ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಶನಿವಾರ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಹೃದಯದ ಲ್ಯಾಪ್ರೋಸ್ಕೋಪಿಕ್ ಕೀ ಹೋಲ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಇಂದು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕುಮಾರಸ್ವಾಮಿ ಭೇಟಿ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಹೆಚ್ಡಿಡಿ ಆಪರೇಷನ್ ಆಗಿ 48 ಗಂಟೆ ಆಗಿದೆ. ವೈದ್ಯರು ಹೇಳುವ ತನಕ ಯಾರೂ ಭೇಟಿ ಆಗೋದು ಬೇಡ ಎಂದು ತಿಳಿಸಿದರು. ಕುಮಾರಸ್ವಾಮಿ ಸಹಜವಾಗಿ ಹೊರಗಡೆ ವಿಚಾರ ಕೇಳುತ್ತಾರೆ, ಅದ್ಯಾವುದು ಈಗ ಬೇಡ, ಹೊರಗಡೆ ಎಲ್ಲ ವಿಚಾರ ಮರೆತುಬಿಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೇನೆ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು. 


ಪ್ರತಿನಿತ್ಯ ನಾನು ವೈದ್ಯರ ಸಂಪರ್ಕದಲ್ಲಿದ್ದೇನೆ, ಆರೋಗ್ಯದಲ್ಲಿ ತುಂಬಾ ಸುಧಾರಣೆ ಆಗಿದೆ. ಇನ್ಫೆಕ್ಷನ್ ಬಗ್ಗೆ ಸ್ವಲ್ಪ ಹೆದರುತ್ತಾರೆ ಎಂದು ತಿಳಿಸಿದ ದೇವೇಗೌಡರು ವೈದ್ಯರು ಕುಮಾರಸ್ವಾಮಿಯನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಅವರಿಗೆ ಹೇಗೆ ಧನ್ಯವಾದ ಹೇಳಬೇಕು ಎಂದು ಗೊತ್ತಿಲ್ಲ. ಇವತ್ತು ಅಥವಾ ನಾಳೆ ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಿದ್ದಾರೆ ಎಂದು ತಿಳಿಸಿದರು.