಬರೀ ಸುಳ್ಳು ಹೇಳುತ್ತಿದ್ದಾರೆ. ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಎತ್ತಿನಹೊಳೆ ನೀರು ಕೋಲಾರಕ್ಕೆ ಬಂದರೆ ನಾನು ಇವರಿಗೆ ದೀರ್ಘದಂಡವಾಗಿ ನಮಸ್ಕಾರ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಲೇವಡಿ ಮಾಡಿದರು.
ಈ ಮಹಾನುಭಾವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ತರುತ್ತಾರಂತೆ? ಹೇಗೆ ತರುತ್ತಾರೆ? ಬರೀ ಸುಳ್ಳುಪೊಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ